ಯುಜಿಸಿ ವೇತನ ಶ್ರೇಣಿಗೆ ಆಗ್ರಹಿಸಿ ಮೈಸೂರು ವಿವಿ ನೌಕರರ ಪ್ರತಿಭಟನೆ
ಮೈಸೂರು

ಯುಜಿಸಿ ವೇತನ ಶ್ರೇಣಿಗೆ ಆಗ್ರಹಿಸಿ ಮೈಸೂರು ವಿವಿ ನೌಕರರ ಪ್ರತಿಭಟನೆ

January 9, 2019

ಮೈಸೂರು: ಯುಜಿಸಿ ವೇತನ ಶ್ರೇಣಿ ವಿಸ್ತರಣೆ, ಗುತ್ತಿಗೆ ಕಾರ್ಮಿ ಕರ ಖಾಯಂ ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಕೆಗಾಗಿ ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಮುಂದೆ ಸಿ ಮತ್ತು ಡಿ ಗ್ರೂಪ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರು ಹಾಗೂ ಸಂಚಿತ ವೇತನ, ಗುತ್ತಿಗೆ ಆಧಾರದ ನೌಕ ರರು ಸೇವೆ ಸಲ್ಲಿಸುತ್ತಿದ್ದಾರೆ. ವಿವಿ ಶ್ರೇಯೋಭಿವೃದ್ಧಿ ಸೇರಿದಂತೆ ಎಲ್ಲಾ ವಿಷಯಗಳಲ್ಲಿಯೂ ಅಧ್ಯಾಪಕರು, ಎ ಮತ್ತು ಬಿ ದರ್ಜೆ ನೌಕರರಿಗೆ ಸಮನಾಗಿ ಸಿ,ಡಿ ದರ್ಜೆ ಮತ್ತು ಗುತ್ತಿಗೆ ಸಿಬ್ಬಂ ದಿಯೂ ಶ್ರಮಿಸುತ್ತಿದ್ದಾರೆ. ಅಧ್ಯಾಪಕರು ಮತ್ತು ಎ, ಬಿ ದರ್ಜೆ ನೌಕರರಿಗೆ 2016ರ ಡಿ.31ರಿಂದ ಅನ್ವಯವಾಗುವಂತೆ ಯುಜಿಸಿ ವೇತನ ಶ್ರೇಣಿ ವಿಸ್ತರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಿ ಹಾಗೂ ಡಿ ದರ್ಜೆ ನೌಕರರಿಗೂ ಯುಜಿಸಿ ವೇತನ ಶ್ರೇಣಿ ವಿಸ್ತರಿಸಬೇಕು. ಅಲ್ಲದೆ ಹಲವು ವರ್ಷಗಳಿಂದ ಗುತ್ತಿಗೆ ಪದ್ಧತಿಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂಗೊಳಿಸ ಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯದ ನೌಕರರ ವೇದಿಕೆ ಅಧ್ಯಕ್ಷ ಆರ್.ವಾಸುದೇವ್, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್, ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕೇ ತರ ಉದ್ಯೋಗಿಗಳ ಸಂಘದ ಅಧ್ಯಕ್ಷ ಹರೀಶ್ ಬಾಬು, ಪದಾಧಿಕಾರಿಗಳಾದ ಚನ್ನಬಸಪ್ಪ, ಪ್ರಕಾಶ್ ಇನ್ನಿತರರು ಪಾಲ್ಗೊಂಡಿದ್ದರು.

Translate »