ಮೈಸೂರು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕ್ಯಾಲೆಂಡರ್, ಡೈರಿ ಬಿಡುಗಡೆ
ಮೈಸೂರು

ಮೈಸೂರು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕ್ಯಾಲೆಂಡರ್, ಡೈರಿ ಬಿಡುಗಡೆ

January 9, 2019

ಮೈಸೂರು: ಅನು ಭವವೂ ಸಿಹಿಯಲ್ಲ, ಅನುಭವದ ನೆನಪು ಸಿಹಿ ಎಂಬಂತೆ ಪ್ರವಾಸ ಅನುಭವ ಸಂತೋಷ ನೀಡುವುದಿಲ್ಲ. ಆದರೆ, ಪ್ರವಾಸದ ಫೋಟೋಗಳನ್ನು ವೀಕ್ಷಿಸಿದರೆ ಮನಸ್ಸಿಗೆ ಆನಂದ, ಉಲ್ಲಾಸವನ್ನು ನೀಡುತ್ತವೆ ಎಂದು ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಅಭಿಪ್ರಾಯಪಟ್ಟರು.

ಕಲಾಮಂದಿರದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಮಂಗಳ ವಾರ ಆಯೋಜಿಸಿದ್ದ ಸಂಘದ 18 ವಾರ್ಷಿಕೋತ್ಸವ ಹಾಗೂ ಛಾಯಾ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಫೋಟೋಗ್ರಫಿಯಿಂದ ಇಡೀ ಜಗತನ್ನೇ ವೀಕ್ಷಿಸಬಹುದು. ಹಾಗೆಯೇ 1 ಫೋಟೋ ವ್ಯಕ್ತಿಯ ಕುರಿತು, ಸನ್ನಿವೇಶಗಳ ಕುರಿತು ಹೇಳಬಲ್ಲದು. ಅಂತಹ ಫೋಟೋಗಳನ್ನು ತೆಗೆಯುವಲ್ಲಿ ಛಾಯಗ್ರಾಹಕನ ಪಾತ್ರ ದೊಡ್ಡದು ಎಂದು ಅಭಿನಂದನೆ ತಿಳಿಸಿದರು.
ಪ್ರತಿಯೊಬ್ಬ ವ್ಯಕ್ತಿಯು ಫೋಟೋವನ್ನು ನೋಡಿದಾಗ ಅವನ ಬದುಕಿನಲ್ಲಿ ಹೊಸ ಹುರುಪು-ಉಲ್ಲಾಸ ಉಂಟಾಗುತ್ತದೆ. ಛಾಯಾಗ್ರಹಣ ಎಂಬುದು ಅದ್ಭುತ ಮಾಯಾ ಪ್ರಪಂಚ. ಅಂತಃ ಮಾಯಾ ಪ್ರಪಂಚವನ್ನು ನಿರ್ಮಾಣ ಮಾಡುವ ಶಕ್ತಿ ಛಾಯಾಗ್ರಾಹಕರಿಗಿದೆ ಎಂದ ಅವರು, ಸಂಘದವರ ಸಿಎ ಸೈಟ್ ಮನವಿಗೆ ಪ್ರತಿಕ್ರಿಯಿಸಿ, ಕಳೆದ ಬಾರಿ ಸಿಎ ಸೈಟ್‍ಗೆ ಅರ್ಜಿ ಸಲ್ಲಿಸಿದ್ದೀರಿ. ಆದರೆ, ಅದೇ ಸೈಟ್‍ಗೆ ಹಲವರು ಸ್ಪರ್ಧೆಗಿಳಿದಿದ್ದರು. ನಾನು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇಂದು ನಮ್ಮದೇ ಸರ್ಕಾರ ಇದೆ. ಮತ್ತೊಮ್ಮೆ ಅರ್ಜಿ ಸಲ್ಲಿಸಿ ಕೊಡಿಸಿಕೊಡು ವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ 2019ರ ಕ್ಯಾಲೆಂಡರ್, ಡೈರಿ ಬಿಡುಗಡೆಗೊಳಿಸಲಾ ಯಿತು. ನಂತರ ಅಸೋಸಿಯೇಷನ್‍ನ ಕುಟುಂಬದವರಿಗೆ ಆಯೋಜಿಸಿದ್ದ ಕ್ರಿಕೆಟ್, ಹಗ್ಗ-ಜಗ್ಗಾಟ, ಛಾಯಾಚಿತ್ರ ಪ್ರದರ್ಶ ನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪಾಲಿಕೆ ಸದಸ್ಯರಾದ ಪ್ರಮೀಳಾ ಎಂ. ಭರತ್, ಭಾಗ್ಯ ಸಿ.ಮಾದೇಶ್, ನ್ಯೂ ಪ್ರಿನ್ಸ್ ಲ್ಯಾಬ್ ಮಾಲೀಕರಾದ ಸೋಮಸುಂದರ್, ಮಹದೇವಸ್ವಾಮಿ, ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಉಪಾಧ್ಯಕ್ಷ ಎಸ್.ಮಂಜುನಾಥ್, ಕಾರ್ಯದರ್ಶಿ ಜಿ.ಟಿ.ರಮೇಶ್ ಕುಮಾರ್, ಸಹ ಕಾರ್ಯದರ್ಶಿ ಪಿ.ಚಂದ್ರಶೇಖರ್, ಖಜಾಂಚಿ ಎಂ.ಜೆ.ಶ್ರೀನಿವಾಸ್, ನಿರ್ದೇ ಶಕರಾದ ಎಂ.ಮುಕುಂದ ಸಿಂಗ್, ಎಂ.ಕೆ. ತನುಜ್‍ಕುಮಾರ್ ಮಹೇಶ್, ಹೆಚ್.ಎಸ್. ಶಿವಕುಮಾರ್, ಕಾನೂನು ಸಲಹೆಗಾರ ಎನ್.ಗೋವಿಂದ ಮತ್ತಿತರರು ಉಪಸ್ಥಿತರಿದ್ದರು. ನಂತರ ಹಾಸ್ಯ ಕಲಾವಿದರಾದ ಪ್ರಾಣೇಶ್, ಮಹಾಮನಿ ಮತ್ತು ವಿನಾಯಕ್ ಜೋಷಿ ತಂಡ ಹಾಸ್ಯಸಂಜೆ ನಡೆಸಿಕೊಟ್ಟರು.

Translate »