ಇಓಗೆ ತಹಸೀಲ್ದಾರ್ ನೋಟೀಸ್: ನೌಕರರ ಪ್ರತಿಭಟನೆ
ಹಾಸನ

ಇಓಗೆ ತಹಸೀಲ್ದಾರ್ ನೋಟೀಸ್: ನೌಕರರ ಪ್ರತಿಭಟನೆ

April 30, 2019

ಬೇಲೂರು: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿಗಳಿಗೆ ಅವರ ಹುದ್ದೆಯ ಘನತೆ ಯನ್ನು ಮೀರಿ ತಾಲೂಕು ತಹಸೀಲ್ದಾರ್ ಅವರು ನೋಟೀಸ್ ನೀಡಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಪಟ್ಟ ಣದ ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಸೋಮವಾರ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆ ನಡೆಸಿದರು.

ತಾಪಂ ಇಓ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅವರ ಹುದ್ದೆಗೆ ತಕ್ಕುದಾದ ಗೌರವವನ್ನು ನೀಡದೇ ತಹಶೀ ಲ್ದಾರ್ ಅವರಿಗೆ ನೋಟೀಸ್ ನೀಡಿ, ಅಮಾ ನತ್ತಿಗೆ ಶಿಫಾರಸ್ಸು ಮಾಡುವ ಎಚ್ಚರಿಕೆ ಯನ್ನು ನೀಡಿದ್ದಾರೆ ಎಂದು ದೂರಿದರು.
ತಹಶೀಲ್ದಾರ್ ಅವರ ಈ ಕ್ರಮ ಪಂಚಾ ಯತ್ ರಾಜ್ ಅಧಿನಿಯಮ 1973ರ ಪ್ರಕರಣ 155(1) ರೀತ್ಯಾ ಕಾನೂನು ಬಾಹಿರವಾ ಗಿದೆ. ತಹಶೀಲ್ದಾರ್ ಅವರು ತಮ್ಮ ಅಧೀನ ಆಧಿಕಾರಿಗಳಿಗೆ ನೋಟೀಸ್ ನೀಡಿ ಕಾರಣ ಕೇಳಬಹುದು. ಆದರೆ, ಒಬ್ಬ ಸರ್ಕಾರಿ ಎ ಗ್ರೇಡ್ ಅಧಿಕಾರಿಗೆ ತಮ್ಮ ಕಾರ್ಯವ್ಯಾಪ್ತಿ ಮೀರಿ ನೋಟೀಸ್ ನೀಡಿ ದ್ದಾರೆ ಎಂದು ಆರೋಪಿಸಿದರು.

ನೋಟೀಸ್‍ನಲ್ಲಿ ಬಳಸಿರುವ ಪದಗಳು ಅಸಾಂವಿಧಾನಿಕವಾಗಿದೆ ಎಂದು ಅವರು, ತಹಶೀಲ್ದಾರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಮನವಿ ಪತ್ರ ವೊಂದನ್ನು ತಾಪಂ ಕಾರ್ಯನಿರ್ವಹಣಾ ಧಿಕಾರಿ ಆರ್.ರವಿಚಂದ್ರ ಅವರಿಗೆ ತಾಪಂ ಕಚೇರಿ ಮುಂದೆ ಸಲ್ಲಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೌಕರರ ಸಂಘದ ಕುಮಾರ್, ಸಂತೋಷ್, ಹರೀಶ್, ಮುಕ್ಕಣ್ಣಯ್ಯ, ಪ್ರದೀಪ್, ಶಿವಯ್ಯ ಮತ್ತಿತರರು ಪಾಲ್ಗೊಂಡಿದ್ದರು.

Translate »