ಹಾಸನ, ಜ.2- ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ತಾಲೂಕುಗಳ ಆನೆ ಹಾವಳಿ ಪೀಡಿತ ಪ್ರದೇಶಗಳ ಬಾಧಿತ ಮಕ್ಕಳ ಕಲಿಕೆಗೆ ಎರಡು ಹೊಸ ಸುವ್ಯವಸ್ಥಿತ ವಸತಿ ಶಾಲೆ ಪ್ರಾರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೆಲವು ಇಲಾಖೆಗಳ ಪ್ರಗತಿ ಹಾಗೂ ಯೋಜನಾ ಅನುಷ್ಠಾನ ಕುರಿತು ಪರಿಶೀ ಲನಾ ಸಭೆ ನಡೆಸಿದ ಅವರು, ಮಲೆನಾಡು ಪ್ರದೇಶದಲ್ಲಿ ನಿರಂತರ ಆನೆ ಹಾವಳಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ನಿವಾ ರಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಬಾಲ ಕರ ಹಾಗೂ ಬಾಲಕಿಯರ ಎರಡು ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಲು ಚಿಂತಿಸಲಾಗಿದೆ ಎಂದರು.
ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿ 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ಮತ್ತು ವಸತಿ ಊಟೋಪಚಾರ ಒದಗಿಸುವ ಶಾಲೆಗಳ ಪ್ರಾರಂಭಕ್ಕೆ ವಿವರ ವಾದ ವರದಿ ಸಲ್ಲಿಸುವಂತೆ ಅಪರ ಜಿಲ್ಲಾಧಿ ಕಾರಿ ಎಂ.ಎಲ್.ವೈಶಾಲಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂಬಾಬು ಅವರಿಗೆ ಸಚಿವ ರೇವಣ್ಣ ಸೂಚನೆ ನೀಡಿದರು.
ಎತ್ತಿನಹೊಳೆ ಯೋಜನೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಎರಡು ಉಪವಿಭಾಗಗಳಿಗೆ ಇಬ್ಬರು ಪ್ರತ್ಯೇಕ ಎ.ಡಿ.ಎಲ್.ಆರ್‍ಗಳು ಹಾಗೂ ಸರ್ವೆ ಸೂಪರ್ ವೈಸರ್‍ಗಳನ್ನು ನೇಮಿಸುವ ಅಗತ್ಯವಿದ್ದು, ಅದಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಸಚಿವರು ವಿಶೇಷ ಭೂಸ್ವಾಧೀನ ಅಧಿಕಾರಿ ಗಳಾದ ಗಿರೀಶ್ ನಂದನ್ ಮತ್ತು ಶ್ರೀನಿವಾಸ ಗೌಡ ಅವರಿಗೆ ನಿರ್ದೇಶನ ನೀಡಿದರು.
ಹೇಮಾವತಿ ಯೋಜನಾ ನಿರಾಶ್ರಿತರಿಗೆ ಸೂಕ್ತ ಪುನರ್‍ವಸತಿ ಕಲ್ಪಿಸಿ ಜೊತೆಗೆ ಯಾರ್ಯಾರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕೊಂಡಿದ್ದಾರೆ ಅವರಿಗೆ ನಿಯಮಾನುಸಾರ ಹಕ್ಕು ಪತ್ರ ವಿತರಿಸಿ. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಹೇಳಿದರು.
ಉದ್ದೇಶಿತ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡ ನಿಮಾರ್ಣ ಸ್ಥಳದಲ್ಲಿ ಮಾತ್ರ ಮರ ಗಳನ್ನು ತೆರವು ಮಾಡಿ. ಉಳಿದ ಪ್ರದೇಶ ದಲ್ಲಿ ಇನ್ನಷ್ಟು ಗಿಡ ಮರಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸಿ, ಅದೇ ರೀತಿ ರಸ್ತೆ ವಿಸ್ತರಣೆ ಕಾಮಗಾರಿಗಳಿಗೆ ಅಗತ್ಯ ವಿರು ವೆಡೆ ಮರಗಳನ್ನು ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಿ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಕಾಮ ಗಾರಿಗಳಿಗೆ ಮರಳು ಲಭ್ಯವಾಗುತ್ತಿಲ್ಲ. ಶೀಘ್ರವೇ ಸಮಸ್ಯೆ ಬಗೆಹರಿಯಬೇಕು. ನಿಯಮಾ ನುಸಾರ ದರ ನಿಗದಿ ಮಾಡಿ ಮರಳು ವಿತ ರಣೆ ಪ್ರಾರಂಭಿಸಬೇಕು ಎಂದು ಸಚಿವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಆಲೂರು, ಸಕಲೇಶಪುರ ತಾಲೂಕುಗಳ ಆನೆ ಹಾವಳಿ, ಎತ್ತಿನಹೊಳೆ ಯೋಜನೆ ಅನು ಷ್ಠಾನದಿಂದ ಬಾಧಿತರಾದವರಿಗೆ ಕುಂದು ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೆಚ್ಚುವರಿ ಪಡಿತರ ಕಾರ್ಡ್ ಹೊಂದಿ ರುವ ನ್ಯಾಯಬೆಲೆ ಅಂಗಡಿಗಳನ್ನು ವಿಂಗ ಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ, ಮಲೆನಾಡು ಪ್ರದೇಶದಲ್ಲಿ ಕಡಿಮೆ ಕಾರ್ಡ್‍ದಾರರಿದ್ದರೂ, ಸಮೀಪದಲ್ಲಿ ಪಡಿ ತರ ಧಾನ್ಯಗಳು ದೊರೆಯುವಂತೆ ಸೌಲಭ್ಯ ಕಲ್ಪಿಸಿ ಕಾರ್ಡ್ ವಿತರಣೆಯಲ್ಲಾಗುತ್ತಿರುವ ವಿಳಂಬ ಮತ್ತು ಲೋಪಗಳನ್ನು ಸರಿಪಡಿಸಿ ಎಂದು ಸಚಿವರು ಆಹಾರ ನಾಗರಿಕ ಸರ ಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲ ಕೃಷ್ಣ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಡಿ.ಎಫ್.ಜೆ ಶಿವರಾಂಬಾಬು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಾದ ಸವಿತ, ಲೋಕೋ ಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮಂಜು ಇನ್ನಿತರರಿದ್ದರು.