ಹಾಸನದ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಗೆಲುವು ಸಚಿವ ಎ.ಮಂಜು ವಿಶ್ವಾಸ
ಮೈಸೂರು

ಹಾಸನದ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್‍ಗೆ ಗೆಲುವು ಸಚಿವ ಎ.ಮಂಜು ವಿಶ್ವಾಸ

April 27, 2018

ಮೈಸೂರು: ಹೊಳೆನರಸೀಪುರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ, ಜೆಡಿಎಸ್ ವಿರುದ್ಧ ಮಾಡಿರುವ ಆರೋಪವನ್ನು ಸಮರ್ಥಿಸಿಕೊಂಡ ಸಚಿವ ಎ.ಮಂಜು, ನಾನೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲ ಲ್ಲಿರುವ ಸುತ್ತೂರು ಮಠದಲ್ಲಿ ಶ್ರೀಗಳಿಂದ ಆಶೀರ್ವಾದ ಪಡೆದು, ಕೆಲಕಾಲ ಮಾತು ಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ವಾಹನ ಗಳಲ್ಲಿ ಮದ್ಯ ಸಾಗಿಸುತ್ತಾರೆಂದು ಮಂಜೇ ಗೌಡ ಮಾಡಿರುವ ಆರೋಪದಲ್ಲಿ ಸತ್ಯ ವಿದೆ. ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ಅವರ ಬೀಗ ರಾದ ಚಂದ್ರಶೇಖರ್, ಹಾಲು ಒಕ್ಕೂಟ ದಲ್ಲಿ ಅಧಿಕಾರಿಯಾಗಿದ್ದಾರೆ. ಅವರ ಸಹ ಕಾರದಿಂದ ಜಿಲ್ಲೆಯಾದ್ಯಂತ ಈ ರೀತಿಯ ಅಕ್ರಮ ಮಾಡುತ್ತಿದ್ದಾರೆಂದು ನಾನೂ ಚುನಾವಣಾ ಆಯೋಗಕ್ಕೆ ದೂರು ನೀಡಿ ದ್ದೇನೆ. ಅವರ ಶಕ್ತಿಯೇ ಡೈರಿ. ಅದಿಲ್ಲವಾ ದರೆ ಅವರಿಗೆ ರಾಜಕಾರಣ ಮಾಡುವು ದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ಹಾಸನದಲ್ಲಿ 89ರ ಇತಿಹಾಸ: ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಲಿದೆ ಎಂಬ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿದ ಮಂಜು, ರೇವಣ್ಣನವರನ್ನೂ ಒಳಗೊಂಡಂತೆ ಜೆಡಿಎಸ್‍ನ ಎಲ್ಲಾ ಅಭ್ಯರ್ಥಿಗಳ ಸ್ಥಿತಿ ಏನಾಗುತ್ತದೆ ಎಂಬುದು ಮೇ 15ರಂದು ತಿಳಿಯುತ್ತದೆ. 1989ರಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದ್ದ ಇತಿಹಾಸ ಈ ಬಾರಿ ಮತ್ತೊಮ್ಮೆ ಮರುಕಳಿಸುತ್ತದೆ. ಪಾರ್ಲಿಮೆಂಟರಿ ಕ್ಷೇತ್ರಕ್ಕೆ ಒಳಪಡುವ ಕಡೂರು ಕ್ಷೇತ್ರ ಸೇರಿದಂತೆ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್‍ಗೆ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಳೇ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸುವುದರೊಂದಿಗೆ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪರಿಣಾಮ ರಾಜ್ಯದ ಜನ ನಮ್ಮ ಕೈ ಹಿಡಿಯುತ್ತಾರೆ. ಸ್ವಕ್ಷೇತ್ರ ಅರಕಲಗೂಡಿನಲ್ಲೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ದರಿಂದ ಕ್ಷೇತ್ರದ ಜನ ಮತ್ತೊಮ್ಮೆ ನನ್ನ ಕೈ ಹಿಡಿಯುತ್ತಾರೆ ಎಂದ ಅವರು, ಕ್ಷೇತ್ರದ 6 ಜಿಪಂ ಸದಸ್ಯರಲ್ಲಿ ಇಬ್ಬರು ಕುರುಬ ಸಮುದಾಯದವರು. ಅರಕಲಗೂಡು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನೂ ನೀಡಲಾಗಿತ್ತು. ಎಪಿ ಎಂಸಿ ಅಧ್ಯಕ್ಷರೂ ಅದೇ ಸಮುದಾಯ ದವರು. ಹೀಗಿದ್ದ ಮೇಲೆ ಕುರುಬ ಸಮುದಾಯದವರನ್ನು ರಾಜಕೀಯವಾಗಿ ತುಳಿಯುತ್ತಾರೆ ಎಂಬ ಕೆಲವರ ಆರೋಪ ದಲ್ಲಿ ಹುರುಳಿಲ್ಲ. ಜನರಿಗೆ ಎಲ್ಲವೂ ತಿಳಿದಿದೆ ಎಂದು ಹೇಳಿದರು.

