ಶರಣ ಸಾಹಿತ್ಯ ವಿಶ್ವಮಾನ್ಯವಾಗಲಿ: ಬಸವಲಿಂಗ ಶಿವಯೋಗಿ ಸ್ವಾಮೀಜಿ
ಹಾಸನ

ಶರಣ ಸಾಹಿತ್ಯ ವಿಶ್ವಮಾನ್ಯವಾಗಲಿ: ಬಸವಲಿಂಗ ಶಿವಯೋಗಿ ಸ್ವಾಮೀಜಿ

April 30, 2019

ರಾಮನಾಥಪುರ: ವಚನಕಾ ರರು ಮಣ್ಣಿನ ಸಂಸ್ಕøತಿಯಿಂದ ಬಂದವರು, ವಿಶ್ವ ಪ್ರೇಮ, ವಿಶ್ವಬಾಂಧವ್ಯ, ವಿಶ್ವ ಶಾಂತ ತ್ವವನ್ನು ಬೆಳಸಿ, ಶರಣ ಸಾಹಿತ್ಯವನ್ನು ವಿಶ್ವಮಾನ್ಯ ಸಾಹಿತ್ಯವನ್ನಾಗಿ ಮಾಡಿದ್ದಾರೆ ಎಂದು ತಾಲೂಕು ಶರಣ ಸಾಹಿತ್ಯ ಪರಿ ಷತ್ ಗೌರವಾಧ್ಯಕ್ಷ ಹಾಗೂ ಬಸವ ಪಟ್ಟಣದ ಶ್ರೀತೋಂಟದಾರ್ಯ ಸಂಸ್ಥಾನ ಮಠದ ಶ್ರೀಸ್ವತಂತ್ರ ಬಸವಲಿಂಗ ಶಿವ ಯೋಗಿ ಸ್ವಾಮೀಜಿ ಹೇಳಿದರು.

ರಾಮನಾಥಪುರ ಹೋಬಳಿ ಬಸವ ಪಟ್ಟಣದ ಶ್ರೀತೋಂಟದಾರ್ಯ ಸಂಸ್ಥಾನ ಮಠದಲ್ಲಿ ದತ್ತಿ ಉಪನ್ಯಾಸ ಹಾಗೂ ಅಕ್ಕಮಹಾದೇವಿ ಜಯಂತಿ, ದತ್ತಿ ದಾನಿ ಗಳಾದ ಬೆಂಗಳೂರು ಸರ್ವಮಂಗಳ ಮತ್ತು ಭಾರತಿ ಗಂಗಮ್ಮ ಕರಿಬಸಪ್ಪ ದತ್ತಿ [107] ಮತ್ತು ಬೆಂಗಳೂರು ಎಸ್.ಸಿ. ಶಂಕರಪ್ಪ [271] ಅವರ ದತ್ತಿ ಅವರ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸಜ್ಜ ನರ ವಿಚಾರಧಾರೆಗಳ ಮಹತ್ವ, ಜೀವನ ಸಾರ್ಥಕಗೊಳಿಸಲು ಸದ್ಭಾವದ ವಿಚಾರ ಗಳನ್ನು ಕೇಳುವುದರಿಂದ ಮನಸ್ಸಿಗೆ ಸಂತೋಷ ಹಾಗೂ ಉಲ್ಲಾಸ ನೀಡುತ್ತದೆ ಎಂದರು.

ಜಿಲ್ಲಾ ಶರಣ ಪರಿಷತ್ತು ಜಿಲ್ಲಾ ಅಧ್ಯಕ್ಷೆ ಸುಶೀಲಾ, ಸಾಹಿತಿ ಹಾಸನ ಸುಮಾ ವೀಣಾ, ಗ್ರಾಪಂ ಅಧ್ಯಕ್ಷೆ ನಾಗರತ್ನ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಕಾವೇರಿ ನದಿ ಸ್ವಚ್ಛತಾ ಸಮಿತಿ ರಾಜ್ಯ ಸಂಚಾಲಕ ಕುಶಾಲನಗರ ಚಂದ್ರಮೋಹನ್, ತಾಲೂಕು ಅಧ್ಯಕ್ಷ ಸಿದ್ದ ರಾಜು, ವೀರಶೈವ ಸಮಾಜದ ಕಾರ್ಯ ದರ್ಶಿ ಬಿ.ಎನ್.ವಾಗೀಶ್, ಸಮಾಜ ಸೇವಕಿ ಜ್ಯೋತಿಶ್ರೀಕಂಠಪ್ಪ ಇತರರಿದ್ದರು.

Translate »