ಮೈಸೂರು: ಕಾಯಕ ಸಮುದಾಯಗಳಲ್ಲಿ ಒಂದಾಗಿರುವ ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಆಧುನಿಕ ತಂತ್ರ ಜ್ಞಾನಕ್ಕೆ ಅನುಗುಣವಾಗಿ ತರಬೇತಿ ನೀಡಿ, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮೈಸೂರು ಜಿಲ್ಲಾ ಉಸ್ತುವಾಗಿ ಸಚಿವ ಜಿ.ಟಿ.ದೇವೇ ಗೌಡ ಭರವಸೆ ನೀಡಿದ್ದಾರೆ.
ಮೈಸೂರಿನ ಸಿದ್ದಾರ್ಥನಗರದ ಹಾಲಿನ ಡೈರಿ ಬಳಿಯಿರುವ ಶಿಕ್ಷಕರ ಸದನದಲ್ಲಿ ಭಾನುವಾರ ಮೈಸೂರು ನಗರ ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟದ 6ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ನಗರದಲ್ಲಿರುವ ದ್ವಿಚಕ್ರ ವಾಹನ ಗಳ ದುರಸ್ತಿಗಾರರನ್ನು ಒಂದೇ ಸೂರಿನಡಿ ಸಂಘಟಿಸಿ ಸಂಘಟನೆಯೊಂದನ್ನು ಅಸ್ಥಿತ್ವಕ್ಕೆ ತಂದು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನವಿರುವ ದ್ವಿಚಕ್ರ ವಾಹನ ಗಳು, 4 ಚಕ್ರಗಳ ವಾಹನಗಳು ಮಾರು ಕಟ್ಟೆಗೆ ಬಿಡುಗಡೆಯಾಗುತ್ತಿವೆ. ಆದರೆ ಈ ಹಿಂದಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ದುರಸ್ತಿ ಮಾಡುತ್ತಿದ್ದವರಿಗೆ ಹೊಸ ತಂತ್ರ ಜ್ಞಾನದ ಹೊಂದಿರುವ ವಾಹನಗಳ ದುರಸ್ತಿಗೆ ತೊಡಕಾಗುತ್ತಿರುವುದನ್ನು ತಮ್ಮ ಸಂಘ ಟನೆ ಗಮನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ತರ ಬೇತಿ ನೀಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಈ ಹಿಂದಿನಿಂದ ದ್ವಿಚಕ್ರ ವಾಹನಗಳ ದುರಸ್ತಿ ಮಾಡುತ್ತಿರುವವರು ಶಿಕ್ಷಣದಿಂದ ವಂಚಿತ ರಾಗಿದ್ದಾರೆ. ಇದರಿಂದಾಗಿಯೇ ಹೊಸ ತಂತ್ರಜ್ಞಾನದ ವಾಹನಗಳ ದುರಸ್ತಿಗೆ ವಾಹನ ಗಳ ಕಂಪನಿಗಳು ತರಬೇತಿ ನೀಡುವುದಕ್ಕೆ ಹಿಂದೇಟು ಹಾಕುತ್ತಿವೆ. ಇದರಿಂದ ಹೊಸ ವಾಹನಗಳನ್ನು ಕಂಪನಿಗಳ ಮೂಲಕವೇ ನಡೆಯುತ್ತಿರುವ ಗ್ಯಾರೇಜ್‍ಗಳಲ್ಲಿ ದುರಸ್ತಿ ಮಾಡಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಗಟ್ಟಿಗೊಳಿ ಸಲು ಕೇಂದ್ರ ಸರ್ಕಾರದ ಅನುದಾನ ಪಡೆದು, ಸಂಸದ ಪ್ರತಾಪಸಿಂಹ, ಶಾಸಕ ತನ್ವೀರ್ ಸೇಠ್ ಅವರು ಸಹಕಾರ ಪಡೆದು ತರಬೇತಿ ನೀಡಲಾಗುತ್ತದೆ. ಕಾರ್ಯಾಗಾರದಲ್ಲಿ ಎಷ್ಟು ಮಂದಿ ಹಾಗೂ ಯಾರ್ಯಾರು ಪಾಲ್ಗೊಳ್ಳ ಬಹುದು ಎನ್ನುವುದನ್ನು ದುರಸ್ತಿಗಾರರ ಸಂಘದ ಪದಾಧಿಕಾರಿಗಳು ತಿಳಿಸಬೇಕು ಎಂದರು.
