ನವದೆಹಲಿ: ಮೊದಲ ಜಾಗತಿಕ ಸಮರ ನಡೆದು ಇಂದಿಗೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಾಗತಿಕ ಸಮರದಲ್ಲಿ ಪಾಲ್ಗೊಂಡ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.
`ಶಾಂತಿ ಕಾಪಾಡುವ ಸಲು ವಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಭಾರ ತೀಯ ಯೋಧರನ್ನು ದೇಶ ಸದಾ ಸ್ಮರಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಟ್ವಿಟ್ಟರ್‍ನಲ್ಲಿ ಜಾಗತಿಕ ಸಮರದಲ್ಲಿ ಪಾಲ್ಗೊಂಡು ಹುತಾತ್ಮರಾದ ಯೋಧ ರನ್ನು ಸ್ಮರಿಸಿದ ಪ್ರಧಾನಿ ಇಂದು, ಭಯಾ ನಕ ಮೊದಲ ವಿಶ್ವ ಸಮರ ಅಂತ್ಯ ವಾಗಿ 100 ವರ್ಷ ತುಂಬಿದೆ. ಸಾಮರಸ್ಯ ಮತ್ತು ಸಹೋದರತ್ವದ ವಾತಾವರಣ ವನ್ನು ಮತ್ತಷ್ಟು ಹೆಚ್ಚಿಸಲು ವಿಶ್ವ ಶಾಂತಿ ಮತ್ತು ಪ್ರತಿಜ್ಞೆ ಕಡೆಗೆ ನಮ್ಮ ಬದ್ಧತೆ ಯನ್ನು ನಾವು ಮತ್ತಷ್ಟು ಬಲವಾಗಿಸಿಕೊಳ್ಳ ಬೇಕಿದೆ. ಮತ್ತೆ ಅಂತಹಾ ಯುದ್ಧಗಳು, ವಿನಾಶ ಸಂಭವಿಸದಂತೆ ನಾವು ಎಚ್ಚರಿಕೆ ವಹಿಸಬೇಕು” ಎಂದಿದ್ದಾರೆ.
ಭಾರತವು ಮೊದಲ ಮಹಾಯುದ್ಧದಲ್ಲಿ ನೇರ ವಾಗಿ ತೊಡಗದಿದ್ದರೂ ನಮ್ಮ ಸೈನಿಕರು ಶಾಂತಿಗಾಗಿ ವಿಶ್ವದಾದ್ಯಂತ ಹೋರಾಡಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತ ನ್ಯಾಹು ಭಾರತಕ್ಕೆ ಬಂದಾಗ, ನಾವು ತೀನ್ ಮೂರ್ತಿ ಹೈಫಾ ಚೌಕದಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿ ದ್ದೆವು ಎಂದು ಅವರು ಸ್ಮರಿಸಿಕೊಂಡಿದ್ದಾರೆ. ಮೊದಲ ವಿಶ್ವ ಸಮರ ಜುಲೈ 28, 1914ರಿಂದ ಪ್ರಾರಂಭವಾಗಿ ನವೆಂ ಬರ್ 11, 1918ರಲ್ಲಿ ಕೊನೆಗೊಂಡಿತು.