ನರೇಗಾ ಯೋಜನೆಯಡಿ ದುಡಿದ ಕಾರ್ಮಿಕರಿಗೂ ಕೂಲಿ ನೀಡದ ಕೇಂದ್ರ
ಮೈಸೂರು

ನರೇಗಾ ಯೋಜನೆಯಡಿ ದುಡಿದ ಕಾರ್ಮಿಕರಿಗೂ ಕೂಲಿ ನೀಡದ ಕೇಂದ್ರ

February 22, 2019

ಬೆಂಗಳೂರು: ಹೊಟ್ಟೆ ಪಾಡಿಗಾಗಿ ಕೂಲಿ ಮಾಡಿದ ಕಾರ್ಮಿ ಕರಿಗೂ ಕೇಂದ್ರ ಸರ್ಕಾರ ದಿನಗೂಲಿ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನರೇಗಾ ಅನುಷ್ಠಾನ ಕುರಿ ತಂತೆ ಉನ್ನತ ಮಟ್ಟದ ಸಭೆಯ ನಂತರ ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇ ಗೌಡ ಅವರ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಯವರು, ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಇತರ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಂಡಿದೆ ಎಂದು ದೂರಿದರು. ಕಳೆದ ಮೂರು ನಾಲ್ಕು ತಿಂಗಳಿನಿಂದ ದುಡಿದ ಕಾರ್ಮಿಕರಿಗೆ ಇದು ವರೆಗೂ ಕೇಂದ್ರ ಹಣವನ್ನೇ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಮೇಲಿಂದ ಮೇಲೆ ಮನವಿ ಮಾಡಿಕೊಂಡರೂ ಅದಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ದುಡಿದ ಕೈಗಳಿಗೆ ಕೂಲಿ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವೇ 900 ಕೋಟಿ ರೂ.ಗಳನ್ನು ಬಿಡುಗಡೆ ಮಾಡು ತ್ತಿದೆ. ಮೊದಲ ಹಂತದಲ್ಲಿ 400 ಕೋಟಿ ರೂ. 2ನೇ ಹಂತದಲ್ಲಿ 500 ಕೋಟಿ ರೂ. ಬಿಡುಗಡೆ ಮಾಡುತ್ತಿದ್ದು, ಅಗತ್ಯ ಕಂಡು ಬಂದಲ್ಲಿ ಮತ್ತೆ 100ರಿಂದ 150 ಕೋಟಿ ರೂ. ಈ ಯೋಜನೆಗೆ ನೀಡುವುದಾಗಿ ಸಿಎಂ ತಿಳಿಸಿದರು. ಕೇಂದ್ರ ಸರ್ಕಾರ ದುಡಿಸಿ ಕೊಂಡ ಕೂಲಿ ಕಾರ್ಮಿಕರಿಗೆ 2049 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ನಾವು ಒತ್ತಡ ಹೇರಿದ ನಂತರ ಕೇವಲ ನೂರು ಕೋಟಿ ರೂ. ಬಿಡುಗಡೆ ಮಾಡಿದೆ. ಹೊಟ್ಟೆಪಾಡಿ ಗಾಗಿ ಕೆಲಸ ಮಾಡಿದ ಇವರ ಕೂಲಿ ಕೊಡು ವವರು ಯಾರು ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ಮಧ್ಯೆ ಪ್ರವೇಶ ಮಾಡಿ ತನ್ನ ಇತಿಮಿತಿಯಲ್ಲಿ ಇಷ್ಟು ಹಣವನ್ನು ಬಿಡು ಗಡೆ ಮಾಡಿದೆ. ಬರ ಪರಿಹಾರಕ್ಕಾಗಿ 900 ಕೋಟಿ ರೂ. ರಾಜ್ಯಕ್ಕೆ ಬಿಡುಗಡೆ ಮಾಡಿ ರುವುದಾಗಿ ಕೇಂದ್ರ ಹೇಳಿಕೆ ನೀಡಿದೆ ಯಾದರೂ, ಇದುವರೆಗೂ ಒಂದು ನಯಾಪೈಸೆ ಬಂದಿಲ್ಲ ಎಂದು ಹೇಳಿದರು.

Translate »