ನಂಜನಗೂಡು: ಏಕಾಗ್ರತೆ ಯೊಂದಿಗೆ ಪರಿಶ್ರಮದಿಂದ ಅಧ್ಯಯನ ನಡೆಸಿದರೆ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಕೊಳ್ಳಬಹುದು ಎಂದು ಕೊಳ್ಳೇಗಾಲ ಚೇತವನದ ಮನೋರಖ್ಖಿತ ಬಂತೇಜಿ ಹೇಳಿದರು. ಅವರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಶನಿ ವಾರ ಆಯೋಜಿಸಿದ್ದ ಪರೀಕ್ಷಾಪೂರ್ವ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಮಾನವ ಅಭಿವೃದ್ಧಿ ಹಾಗೂ ದೇಶದ ಪ್ರಗತಿ ಸಾಧಿಸಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಡಾ.ಬಬಾಸಾಹೇಬ್ ಅಂಬೇಡ್ಕರ್ ಪ್ರತಿ ಪಾದಿಸಿದ್ದರು. ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ಕಲಿಯುವ ಉತ್ಸಾಹ ಹಾಗೂ ಕಠಿಣ ಪರಿಶ್ರಮ ತೋರುವ ಸಾಮಥ್ರ್ಯವನ್ನು ರೂಢಿಸಿಕೊಂಡಲ್ಲಿ ಖಂಡಿತಾ ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ತೋರಬಹುದು. ಮನಸ್ಸೇ ನಮ್ಮ ಎಲ್ಲಾ ಗುರಿ ಸಾಧನೆಯ ಮಾರ್ಗದರ್ಶಕನಾಗಿದ್ದು ಉತ್ತಮ ದಾರಿ ಯಲ್ಲಿ ಸಾಗುವ ಆಶಯದೊಂದಿಗೆ ಭವಿಷ್ಯದ ಗುರಿ ಸಾಧನೆಯ ಹಾದಿಯನ್ನು ಧೃಡಸಂಕಲ್ಪದೊಂದಿಗೆ ತಲುಪಲು ಶಿಕ್ಷಣ ನೆರವಾಗಲಿದೆ. ಹೀಗಾಗಿ ಎಸ್‍ಎಸ್ ಎಲ್‍ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಸಂಸ ಸಂಚಾಲಕ ಶಂಕರಪುರ ಸುರೇಶ್ ಮಾತನಾಡಿದರು.
ಪಟ್ಟಣ ಪೋಲಿಸ್ ಠಾಣೆಯ ಪಿಎಸ್‍ಐ ಆನಂದ್, ಶಿಕ್ಷಣ ಇಲಾಖೆ ಬಿಆರ್‍ಸಿ ಕೆ.ಜಿ. ಮಹೇಶ್, ಸರಕಾರೀ ಬಾಲಕಿಯರ ಪ್ರೌಢ ಶಾಲೆ ಮುಖ್ಯಶಿಕ್ಷಕ ರವೀಶ್ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಅತ್ತಿಖಾನೆ, ದಸಂಸ ವಿಭಾಗೀಯ ಸಂಚಾ ಲಕ ದೇವಗಳ್ಳಿ ಸೋಮಶೇಖರ್, ಬೊಕ್ಕ ಹಳ್ಳಿ ಲಿಂಗಯ್ಯ, ಕೃಷ್ಣಮೂರ್ತಿ ಸೇರಿದಂತೆ ದೇಬೂರು ಆದರ್ಶ ಹಾಗೂ ಸರಕಾರೀ ಬಾಲಕಿಯರ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.