ಬೃಹತ್ ಉದ್ಯೋಗ ಮೇಳಕ್ಕೆ ಸಚಿವ ರೇವಣ್ಣ ಚಾಲನೆ
ಹಾಸನ

ಬೃಹತ್ ಉದ್ಯೋಗ ಮೇಳಕ್ಕೆ ಸಚಿವ ರೇವಣ್ಣ ಚಾಲನೆ

February 24, 2019

120 ಕಂಪನಿ ಭಾಗಿ, ಮೊದಲ ದಿನವೇ 12 ಸಾವಿರ ಉದ್ಯೋಗ ಆಕಾಂಕ್ಷಿಗಳ ನೋಂದಣಿ
ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕೌಶಲ್ಯ ಮಿಷನ್, ಕೈಗಾ ರಿಕಾ ತರಬೇತಿ ಮತ್ತು ಉದ್ಯೋಗ ಇಲಾ ಖೆಯಿಂದ ಎರಡು ದಿನಗಳ ಕಾಲ ಏರ್ಪ ಡಿಸಲಾಗಿರುವ ಬೃಹತ್ ಉದ್ಯೋಗ ಮೇಳಕ್ಕೆ ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಉದ್ಯೋಗ ಮೇಳಗಳಲ್ಲಿ 120 ವಿವಿಧ ಕಂಪನಿಗಳು ಬಂದಿದ್ದು, ಸುಮಾರು 12 ಸಾವಿರ ಜನ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದಾರೆ. ಉದ್ಯೋಗ ಬಯಸಿ ಚಿಕ್ಕಮಗಳೂರಿನಿಂದ ಇಲ್ಲಿಗೆ ಬಂದವರಿಗೆ ಬಸ್ ಸೌಲಭ್ಯ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಹಿಮತ್‍ಸಿಂಗ್ ಕಂಪನಿಯವರು 500 ಜನರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳು ವುದಾಗಿ ಹೇಳಿದ್ದಾರೆ. ಬಡವರು, ಅಂಗ ವಿಕಲರು ಇರಬಹುದು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು. ಇಂದು ಭಾನು ವಾರ ಅಂಗವಿಕಲರಿಗಾಗಿಯೇ 85 ಕಂಪನಿ ಗಳು ಭಾಗವಹಿಸುತ್ತಿದೆ. ಶನಿವಾರ ಒಂದು ದಿನಕ್ಕೆ 10 ಸಾವಿರಕ್ಕೂ ಹೆಚ್ಚಿನ ನೋಂದಣಿ ಆಗುತ್ತದೆ. ಉದ್ಯೋಗ ಮೇಳದ 5 ಕೌಂಟರಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಿ ಕೊಳ್ಳಲು ನೇಮಿಸಲಾಗುವುದು ಎಂದರು.

ಕಾವೇರಿ ನೀರಿನ ಹೋರಾಟದಲ್ಲಿ ಪ್ರಕರಣ ರದ್ದು ಮಾಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಿಲ್ಲಾಧಿ ಕಾರಿ ವರ್ಗವಣೆ ಸಾಮಾನ್ಯವಾಗಿದ್ದು, ಯಾವ ಡಿಸಿ ಬಂದರೇ ನಮಗೆನೂ ಚುನಾ ವಣೆ ಹತ್ತಿರ ಇದ್ದು, ವರ್ಗಾವಣೆ ಆದರೆ ನಾವೇನು ಮಾಡುವುದಕ್ಕೆ ಆಗುತ್ತದೆ. ಜಿಪಂ ಸಿಇಓ ಪುಟ್ಟಸ್ವಾಮಿ ವರ್ಗಾವಣೆ ಯಾಗಿದ್ದಾರೆ. ಅವರ ಜಾಗಕ್ಕೆ ಬೇರೆಯ ವರು ಬರುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಾದ ಇನ್ಪೋಸಿಸ್ಸ್, ಐಬಿಎಂ, ವಿಪ್ರೋ, ಅಸೆಂ ಚರ್ ಲಿಮಿಟೆಡ್, ಜೆಎಲ್‍ಎಲ್ ಪ್ರೈ.ಲಿ., ಗೋಲ್ಡನ್ ಗೇಟ್, ಪ್ರಾರ್ಪಟೀಸ್, ಅಶೋಕ ಲೈಲೆನ್ಡ್, ಹಾಸನದ ಜಾಕಿ, ಹಿಂಮತ್‍ಸಿಂಗ್, ಗೋಕುಲ್‍ದಾಸ್, ಪ್ರಿಕಾಟ್ ಮೆರಿಡಿಯನ್, ಶಾಯಿ ಎಕ್ಸ್ ಪೋರ್ಟ್ ಹಾಗೂ ಮೈಸೂರಿನ ಹೆಚ್ ಜಿಎಸ್, ಎಲ್ ಅಂಡ್ ಟಿ, ಗ್ರಾಸ್ ರೋಟ್, ನಡ್ಜ ಫೌಂಡೇಶನ್ ಇನ್ನೂ ಮುಂತಾದ ನೂರಾರು ಹೆಸರಾಂತ ಕಂಪನಿಗಳು ನೇರ ಸಂದರ್ಶನ ಮೂಲಕ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮ ಕಾತಿಗಾಗಿ 7ನೇ ತರಗತಿ, ಎಸ್‍ಎಸ್‍ಎಲ್‍ಸಿ ಪಾಸ್, ಫೇಲ್ ಹಾಗೂ ಪಿಯುಸಿ, ಪದವಿ, ಐ.ಟಿ.ಐ, ಡಿಪ್ಲೋಮೋ, ನರ್ಸಿಂಗ್, ಇಂಜಿ ನಿಯರಿಂಗ್, ಎಂಬಿಎ ಮತ್ತು ಸ್ನಾತಕೋ ತ್ತರ ಪದವಿ ಪಡೆದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೊಳ್ಳಲು ನೋಂದಣಿ ಮಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಕ್ರ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ನಂದಿನಿ, ಹಾಸನ ಜಿಲ್ಲಾ ಉದ್ಯೋಗಾಧಿಕಾರಿ ವಿಜಯಲಕ್ಷ್ಮಿ, ಜಂಟಿ ನಿರ್ದೇಶಕ ಗೋವಿಂದೇ ಗೌಡ, ಚಿಕಮಗಳೂರು ತಾಪಂ ಅಧ್ಯಕ್ಷ ಜಯಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ಇತರರು ಪಾಲ್ಗೊಂಡಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದು, ಎರಡು ದಿನಗಳ ಕಾಲ ನಡೆಯುವ ಉದ್ಯೋಗ ಮೇಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವ ಗೊಂದಲ ಆಗದಂತೆ ನೋಡಿಕೊಳ್ಳಬೇಕು. ಅರ್ಹರಿಗೆ ಹಾಗೂ ಸಂತ್ರಸ್ತರನ್ನು ಗುರುತಿಸಿ ಕೆಲಸ ಕೊಡಬೇಕು.
– ಹೆಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ

Translate »