ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್, ಗೈಡ್ಸ್ ಸಹಕಾರಿ
ಹಾಸನ

ಸೇವಾ ಮನೋಭಾವ ಬೆಳೆಸಲು ಸ್ಕೌಟ್ಸ್, ಗೈಡ್ಸ್ ಸಹಕಾರಿ

February 24, 2019

ಆಲೂರು: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಾಗತಿಕವಾಗಿ ಬೆಳೆದ ಸಂಸ್ಥೆ. ಇದರ ಸದಸ್ಯರಾಗುವುದೇ ಒಂದು ಪುಣ್ಯದ ಕೆಲಸ. ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ವಾಗಿರುವ ಶಿಸ್ತು, ಸಂಯಮ, ಸೇವಾ ಮನೋಭಾವ, ಶ್ರದ್ಧೆ, ಜೀವನ ಕೌಶಲ ಗಳನ್ನು ಕಲಿಸುವಲ್ಲಿ ಸ್ಕೌಟ್ ಮತ್ತು ಗೈಡ್ಸ್ ಮಹತ್ತರ ಪಾತ್ರ ವಹಿಸುತ್ತದೆ ಎಂದು ಪ್ರಾಂಶುಪಾಲ ನಾಗೇಶ್ ಹೇಳಿದರು.

ತಾಲೂಕಿನ ಮರಸು ಹೊಸಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಯಿಂದ ಹಮ್ಮಿಕೊಂಡಿದ್ದ ಲಾರ್ಡ್ ಬೇಡನ್ ಪೊವೆಲ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾನ ವನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸು ವುದರ ಜೊತೆಗೆ ಮಕ್ಕಳಲ್ಲಿ ವೈಶಾಲ್ಯ ಮನೋ ಭಾವವನ್ನು ಬೆಳೆಸುತ್ತದೆ. ಪ್ರಾಮಾಣಿಕತೆ, ಸತ್ಯತೆ, ಪಾರದರ್ಶಕತೆಯಂತಹ ಮಹೋ ನ್ನತ ಗುಣಗಳನ್ನು ಬೆಳೆಸುತ್ತದೆ ಎಂದರು.

ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ, 1907ರಲ್ಲಿ ನಿವೃತ್ತ ಸೈನ್ಯಾಧಿಕಾರಿಗಳಾದ ಲಾರ್ಡ್ ಬೇಡನ್ ಪೊವೆಲ್ ಅವರಿಂದ ಇಂಗ್ಲೆಂಡಿನ ಬ್ರೌನ್ಸಿ ದ್ವೀಪದಲ್ಲಿ ಜನಿಸಿದ ಈ ಸಂಸ್ಥೆ ಪ್ರಾರಂಭ ದಲ್ಲಿ 20 ಮಕ್ಕಳಿಂದ ಚಾಲನೆಗೊಂಡು ಪ್ರಸ್ತುತ 216 ರಾಷ್ಟ್ರಗಳಿಗಿಂತಲೂ ಅಧಿಕ ದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ಪಡೆದು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಕಾರ್ಯ ಮಾಡುತ್ತಿದೆ ಎಂದರು.

ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಇಮ್ಮಡಿ ಗೊಳಿಸುತ್ತಾ ನಿತ್ಯ ಜೀವನವನ್ನು ಎದುರಿ ಸುವ ಕೌಶಲಗಳನ್ನು ಬೆಳೆಸುತ್ತಾ ಸಾಮಾ ಜಿಕವಾಗಿ ವಿಕಸನ ಹೊಂದಲಿಕ್ಕೆ ಶ್ರಮಿಸು ತ್ತಿದೆ. ಮೂರು ವರ್ಷಗಳಿಂದ ಪ್ರಾರಂಭ ವಾಗಿ ಇಪ್ಪತ್ತೈದು ವರ್ಷ ವಯೋಮಾನ ದವರೆಗಿನ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ವನ್ನು ನೀಡಲಾಗುತ್ತಿದೆ. 1857 ಫೆ. 22 ಬೇಡನ್ ಪೊವೆಲ್ ಅವರ ಜನ್ಮದಿನ. ಆದ್ದರಿಂದ ಪ್ರತಿ ವರ್ಷ ಫೆ.22 ಅನ್ನು ಲಾರ್ಡ್ ಬೇಡನ್ ಪೊವೆಲ್ ಅವರ ಹೆಸರಿನಲ್ಲಿ ‘ಥಿಂಕಿಂಗ್ ಡೆ’ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸ್ಥಳೀಯ ಸಂಸ್ಥೆಯ ಖಜಾಂಚಿ ಬಿ.ಎಸ್.ಹಿಮ, ಸಹ ಕಾರ್ಯ ದರ್ಶಿ ವಿ.ಮೋಹನ್, ತಾಲೂಕು ಮಾಜಿ ಕಾರ್ಯದರ್ಶಿಗಳಾದ ಮೈಮೂನ, ಗೈಡ್ ವಿಭಾಗದ ಕ್ಯಾಂಪ್ ಲೀಡರ್ ರೇಷ್ಮಾ, ಸ್ಕೌಟ್ ವಿಭಾಗದ ಕ್ಯಾಂಪ್ ಲೀಡರ್ ಮೋಹನ್, ಸ್ಕೌಟ್ ಮಾಸ್ಟರ್ ಎಚ್.ಡಿ. ಕುಮಾರ್, ಗೈಡ್ ಕ್ಯಾಪ್ಟನ್ ಸುನೀತಾ ಮುಂತಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೈಡ್ಸ್ ಕ್ಯಾಪ್ಟನ್ಸ್ ಗಳಾದ ಮಹೇರಾ ಬಾನು, ಕುಮಾರಿ ಅಶ್ವಿನಿ, ಜಿ.ವಿ.ಸುಜಾತ, ಟಿ.ಕೆ.ಕುಮಾರ ಸ್ವಾಮಿ ಸೇರಿದಂತೆ 110ಕ್ಕೂ ಹೆಚ್ಚು ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಉಪಸ್ಥಿತರಿದ್ದರು.

Translate »