ದ್ವಿಚಕ್ರ ವಾಹನಗಳ ಬಿಡಿಭಾಗಗಳ ವಸ್ತು ಪ್ರದರ್ಶನವನ್ನು ಸಂಸದ ಪ್ರತಾಪಸಿಂಹ ಉದ್ಘಾಟಿಸಿ ಮಾತನಾಡಿ, 1990ಕ್ಕಿಂತ ಹಿಂದೆ ವಾಹನ ತಯಾರಿಕಾ ಕಂಪನಿಗಳ ಮೂಲಕ ನಡೆಯುವ ಗ್ಯಾರೇಜ್‍ಗಳ ಸಂಖ್ಯೆ ಕಡಿಮೆ ಯಿತ್ತು. ಇದರಿಂದ ದುರಸ್ತಿಗಾರರಿಗೆ ಜೀವನ ನಡೆಸುವುದಕ್ಕೆ ಪೂರಕವಾದ ವಾತಾವರಣ ವಿತ್ತು. ಆದರೆ ಕಳೆದ ಎರಡು-ಮೂರು ದಶಕಗಳಿಂದ ವಾಹನಗಳ ತಂತ್ರಜ್ಞಾನವೂ ಬದಲಾಗುತ್ತಿದೆ. ಇದರಿಂದ ವಾಹನ ತಯಾ ರಿಕಾ ಸಂಸ್ಥೆಗಳ ಮೂಲಕವೇ ದುರಸ್ತಿಗಾರ ಗಳು ನಡೆಯುತ್ತಿವೆ. ಇದರ ಪರಿಣಾಮ ವಾಗಿ ಕೇವಲ ಟೈರ್ ಪಂಚರ್ ಹಾಕಿಸುವು ದಕ್ಕೆ ಮಾತ್ರ ಸ್ಥಳೀಯ ದುರಸ್ತಿಗಾರರ ಬಳಿ ಹೋಗುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದರಿಂದ ಕಂಪನಿಗಳು ಲಾಭ ಮಾಡಿಕೊಳ್ಳುತ್ತಿದ್ದರೆ, ಸಣ್ಣ ಪುಟ್ಟ ಗ್ಯಾರೇಜ್ ಮೂಲಕ ದುರಸ್ತಿ ಮಾಡುತ್ತಿದ್ದ ಕುಟುಂಬ ಗಳು ಸಂಕಷ್ಟಕ್ಕೀಡಾಗಿವೆ ಎಂದು ಅವರು ವಿಷಾದಿಸಿದರು.
ಮಾಜಿ ಸಚಿವ ತನ್ವೀರ್ ಸೇಠ್ ಅವರು ಮಾತನಾಡಿ, 1910ರಿಂದ 90ರವರೆಗೆ ತಯಾ ರಾದ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಬಳಸಲಾದ ತಂತ್ರಜ್ಞಾನ ವನ್ನು ಬಹುತೇಕ ದುರಸ್ತಿಗಾರರು ಕರಗತ ಮಾಡಿಕೊಂಡು ವಾಹನಗಳ ದುರಸ್ಥಿ ಮಾಡುತ್ತಿದ್ದಾರೆ. ಬದಲಾದ ಸನ್ನಿವೇಶ ದಲ್ಲಿ ಹೊಸ ತಂತ್ರಜ್ಞಾನದ ವಾಹನಗಳನ್ನು ದುರಸ್ತಿ ಮಾಡುವ ಕೌಶಲ್ಯತೆಯನ್ನು ತರ ಬೇತಿ ನೀಡುವ ಮೂಲಕ ದುರಸ್ತಿಗಾರ ರಿಗೆ ಕಲಿಸಬೇಕಾಗಿದೆ. ಅಲ್ಲದೆ ದುರಸ್ತಿಗಾರರು ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸು ವುದಕ್ಕೆ ಮುಂದಾಗಬೇಕೆಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವಿ.ಕೆ.ಏಜೆನ್ಸಿ ಮಾಲೀಕ ಎಸ್.ಕೆ.ದಿನೇಶ್, ಬಿಜೆಪಿ ಮುಖಂಡ ಹೆಚ್.ವಿ.ರಾಮಣ್ಣ, ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರಸನ್ನ ಗೌಡ, ಮೈಸೂರು ನಗರ ದ್ವಿಚಕ್ರ ವಾಹನ ಗಳ ದುರಸ್ತಿಗಾರರ ಒಕ್ಕೂಟದ ಗೌರವಾಧ್ಯಕ್ಷ ಆರ್.ಶಿವಕುಮಾರ್, ಅಧ್ಯಕ್ಷ ಎನ್.ರವೀಂದ್ರ ಕುಮಾರ್, ಲಿಂಗರಾಜು, ಚೋಟೆ ಸಾಬ್, ಮುಜಾಹಿದ್ ಪಾಶ ಸೇರಿದಂತೆ ಇನ್ನಿತ ರರು ಪಾಲ್ಗೊಂಡಿದ್ದರು.