ಅರಸೀಕೆರೆ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಬವಣೆ ಉಂಟಾಗಿದ್ದು, ಪ್ರತಿ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆ ನೀಡಿದರು.
ಏ. 29ರಂದು ‘ಮೈಸೂರುಮಿತ್ರ’ ಪತ್ರಿಕೆ ಯಲ್ಲಿ ‘ಅರಸೀಕೆರೆಯಲ್ಲಿ ನೀರಿಲ್ಲ’ ಶಿರ್ಷಿಕೆಯಡಿ ಪ್ರಕಟ ವಾಗಿದ್ದ ವರದಿಗೆ ಜಿಲ್ಲಾಡ ಳಿತ ಎಚ್ಚೆತ್ತಿದೆ. ಬುಧವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಯನ್ನು ಅವಲೋಕಿಸಿ ನೀರಿನ ಬವಣೆ ನೀಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ದಿನದಿಂದ ದಿನಕ್ಕೆ ಅಂತರ್ಜಲ ಕುಸಿತದಿಂದ ತಾಲೂಕಿ ನಾದ್ಯಂತ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈಗಾ ಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗು ತ್ತಿದ್ದು, ಹೆಚ್ಚುವರಿ ಟ್ಯಾಂಕರ್ ಬಳಿಸಿ ನೀರು ಸರಬರಾಜು ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.
ವಿವಿಧ ಗ್ರಾಮಗಳಲ್ಲಿ ಕೆರೆಗಳನ್ನು ವೀಕ್ಷಿಸಿದ ಅವರು ಕೆರೆಗಳ ಹೂಳೆತ್ತುವ ಪ್ರಕ್ರಿಯನ್ನು ಪ್ರಾರಂಭಿಸುವುದರ ಮೂಲಕ ಮಳೆ ನೀರನ್ನು ಸಂಗ್ರಹಿಸಲು ತುರ್ತು ಕ್ರಮವನ್ನು ತಾಲೂಕು ಆಡಳಿತ ತೆಗೆದುಕೊಳ್ಳಬೇಕು. ಅರಸೀಕೆರೆ ತಾಲೂಕಿನಲ್ಲಿ ಬರಗಾಲ ತಾಂಡವಾಡುತ್ತಿದ್ದು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಸಾಕಷ್ಟು ಹಣವನ್ನು ಸರ್ಕಾರವು ಮೀಸಲಿರಿಸಿದೆ. ಆ ನಿಟ್ಟನಲ್ಲಿ ಅಧಿಕಾರಿ ಗಳು ಜನತೆಯ ಸಮಸ್ಯೆಗೆ ಸ್ಪಂಧಿಸಿ ವಿಳಂಬ ಮಾಡದೇ ಕಾರ್ಯೋ ನ್ಮುಖರಾಗಬೇಕು ಎಂದರು.
ಹಾಸನ ತಾಲೂಕಿನ ಪುರದಮ್ಮ ಗ್ರಾಮದಲ್ಲಿ ಹಸಿರು ಪ್ರತಿಷ್ಠಾನ ದಿಂದ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅರಸೀಕೆರೆ ತಾಲೂಕಿನ ನೀರಗುಂದ, ಮಹ ದೇವಹಳ್ಳಿ, ಗಂಡಸಿ ಹೋಬಳಿ ಲಾಳನಕೆರೆ ಸಂತೇಮೈದಾನ ಪ್ರದೇಶ, ಮಾರಶೆಟ್ಟಿ ಹಳ್ಳಿ, ಬಿದಿರೆಕಾವಲು, ಹೊಸೂರು ಗುಟ್ಟೇನಹಳ್ಳಿ, ಚಿನ್ನೇನ ಹಳ್ಳಿ ಗಡಿ ಪ್ರದೆಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಈಗಾಗಲೇ ಸರಬರಾಜು ಮಾಡುತ್ತಿರುವ ನೀರಿನ ಟ್ಯಾಂಕ್‍ಗಳ ಜೊತೆಯಲ್ಲಿ ಮತ್ತಷ್ಟು ಟ್ಯಾಂಕ್‍ಗಳಲ್ಲಿ ನೀರನ್ನು ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ದಂಡಾಧಿಕಾರಿ ಸಂತೋಷ್‍ಕುಮಾರ್, ತಾಪಂ ಇಓ ಕೃಷ್ಣಮೂರ್ತಿ, ಗ್ರಾಮೀಣ ಕುಡಿಯುವ ನೀರು ಸರಬ ರಾಜು ಇಲಾಖೆ ಅಭಿಯಂತರ ಶಿವಾನಂದ್, ಗಂಡಸಿ ಹೋಬಳಿ ರಾಜಸ್ವ ಉಮೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.