ಭವ್ಯ ಕಟ್ಟಡದಲ್ಲಿದ್ದರೂ `ಮಹಾರಾಣಿ’ಯರ ಹಲವು ಸಮಸ್ಯೆಗೆ ಇನ್ನೂ ಪರಿಹಾರವಿಲ್ಲ!?
ಮೈಸೂರು

ಭವ್ಯ ಕಟ್ಟಡದಲ್ಲಿದ್ದರೂ `ಮಹಾರಾಣಿ’ಯರ ಹಲವು ಸಮಸ್ಯೆಗೆ ಇನ್ನೂ ಪರಿಹಾರವಿಲ್ಲ!?

November 12, 2018

ಮೈಸೂರು: ಸ್ವಚ್ಛ, ಸುಂದರ, ಐತಿಹಾಸಿಕ, ಪಾರಂಪರಿಕ, ಅರಮನೆಗಳ ನಗರಿ ಎಂಬ ಹಿರಿಮೆಯ ಗರಿ ಮುಡಿದಿರುವ ಮೈಸೂರು, ಶ್ರೇಷ್ಠ ಶೈಕ್ಷಣಿಕ ಕೇಂದ್ರವೂ ಹೌದು. ಇಲ್ಲಿ ಕಲಿತ ವರು ಹಾಗೂ ಕಲಿಸಿದವರಲ್ಲಿ ಅದೆಷ್ಟೋ ಮಂದಿ ರಾಷ್ಟ್ರದ ಕೀರ್ತಿ ಪುರುಷರಾಗಿದ್ದಾರೆ. ಹಾಗಾಗಿ ಇಂದಿಗೂ ವಿದೇಶಿ ವಿದ್ಯಾರ್ಥಿ ಗಳು ವ್ಯಾಸಂಗಕ್ಕೆ ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ.

ಮಹಾರಾಜ ನಾಲ್ವಡಿ ಕೃಷ್ಣ ರಾಜ ಒಡೆಯರ್ ಹಾಗೂ ದಿವಾನರಾ ಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರ ದೃಷ್ಟಿತ್ವದ ಫಲವಾಗಿ 1916ರಲ್ಲಿ ಆರಂಭ ವಾದ ಮೈಸೂರು ವಿಶ್ವವಿದ್ಯಾನಿಲಯ, `ನಹಿ ಜ್ಞಾನೇನ ಸದೃಶಂ’ ಧ್ಯೇಯದೊಂದಿಗೆ ದೇಶದ ಅದ್ವಿತೀಯ ವಿದ್ಯಾ ಕೇಂದ್ರವಾಗಿ ಬೆಳೆದಿದೆ. ರಾಷ್ಟ್ರಕವಿ ಕುವೆಂಪು ಅವರ ಕನಸಿನ ಮಾನಸ ಗಂಗೋತ್ರಿ ವಿವಿಯ ಘನತೆ ಹೆಚ್ಚಿಸಿದೆ.

ಜೊತೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಗಳೂ ಮೈಸೂರಿನಲ್ಲಿದ್ದು, 3 ವಿಶ್ವವಿದ್ಯಾನಿಲಯ ಗಳ ಕಾರ್ಯಸ್ಥಾನವಾಗಿರುವುದು ಸಂತ ಸದ ಸಂಗತಿ. ಮಹಾರಾಜರು ಆರಂಭಿ ಸಿದ ಶಿಕ್ಷಣ ಕೇಂದ್ರಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳ ಬೀಡಾ ಗಿರುವ ಮೈಸೂರಿನಲ್ಲಿ ಶಿಕ್ಷಣ ಪಡೆಯು ವುದೇ ಕೆಲವರ ಪಾಲಿನ ಭಾಗ್ಯ. ಆದರೆ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವಿದ್ಯಾರ್ಥಿನಿಯರು ಇಂದಿಗೂ ಸಮಸ್ಯೆ ಗಳಿಂದ ಮುಕ್ತರಾಗಿಲ್ಲ. ಜೆಎಲ್‍ಬಿ ರಸ್ತೆಯ ಲ್ಲಿರುವ ಮಹಾರಾಣಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಅತೀ ಹೆಚ್ಚಿದ್ದ ಕಾರಣ ವಿನಾಯಕ ನಗರದಲ್ಲಿ ನೂತನ ಕಟ್ಟಡ ನಿರ್ಮಿಸಿ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗವನ್ನು ಸ್ಥಳಾಂತರಿಸಲಾಗಿದೆ. ಸುಸಜ್ಜಿತ ಕಟ್ಟಡ, ವಿಸ್ತಾರವಾದ ಕೊಠಡಿಗಳೇನೋ ಇವೆ. ಆದರೆ ವಿದ್ಯಾರ್ಥಿನಿಯರಿಗೆ ಅನುಕೂಲ ವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಇನ್ನೂ ಕೈಗೂಡಿಲ್ಲ.

