ಬೆಂಗಳೂರು: 84ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ದಿನಾಂಕ ಮತ್ತೆ ಬದಲಾಗಿದೆ. ಇದಕ್ಕೆ ಹಿಂದೆ ಡಿಸೆಂ ಬರ್‍ನಲ್ಲಿ ನಡೆಯಲಿದೆ ಎನ್ನಲಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಡೆಗೆ ಜನವರಿ 6ರಿಂದ ಮೂರು ದಿನ ನಡೆಯಲಿದೆ ಎನ್ನಲಾಗಿತ್ತು. ಈಗಿನ ಮಾಹಿತಿಯಂತೆ ಸಮ್ಮೇಳನ ದಿನಾಂಕ ಮತ್ತೆ ಬದಲಾಗಿದ್ದು ಜನವರಿ 6ರ ಬದಲು 4ರಿಂದಲೇ ನುಡಿ ಜಾತ್ರೆಗೆ ಚಾಲನೆ ಸಿಗಲಿದೆ. 2017ರ ನವೆಂ ಬರ್‍ನಲ್ಲಿ ಮೈಸೂರಿನಲ್ಲಿ ನಡೆದಿದ್ದ 83ನೇ ಸಮ್ಮೇಳನದ ವೇಳೆ ಮುಂದಿನ ಸಮ್ಮೇಳನ ವನ್ನು ವಿದ್ಯಾನಗರಿ ಧಾರವಾಡದಲ್ಲಿ ಹಮ್ಮಿಕೊಳ್ಳು ವುದಾಗಿ ತೀರ್ಮಾನಿಸಲಾಗಿತ್ತು.
ಡಿಸೆಂಬರ್ 7ರಿಂದ ನಡೆಯಬೇಕಾಗಿದ್ದ ಸಮ್ಮೇಳನ ವನ್ನು ನಡೆಸಲು ಸರಿಯಾದ ಸಿದ್ಧತೆ ಮಾಡಿ ಕೊಳ್ಳುವುದಕ್ಕೆ ಸಮಯಾವಕಾಶದ ಕೊರತೆ ಇರುವ ಕಾರಣ 1 ತಿಂಗಳ ಕಾಲ ಸಮ್ಮೇಳನವನ್ನು ಮುಂದೂಡಿ ಜನವರಿ 6ರಿಂದ ನಡೆಸಲು ಒಮ್ಮತದ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ “ಸಮ್ಮೇಳನವು ಜನವರಿ 6ರ ಬದಲು 4ಕ್ಕೆ ಪ್ರಾರಂಭಗೊಳ್ಳಲಿದೆ.ಜನವರಿ 8ರಂದು ಸಾರಿಗೆ ಮುಷ್ಕರವಿರಲಿದ್ದು ಕೆಎಸ್‍ಆರ್‍ಟಿಸಿ ಸೇರಿ ಬಸ್ ಹಾಗೂ ಸಂಚಾರಿ ವಾಹನ ಸೌಲಭ್ಯಗಳಲ್ಲಿ ವ್ಯತ್ಯಯವಾಗುವ ಸಂಭವವಿದೆ.