ಸಂಸದ ಆರ್.ದ್ರುವನಾರಾಯಣ್ ಹುಟ್ಟುಹಬ್ಬ ಪ್ರಯುಕ್ತ ಜು.31 ರಂದು ಬೃಹತ್ ಉದ್ಯೋಗಮೇಳ; 4 ಸಾವಿರ ಉದ್ಯೋಗ ಕೊಡಿಸುವ ಗುರಿ
ಚಾಮರಾಜನಗರ

ಸಂಸದ ಆರ್.ದ್ರುವನಾರಾಯಣ್ ಹುಟ್ಟುಹಬ್ಬ ಪ್ರಯುಕ್ತ ಜು.31 ರಂದು ಬೃಹತ್ ಉದ್ಯೋಗಮೇಳ; 4 ಸಾವಿರ ಉದ್ಯೋಗ ಕೊಡಿಸುವ ಗುರಿ

July 25, 2018

ಚಾಮರಾಜನಗರ:  ಸಂಸದ ಆರ್.ಧ್ರುವನಾರಾಯಣ್‍ರವರ 57ನೇ ಜನ್ಮದಿನದ ಪ್ರಯುಕ್ತ ಅವರ ಅಭಿ ಮಾನಿಗಳ ಬಳಗವು ಜು.31 ರಂದು ಮಂಗಳವಾರ ನಗರದ ತಾಲೂಕು ಕಚೇರಿ ಪಕ್ಕದಲ್ಲಿ ಬೃಹತ್ ಉದ್ಯೋಗ ಮೇಳ ವನ್ನು ಹಮ್ಮಿಕೊಂಡಿದ್ದು, 4 ಸಾವಿರ ಉದ್ಯೋಗ ಕೊಡಿಸುವ ಗುರಿ ಹೊಂದ ಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತ ನಾಡಿದರು. ಶಾಲಾ ಮಕ್ಕಳಿಗೆ ಕಣ್ಣಿನ ತಪಾಸಣೆ ಶಿಬಿರ, ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು, ನಾನಾ ಕಂಪನಿಗಳಲ್ಲಿ ಸುಮಾರು 4 ಸಾವಿರ ಉದ್ಯೋಗ ಕೊಡಿಸುವ ಗುರಿ ಹೊಂದಲಾಗಿದೆ. ಪ್ರತಿ ವರ್ಷವು ಸಂಸದ ಆರ್.ಧ್ರುವನಾರಾಯಣ್‍ರವರ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗಿದೆ. ಅಂದು ನಡೆಯುವ ಉದ್ಯೋಗ ಮೇಳ ದಲ್ಲಿ ನಿರುದ್ಯೋಗ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಿಕೊಡುವಂತೆ ಮನವಿ ಮಾಡಿದರು.

ಕುಮಾರ್ ಉಪ್ಪಾರ್ ಮಾತನಾಡಿ, 7ನೇ ತರಗತಿಯಿಂದ ಎಸ್‍ಎಸ್‍ಎಲ್‍ಸಿ ಪಾಸ್ ಅಥವಾ ಫೇಲ್, ಪಿಯುಸಿ, ಐಟಿಐ, ಡಿಪ್ಲೊಮಾ,

ಬಿಎಸ್‍ಸಿ ಮತ್ತು ನರ್ಸಿಂಗ್, ಎಎನ್‍ಎಂ, ಜಿಎನ್‍ಎಂ ಹಾಗೂ ಸ್ನಾತ ಕೋತ್ತರ ಪದವಿಯ ಎಲ್ಲಾ ವಿಭಾಗಗಳ ಅರ್ಹ ಅಭ್ಯರ್ಥಿಗಳಿಗಾಗಿ ಬೃಹತ್ ಉದ್ಯೋಗಮೇಳ ಅಯೋಜನೆ ಮಾಡ ಲಾಗಿದೆ. ನಿರುದ್ಯೋಗ ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳು ವಂತೆ ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್‍ಅಸ್ಗರ್, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕ ಮಹದೇವು, ಆರ್.ಧ್ರುವನಾರಾಯಣ್ ಅಭಿಮಾನಿಗಳ ಬಳಗದ ಅಧ್ಯಕ್ಷ ಕಾಗಲ ವಾಡಿಚಂದ್ರು, ಪ್ರಧಾನ ಕಾರ್ಯದರ್ಶಿ ಹೊಮ್ಮನಾಗನಾಯಕ ಸೇರಿದಂತೆ ಇತರರು ಹಾಜರಿದ್ದರು.

Translate »