ಕಾಲೇಜು ಮುಂಭಾಗದಲ್ಲಿದ್ದ ಹೂಗುಚ್ಛ ಮಾರಾಟಗಾರರ ಪೆಟ್ಟಿ ಅಂಗಡಿಗಳನ್ನು ತೆರವುಗೊಳಿಸಿದ್ದು, ಸದ್ಯ ಕಾಲೇಜಿಗೆ ಅನತಿ ದೂರದಲ್ಲಿ ನೆಲೆಯೂರಿವೆ. ಆದರೆ ಇಲ್ಲಿ ರುವ ನಂದಿನಿ ಹಾಲು ಮಾರಾಟ ಮಳಿಗೆ ತೆರವಾಗಿಲ್ಲ. ಇಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗಿಂತ ಹೆಚ್ಚಾಗಿ ಟೀ, ಕಾಫಿ, ಸಿಗರೇಟ್ ಮಾರಾಟವೇ ಜೋರಾಗಿದೆ. ದಿನವಿಡೀ ಇಲ್ಲಿ ಧೂಮಪಾನಿಗಳ ಹಾವಳಿ. ಈ ಮಳಿಗೆ ಕಾಲೇಜಿನ ಗೇಟಿಗೆ ಹತ್ತಿರ ದಲ್ಲೇ ಇರುವುದರಿಂದ ವಿದ್ಯಾರ್ಥಿನಿಯರು ಓಡಾಡಲು ಮುಜುಗರಪಡುವಂತಾಗಿದೆ. ಕೆಲ ಪುಂಡರು ಟೀ-ಸಿಗರೇಟು ಸೇವಿಸುತ್ತಾ ವಿದ್ಯಾರ್ಥಿನಿಯರತ್ತ ಕೆಕ್ಕರಿಸಿಕೊಂಡು ನೋಡು ತ್ತಾರೆ. ಯಾವುದೇ ವಿದ್ಯಾ ಕೇಂದ್ರದ ಬಳಿ ತಂಬಾಕು ಹಾಗೂ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಗೆ ನಿಷೇಧ ವಿದ್ದರೂ ಇಲ್ಲಿ ಅನ್ವಯವಾದಂತಿಲ್ಲ ಎಂದು ಹೆಸರೇಳಲಿಚ್ಛಿಸದ ವಿದ್ಯಾರ್ಥಿ ನಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಲೇಜು ಎದುರಿನ ಫುಟ್‍ಪಾತ್ ಇನ್ನೂ ದುರಸ್ತಿಯಾಗಿಲ್ಲ. ಕಾಂಕ್ರೀಟ್ ಹಾಕಿದ್ದು, ನೆಲ ಹಾಸು ಅಳವಡಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ. ಕಾಲೇಜು ಕಾಂಪೌಂಡ್ ಪಕ್ಕದ ಮಳೆ ನೀರು ಚರಂಡಿಯ ಒಂದು ಭಾಗ ಅದಾಗಲೇ ಮಣ್ಣು ಮತ್ತು ತ್ಯಾಜ್ಯ ಗಳಿಂದ ಮುಚ್ಚಿದೆ.

ನಡೆಯುವುದು ತಪ್ಪಿಲ್ಲ: ಬಸ್‍ಗಾಗಿ ಮೆಟ್ರೋ ಪೋಲ್ ಸರ್ಕಲ್, ಆಕಾಶವಾಣಿ ಬಳಿ ಇಲ್ಲವೇ ಪಡುವಾರಹಳ್ಳಿ ಬಳಿ ಕಿಲೋ ಮೀಟರ್ ಗಳಷ್ಟು ನಡೆದು ಹೋಗುವುದು ಇಂದಿಗೂ ತಪ್ಪಿಲ್ಲ. ಇವೆಲ್ಲಾ ಕೇಳುವವರಿಗೆ ತುಂಬಾ ಕ್ಷುಲ್ಲಕ ಸಮಸ್ಯೆಗಳೆನಿಸಬಹುದು. ಆದರೆ ಪರಿಣಾಮದ ತೀವ್ರತೆ ಅನುಭವಿಸು ವವರಿಗೇ ಗೊತ್ತು. ಹಾಗಾಗಿ ಯಾರ ಬಳಿ ಹೇಳಿಕೊಳ್ಳುವುದಕ್ಕೂ ಮುಜುಗರ. ದೂರು ನೀಡಿದರೆ ನಮ ಗೇನಾದರೂ ತೊಂದರೆ ಯಾಗಬಹುದೆಂಬ ಆತಂಕವೂ ಇದೆ. ಬೇರೆ ವಿಧಿಯಿಲ್ಲದೆ ಸಹಿಸಿ ಕೊಳ್ಳುತ್ತಿದ್ದೇ ವೆಂದು ಅಳಲು ತೋಡಿಕೊಂಡಿದ್ದಾರೆ.

Translate »