ವೃತ್ತಿಪರ ಶಿಕ್ಷಣದ ಅಗ್ರಪಂಕ್ತಿಯಲ್ಲಿ ನರ್ಸಿಂಗ್ ಕೋರ್ಸ್
ಹಾಸನ

ವೃತ್ತಿಪರ ಶಿಕ್ಷಣದ ಅಗ್ರಪಂಕ್ತಿಯಲ್ಲಿ ನರ್ಸಿಂಗ್ ಕೋರ್ಸ್

May 27, 2019

ಚನ್ನರಾಯಪಟ್ಟಣ: ದೇಶಾ ದ್ಯಂತ ಬಹುಬೇಡಿಕೆ ಇರುವ ವೃತ್ತಿಪರ ಶಿಕ್ಷ ಣದಲ್ಲಿ ನರ್ಸಿಂಗ್ ಶಿಕ್ಷ ಣ ಅಗ್ರಪಂಕ್ತಿ ಯಲ್ಲಿದ್ದು, ಈ ವೃತ್ತಿಯ ಬಗ್ಗೆ ಯಾರ ಲ್ಲಿಯೂ ಕೀಳರಿಮೆ ಬೇಡ ಎಂದು ಬಿ.ಜಿ. ನಗರದ ಆದಿಚುಂಚನಗಿರಿ ಶುಶ್ರೂಷ ಮಹಾ ವಿದ್ಯಾಲದ ಪ್ರಾಂಶುಪಾಲ ಪೆÇ್ರ.ಕೆ.ಜಿ. ವಿಜಯಕುಮಾರ್ ಹೇಳಿದರು.

ಪಟ್ಟಣದ ವೈದ್ಯ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸೈನ್ಸ್‍ನ ವೈದ್ಯೋ ತ್ಸವ ಹಾಗೂ ಅಂತಾರಾಷ್ಟ್ರೀಯ ದಾದಿ ಯರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧನೆ ಮಾಡಿ ಮಾತನಾಡಿದರು.

ಸಮಾಜದಲ್ಲಿ ದಿನೇ ದಿನೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಅಗತ್ಯವಾ ದಷ್ಟು ಸಂಖ್ಯೆಯಲ್ಲಿ ಶುಶ್ರೂಷಕರು ಲಭ್ಯ ವಿಲ್ಲದ ಕಾರಣ ಹೊರದೇಶಗಳಲ್ಲೂ ಈ ವೃತ್ತಿಗೆ ಬೇಡಿಕೆ ಇದೆ. ಸಮಯಕ್ಕೆ ಮಹತ್ವ ನೀಡಿ ಗೌರವದಿಂದ ನಿಮ್ಮ ವೃತ್ತಿಯನ್ನು ಕಂಡುಕೊಳ್ಳಬೇಕು. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಣೆ ಮಾಡಬೇಕೆಂದರು.

ರೋಗಿಗಳನ್ನು ಶುಶ್ರೂಷೆ ಮಾಡುವ ಮೊದಲು ಅವರ ಪರಿಸ್ಥಿತಿಯನ್ನು ಸರಿಯಾಗಿ ತಿಳಿದುಕೊಳ್ಳುವ ಸಮಾಧಾನ ಹೊಂದಿರ ಬೇಕು. ನಂತರ ಚಿಕಿತ್ಸೆಗೆ ಮುಂದಾಗಬೇಕೆಂದ ಅವರು ಕೌಶಲ್ಯಯುತ ಕೆಲಸ ನಿಮ್ಮದಾಗಿರ ಬೇಕು. ಸಮವಸ್ತ್ರದಲ್ಲಿದ್ದಾಗ ವೃತ್ತಿಯ ಘನತೆಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳ ಬೇಕೆಂದು ಕಿವಿಮಾತು ಹೇಳಿದ ಅವರು ಬಹುಭಾಷಿಕರಾದರೆ ವಿಫುಲ ಅವಕಾಶ ಗಳು ನಿಮ್ಮನ್ನು ಅರಸಿಬರುತ್ತವೆ ಎಂದರು.
ಪುರಸಭೆ ಸದಸ್ಯ ಸಿ.ಎನ್.ಶಶಿಧರ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತ ನಾಡಿ, ಇದೊಂದು ಪವಿತ್ರ ವೃತ್ತಿಯಾ ಗಿದ್ದು ಸಮಾಜಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕರ್ತವ್ಯನಿರ್ವಹಿಸಬೇಕು. ಸೇವೆ ಗಾಗಿ ನಿಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿ ಈ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡಿರು ವುದು ಪ್ರಶಂಸನೀಯವಾಗಿದ್ದು ಸಾಮಾ ಜಿಕ ಕಳಕಳಿ ಇರಲಿ ಎಂದರು.

ನಿಮ್ಮ ಕೆಲಸದ ಜೊತೆಗೆ ಪರಿಸರದ ಕಾಳಜಿಯನ್ನೂ ಹೊಂದಿರಬೇಕು. ಗಿಡ ಗಳನ್ನು ನೆಟ್ಟು ಬೆಳೆಸುವ ಪರಿಪಾಠ ಬೆಳೆಸಿ ಕೊಳ್ಳಬೇಕು. ಇಲ್ಲದಿದ್ದರೆ ತಾಪಮಾನ ಇನ್ನೂ ಹೆಚ್ಚಾಗಿ ಅನೇಕ ಅನಾಹುತಗಳಿಗೆ ನಾವೇ ಕಾರಣರಾಗಬೇಕಾಗುತ್ತದೆ. ನೀರನ್ನು ಮಿತವಾಗಿ ಬಳಕೆ ಮಾಡಬೇಕೆಂದರು. ಪ್ರಾಂಶುಪಾಲ ಬಿ.ಎಲ್.ಅರುಣ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ ದೀಪಪ್ರಜ್ವಲನಕ್ಕೆ ನೆರವಾದರು.

Translate »