ಪರಿಶಿಷ್ಟ ಜಾತಿ ಪ್ರಗತಿ ಪತ್ತಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಚಾಮರಾಜನಗರ

ಪರಿಶಿಷ್ಟ ಜಾತಿ ಪ್ರಗತಿ ಪತ್ತಿನ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

September 2, 2018

ಗುಂಡ್ಲುಪೇಟೆ:  ತಾಲೂಕು ಪರಿಶಿಷ್ಟ ಜಾತಿ ಪ್ರಗತಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಪುಟ್ಟಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಅಣ್ಣಯ್ಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಖಾಲಿ ಇದ್ದ ಒಂದು ಮಹಿಳಾ ಮೀಸಲು ಸ್ಥಾನವನ್ನು ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಡಗೂರು ಪಿ.ಪುಟ್ಟಸ್ವಾಮಿ, ಉಪಾ ಧ್ಯಕ್ಷರಾಗಿ ಪಟ್ಟಣದ ಅಣ್ಣಯ್ಯಸ್ವಾಮಿ ಮತ್ತು ನಿರ್ದೇಶಕರಾಗಿ ಟಿ.ಆಂಜನೇಯ, ಎಂ.ಸುರೇಶ್, ಬಿ.ಕೆ.ಬೊಮ್ಮಯ್ಯ, ಎ.ಸಿದ್ದರಾಜು, ಕೆ.ಸಿ.ಸಿದ್ದರಾಜು, ಮಲಿದಾಸಯ್ಯ, ಎ.ಸೋಮಶೇಖರಮೂರ್ತಿ, ವಿಷಕಂಠಮೂರ್ತಿ, ಎಂ.ಯಶವಂತ್, ಆರ್.ಶ್ರೀನಿವಾಸ್, ಸಿದ್ದರಾಜು, ಸಿ.ಅರಸಮ್ಮ ಅವಿ ರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜಿ.ಜನಾ ರ್ಧನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಪದಾಧಿಕಾರಿಗಳಿಗೆ ಸಂಸ್ಥಾಪಕ ಅಧ್ಯಕ್ಷ ಮತ್ತು ಮಾಜಿ ಸಂಸದ ಎ.ಸಿದ್ದರಾಜು ಮತ್ತು ನಿರ್ಗಮಿತ ಅಧ್ಯಕ್ಷ ಬಿ.ಕೆ.ಬೊಮ್ಮಯ್ಯ, ಕಾರ್ಯದರ್ಶಿ ಆರ್.ಬೆಳ್ಳಯ್ಯ ಅಭಿನಂದಿಸಿದರು.

Translate »