ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ
ಹಾಸನ

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚನೆ

April 29, 2019

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಪ್ರಗತಿ ಕುರಿತು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯ ಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿ ಗಳು ಹಾಗೂ ವಿವಿಧ ಯೋಜನಾ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಯಿತು.

ಬೇಲೂರಿನಲ್ಲಿ ಮೂಲ ಸೌಕರ್ಯ ಅಭಿ ವೃದ್ಧಿ ಹಾಗೂ ಪಾರಂಪರಿಕ ಸ್ಪರ್ಶದೊಂ ದಿಗೆ ಪಟ್ಟಣದ ರಸ್ತೆ, ಕಟ್ಟಡಗಳ ಸೌಂದರ್ಯ ವೃದ್ಧಿ ಕುರಿತಂತೆ ನೀಲಿ ನಕಾಶೆ ತಯಾರಿ ಕುರಿತು ಜಿಲ್ಲಾಧಿಕಾರಿ ಇಂಟೆಕ್ ಸಂಸ್ಥೆ ಪ್ರತಿ ನಿಧಿಗಳು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಬೇಲೂರು ಚನ್ನಕೇಶವ ದೇವಾಲಯ, ವಿಷ್ಣು ಸಮುದ್ರ, ಪಟ್ಟಣದ ಪ್ರಮುಖ ಬೀದಿಗಳ ವಾಣಿಜ್ಯ ಮಳಿಗೆಗಳ ಅಭಿವೃದ್ಧಿ ಸ್ವಚ್ಛತೆ, ದುರಸ್ತಿ, ಸೂಚನಾ ಫಲಕ, ಮಾರ್ಗಸೂಚಿ ಅಳವಡಿಸುವ ಕುರಿತಂತೆ ಚರ್ಚಿಸಿದ ಅವರು ಶೀಘ್ರವೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ತಿಳಿಸಿದರು.

ಇದೇ ರೀತಿ ಹಳೇಬೀಡು ದೇವಾಲ ಯದ ಸೂಕ್ತ ಮೂಲ ಸೌಕರ್ಯ ಅಭಿ ವೃದ್ಧಿ ಮತ್ತು ಸುಮಾರು 3,000 ಶಿಲ್ಪಿ ಗಳನ್ನೊಳಗೊಂಡ ಅತೀ ದೊಡ್ಡ ಬಯಲು ಶಿಲ್ಪಿ ಪ್ರದರ್ಶನ ವ್ಯವಸ್ಥೆ ಮಾಡುವ ಕುರಿತಂತೆಯೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಚರ್ಚೆ ನಡೆಸಿದರು.

ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕ ಕೆ.ಮೂರ್ತೇಶ್ವರಿ ಅವರು, ತಮ್ಮ ಇಲಾಖೆಯಿಂದ ಕೈಗೊಳ್ಳಲು ಉದ್ದೇ ಶಿಸಿರುವ ಹಾಗೂ ಹಾಲಿ ಮಂಜೂರಾ ಗಿರುವ ಯೋಜನೆಗಳ ಬಗ್ಗೆ ವಿವರಿಸಿದರು.

ಮಂಜರಬಾದ್ ಕೋಟೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಪ್ರವಾಸಿ ವೀಕ್ಷಣಾ ಗೋಪುರ ನಿರ್ಮಾಣ, ರಸ್ತೆ ಕಾಮಗಾರಿ, ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ಕೂಡ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಂದ ಮಾಹಿತಿ ಪಡೆದು, ಈಗಾಗಲೇ ಮಂಜೂ ರಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.

ವಿವಿಧ ತಾಲೂಕುಗಳಲ್ಲಿ ಈಗಾಗಲೇ ಮಂಜೂರಾಗಿರುವ ಹಲವು ಇಲಾಖೆಗಳ ಮೂಲಕ ನಡೆಯುತ್ತಿರುವ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಈಗಾಗಲೇ ಹಣ ಬಿಡುಗಡೆಯಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣ ಗೊಳಿಸಿ ಹಾಗೂ ಅದನ್ನು ನಿಯಮಾನು ಸಾರ ಹಸ್ತಾಂತರಿಸಿ, ಪ್ರವಾಸೋದ್ಯಮ ಇಲಾಖೆ ಅನುದಾನದ ಬಗ್ಗೆ ಪ್ರದರ್ಶನ ಶಿಲೆಯಲ್ಲಿ ವಿವರ ನಮೂದಿಸಿ ಎಂದು ಹೇಳಿದರು.
ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಸಕ ಲೇಶಪುರ ತಾಲೂಕು ರಸ್ತೆಗಳ ಅಭಿವೃದ್ಧಿ ಕುರಿತು ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ನಿರ್ದೇಶನ ನೀಡಿದರು. ನಿಸರ್ಗಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಪ್ರವಾಸಿ ತಾಲೂಕುಗಳ ಅಭಿವೃದ್ಧಿಪಡಿಸಿ ನಿರ್ವ ಹಣೆ ಮಾಡಬೇಕು ಎಂದು ಹೇಳಿದರು.

ಕೆ.ಆರ್.ಐ.ಡಿ.ಎಲ್, ಪುರಾತತ್ವ ಇಲಾಖೆ, ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಭೆಯಲ್ಲಿ ಪ್ರವಾಸೋ ದ್ಯಮ ಇಲಾಖೆಯ ಉಪನಿರ್ದೇಶಕ ಟಿ.ಬಿ. ರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಅಮೃತ್ ಯೋಜನೆ ತ್ವರಿತ ಪೂರ್ಣಕ್ಕೆ ಸೂಚನೆ
ಹಾಸನ: ನಗರಕ್ಕೆ ಕುಡಿಯುವ ನೀರು ಪೂರೈಸುವ ಅಮೃತ್ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮ ವಾರ ಅಮೃತ್ ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಜಿಲ್ಲಾಧಿಕಾರಿ 140 ಲಕ್ಷ ಲೀಟರ್‍ಗಳ ಸಾಮಥÀ್ರ್ಯದ ಜಲ ಸಂಗ್ರಹಾ ಗಾರ ನಿರ್ಮಿಸುವ ಸಂಬಂಧ ಹಾಸನ ತಾಲೂಕು ಕಟ್ಟಾಯ ಗ್ರಾಮದ (ಸಿರಾಜ್ ಬೋರೇಕಾವಲ್) ಸ.ನಂ.2/ಪಿ ರಡಿ ಬರುವ ಅಗತ್ಯ ಜಮೀನನ್ನು ಭೂಸ್ವಾಧೀನ ಪಡಿಸುವ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಭೂ ದಾಖಲೆ ಉಪನಿರ್ದೇಶಕ ಕೃಷ್ಣಕುಮಾರ್, ತಹಶೀಲ್ದಾರರಾದ ಶ್ರೀನಿವಾಸಯ್ಯ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿಗಳು, ಒಳ ಚರಂಡಿ ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಹಾಜರಿದ್ದರು.

Translate »