ಇನ್ನು ಜಿಲ್ಲಾಧಿಕಾರಿಯಾಗಿದ್ದ ರೋಹಿಣ ಸಿಂಧೂರಿ ವರ್ಗಾವಣೆ ಪ್ರಹಸನ ಪ್ರಕ ರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎ.ಮಂಜು, ವರ್ಗಾವಣೆಯನ್ನು ಪ್ರಶ್ನಿಸಿ, ತಡೆಯಾಜ್ಞೆ ಕೋರಿರುವುದು ಉದ್ದೇಶ ಪೂರ್ವಕವಾಗಿದೆ. ಅಥವಾ ಇದರ ಹಿಂದೆ ಯಾರದೋ ಒತ್ತಡವಿದೆ ಎಂದು ನಾನು ಹೇಳುವುದಿಲ್ಲ. ಕಾನೂನು ಅರಿ ವಿಲ್ಲದೆ ಹೀಗೆ ಮಾಡಿರಬಹುದು ಎಂದರು.

ಹಾಸನ ಜಿಲ್ಲೆಯ ರಾಜಕೀಯ ವಲಯದಲ್ಲಿ ಬದ್ಧ ವೈರಿಗಳಂತೆ ಬಿಂಬಿತ ವಾಗಿರುವ ಸಚಿವ ಎ.ಮಂಜು ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಏಕಕಾಲದಲ್ಲಿ ಮೈಸೂರಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು.

ಮೊದಲಿಗೆ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದ ರೇವಣ್ಣ, ಶ್ರೀಗಳ ಆಣತಿಯಂತೆ ಪ್ರಸಾದ ಸ್ವೀಕರಿಸಲು ಅವರೊಂದಿಗೆ ತೆರಳಿದರು. ಇದಾದ ಕ್ಷಣಾರ್ಧ ದಲ್ಲೇ ಎ.ಮಂಜು, ಮಠದ ಒಳಪ್ರಾಂಗಣಕ್ಕೆ ಬಂದು, ನೆಲದ ಮೇಲೆ ಕುಳಿತು, ಶ್ರೀಗಳ ಬರುವಿಕೆಗೆ ಕಾದು ಕುಳಿತಿದ್ದರು. ಒಂದೆರಡು ನಿಮಿಷದಲ್ಲಿ ಶ್ರೀಗಳು ಆಗಮಿಸಿ, ಮಂಜುರನ್ನು ಆಶೀರ್ವದಿಸಿ, ಕೆಲಕಾಲ ಮಾತುಕತೆ ನಡೆಸಿದರು. ಆ ವೇಳೆ ಪ್ರಸಾದ ಸ್ವೀಕರಿಸಿ ರೇವಣ್ಣ ಹೊರಬಂದರು. ಹೀಗೆ ಕಾಕತಾಳೀಯವೆಂಬಂತೆ ರಾಜಕೀಯ ಬದ್ಧ ವೈರಿಗಳು ಒಂದೇ ಸಮಯಕ್ಕೆ ಮಠಕ್ಕೆ ಬಂದರೂ, ಮುಖಾ ಮುಖಿಯಾಗುವ ಪ್ರಸಂಗ ಎದುರಾಗಲಿಲ್ಲ. ಅರಕಲಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ಎ.ಮಂಜು ಹಾಗೂ ಹೊಳೆನರಸೀಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸ್ಪರ್ಧಿಸುತ್ತಿದ್ದಾರೆ.

Translate »