ಕಳಗಸಾಪುರಕ್ಕೆ ಶಾಸಕ ನಿರಂಜನ್ ಕುಮಾರ್ ಭೇಟಿ
ಚಾಮರಾಜನಗರ

ಕಳಗಸಾಪುರಕ್ಕೆ ಶಾಸಕ ನಿರಂಜನ್ ಕುಮಾರ್ ಭೇಟಿ

June 13, 2018

ಗುಂಡ್ಲುಪೇಟೆ:  ಕ್ಷೇತ್ರದ ಶಾಸಕ ಸಿ.ಎಸ್. ನಿರಂಜನಕುಮಾರ್ ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದೊಳಗಿರುವ ಶ್ರೀ ಕಳಗಸಾಪುರ ಮಾರಮ್ಮನವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕಾಡಂಚಿನ ಗ್ರಾಮಗಳ ಜನರಿಂದ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.

ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯ ಪ್ರದೇಶ ದಲ್ಲಿರುವ ಶ್ರೀ ಕಳಗಸಾಪುರ ಮಾರಮ್ಮನವರ ದೇವಸ್ಥಾನದ ಸುತ್ತಲಿನ ಬರಗಿ, ದೇಶೀಪುರ, ಮಂಚಹಳ್ಳಿ, ಆಲತ್ತೂರು, ಹಸಗೂಲಿ, ಹೆಗ್ಗಡಹಳ್ಳಿ ಮುಂತಾದ ಹಲವಾರು ಗ್ರಾಮಗಳ ಜನರ ಆರಾಧ್ಯ ದೇವತೆಯಾಗಿದ್ದು, ಇಲ್ಲಿಗೆ ಪ್ರತಿ ವರ್ಷವೂ ಎಲ್ಲಾ ಗ್ರಾಮಗಳ ಭಕ್ತರು ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿ ಆರಾ ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರಮ್ಮ ದೇವಸ್ಥಾನಕ್ಕೆ ತೆರಳಿದ ಶಾಸಕರು ಪೂಜೆ ಸಲ್ಲಿಸಿದರು.

ನಂತರ ಕಾಡಂಚಿನ ಬರಗಿ, ಹೊಂಗಹಳ್ಳಿ, ಚನ್ನಮಲ್ಲೀಪುರ, ಕಗ್ಗಳದಹುಂಡಿ ಹಾಗೂ ಮದ್ದೂರು ಕಾಲೋನಿ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸಿದರು. ನಂತರ ಸಾರ್ವಜನಿಕರೊಂದಿಗೆ ಮಾತನಾಡಿ, ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯ ಗಳ ಕೊರತೆಯಿದ್ದು, ವನ್ಯಜೀವಿಗಳ ಹಾವಳಿಯ ಬಗ್ಗೆ ದೂರುಗಳಿವೆ. ಸದ್ಯದಲ್ಲಿಯೇ ಅಧಿಕಾರಿಗಳ ಸಭೆ ನಡೆಸಿ ಪರಿ ಹಾರ ಕಂಡುಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರಣಯ್, ಮುಖಂಡರಾದ ಎಸ್.ಸಿ.ಮಂಜುನಾಥ್, ವೃಷಭೇಂದ್ರಪ್ಪ, ಮಡಹಳ್ಳಿ ರಾಜು, ಮಾಡ್ರಹಳ್ಳಿ ನಾಗೇಂದ್ರ, ದೊಡ್ಡಹುಂಡಿ ಜಗದೀಶ್, ಕಿರಣ್ ಸೇರಿದಂತೆ ಹಲವರು ಇದ್ದರು.

Translate »