ಕುಪ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ
ಕೊಡಗು

ಕುಪ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ

February 24, 2019

ತಿ.ನರಸೀಪುರ: ಗ್ರಾಮೀಣ ಪ್ರದೇಶಗಳ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಉತ್ತಮವಾದ ಸರ್ಕಾರಿ ವೈದ್ಯಕೀಯ ಸೇವೆಯನ್ನು ಕಲ್ಪಿಸಲು ಪ್ರಾಥ ಮಿಕ ಆರೋಗ್ಯ ಕೇಂದ್ರಗಳಿಗೆ ಸುಸಜ್ಜಿತ ಅತ್ಯಾಧುನಿಕ ಶೈಲಿಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಡಾ.ಎಸ್.ಯತೀಂದ್ರ ಹೇಳಿದರು.

ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಕುಪ್ಯ ಗ್ರಾಮದ ಹೊರವಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ವಿಭಾಗದಿಂದ 1.16 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು ಗುರುವಾರ ಸಂಜೆ ಉದ್ಘಾಟಿಸಿದ ನಂತರ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿ, ಹಳ್ಳಿಗಾಡಿನ ಜನರಿಗೆ ಸ್ಥಳೀಯ ವಾಗಿ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

ಕುಪ್ಯ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತವಾದ ಕಟ್ಟಡವನ್ನು ಕಲ್ಪಿಸಲು ಕ್ಷೇತ್ರದಲ್ಲಿ ದಶಕದ ಕಾಲ ಶಾಸಕ ರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯ ಲ್ಲಿಯೇ ನಿವೇಶನ ಹಾಗೂ ಅನುದಾನವನ್ನು ಮಂಜೂರು ಮಾಡಿದ್ದರು. ಅವರ ಜನಪರ ಯೋಜನೆಯನ್ನು ಶಾಸಕನಾಗಿ ಉದ್ಘಾಟಿಸಲು ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆಯೆನಿಸುತ್ತದೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಸುತ್ತಮುತ್ತ ಲಿನ ಗ್ರಾಮೀಣ ಜನರಿಗೆ ಸಮರ್ಪಕವಾಗಿ ವೈದ್ಯಕೀಯ ಸೇವೆ ಯನ್ನು ಒದಗಿಸಬೇಕು ಎಂದು ಸಲಹೆ ನೀಡಿದರು. ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಹಾಗೂ ಜನರ ಅಹವಾಲನ್ನು ಆಲಿಸಿ ಪರಿಹರಿಸಲು ಆದ್ಯತೆಯನ್ನು ನೀಡಿದ್ದೇವೆ. ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳಿಗೂ ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಬಿಡುಗಡೆಗೂ ಕ್ರಮ ಕೈಗೊಳ್ಳ ಲಾಗಿದೆ. ಯಾವುದೇ ವಿಚಾರವನ್ನು ಜನರು ತಮ್ಮ ಗಮನಕ್ಕೆ ನೇರವಾಗಿ ತರಬೇಕು. ಸರ್ಕಾರದ ಸೌಲಭ್ಯಗಳನ್ನು ಸಾಧ್ಯವಾದಷ್ಟು ಅರ್ಹರಿಗೆ ತಲುಪಿಸುವ ಕೆಲಸವನ್ನು ಮಾಡು ತ್ತೇವೆ ಎಂದು ಡಾ.ಎಸ್.ಯತೀಂದ್ರ ತಿಳಿಸಿದರು.

ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಂ, ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ ಗೋವಿಂದ, ಮಾಜಿ ಅಧ್ಯಕ್ಷರಾದ ಭಾಗ್ಯಮ್ಮ, ಶಿವರಾಮ್, ಮನ್ನೇಹುಂಡಿ ಮಹೇಶ, ಎಪಿಎಂಸಿ ನಿರ್ದೇ ಶಕ ಕೆ.ಬಿ.ಪ್ರಭಾಕರ, ಗ್ರಾ.ಪಂ ಸದಸ್ಯರಾದ ಹಿನಕಲ್ ಉದಯ್, ಸಿದ್ದರಾಜು, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಉಪಾಧ್ಯಕ್ಷ ಕೆ.ನಾರಾಯಣ, ಡಿಸಿಸಿ ಕಾರ್ಯದರ್ಶಿ ಹುಣಸೂರು ಬಸವಣ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು, ಮೈಸೂರು ಜಿಲ್ಲಾ ವೈದ್ಯಕೀಯ ವಿಭಾಗದ ಜಿಲ್ಲಾ ಅಧ್ಯಕ್ಷ ಡಾ.ಬಿ.ಪ್ರದೀಪ್, ಸಹಾಯಕ ಇಂಜಿನಿಯರ್ ರಾಮ್ ಮೋಹನ್, ಗುತ್ತಿಗೆದಾರ ಪ್ರಸಾದ್, ವೈದ್ಯಾಧಿಕಾರಿ ಡಾ. ಎಂ.ಚಂದ್ರಶೇಖರ್, ನಾಡಗೌಡ ದೊಡ್ಡ ಬಸವೇಗೌಡ, ಯಜಮಾನರಾದ ಗಾರೆ ಶಿವಣ್ಣ, ನಾಗೇಗೌಡ, ಪುಟ್ಟಶಂಭಯ್ಯ, ಸಿದ್ಧಮಾದು, ಮುಖಂಡರಾದ ಜಯರಾಂ, ಜೆ.ಮಹ ದೇವು, ಮಸಣೇಗೌಡ, ಹುನಗನಹಳ್ಳಿ ಮಂಜು ನಾಥ, ಎಂ.ಶಿವಕುಮಾರ್, ರಾಜಪ್ಪ ಹಾಗೂ ಇನ್ನಿತರರು ಹಾಜರಿದ್ದರು.

Translate »