ಬಿಳಿಗಿರಿ ರಂಗನಾಥಸ್ವಾಮಿಗೆ ಶ್ರಾವಣ ಮಾಸದ ವಿಶೇಷ ಪೂಜೆ
ಚಾಮರಾಜನಗರ

ಬಿಳಿಗಿರಿ ರಂಗನಾಥಸ್ವಾಮಿಗೆ ಶ್ರಾವಣ ಮಾಸದ ವಿಶೇಷ ಪೂಜೆ

September 2, 2018

ಯಳಂದೂರು: ತಾಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ ಮೂರನೇ ಶ್ರಾವಣ ಶನಿವಾರದ ಅಂಗ ವಾಗಿ ಬಿಳಿಗಿರಿ ರಂಗನಾಥಸ್ವಾಮಿ ಮತ್ತು ಅಲಮೇಲು ಮಂಗಮ್ಮ ಅವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಬಂದು ಸ್ವಾಮಿಯ ದರ್ಶನ ಪಡೆದರು. ಸ್ವಾಮಿಗೆ ಪ್ರಿಯವಾದ ತುಳಸಿ ಮಾಲೆ ಅರ್ಪಿಸಿ ಇಷ್ಟರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.

ಬೆಳಿಗ್ಗೆಯಿಂದಲ್ಲೆ ಬೆಟ್ಟಕ್ಕೆ ಆಗಮಿಸಿದ ಭಕ್ತರು ಬಿಳಿಗಿರಿ ರಂಗನಾಥಸ್ವಾಮಿ, ಅಲ ಮೇಲು ಮಂಗಮ್ಮ ಅವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸಂಸದ ಆರ್.ಧ್ರುವ ನಾರಾಯಣ ಬೆಟ್ಟಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಶ್ರಾವಣ ಮಾಸದ ಅಂಗವಾಗಿ ಭಕ್ತರು ಬೆಟ್ಟಕ್ಕೆ ಪ್ರತಿವಾರ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮ ದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು.

ವರಾಹಸ್ವಾಮಿ ದರ್ಶನ ಪಡೆದರೇ ತಿರು ಪತಿ ದರುಶನ!: ಶ್ರಾವಣ ಮಾಸದ ವಿಶೇಷ ಏನೆಂದರೆ ಯಳಂದೂರು ಪಟ್ಟಣ ಹೃದಯ ಭಾಗದಲ್ಲಿರುವ ಶ್ರೀ ಭೂ ಲಕ್ಷ್ಮಿವರಾಹ ಸ್ವಾಮಿ ದರ್ಶನ ಪಡೆದು ನಂತರ ಬಿಳಿ ಗಿರಿರಂಗನಾಥಸ್ವಾಮಿ ದರ್ಶನ ಪಡೆದರೆ ಸಾಕ್ಷತ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆ ದಷ್ಟೇ ಪುಣ್ಯ ಬರುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ, ಇಂದಿಗೂ ನೂರಾರು ಭಕ್ತರು ಭೂ ವರಾಹ ಲಕ್ಷ್ಮಿಸ್ವಾಮಿ ದರ್ಶನ ಪಡೆದು ಬೆಟ್ಟಕ್ಕೆ ಹೋಗುತ್ತಾರೆ.

ಟ್ರಾಫಿಕ್ ಜಾಮ್: ಕಾರು, ಬೈಕ್‍ನಲ್ಲಿ ಬೆಟ್ಟಕ್ಕೆ ಭಕ್ತರು ಬಂದಿದ್ದರಿಂದ ಬೆಟ್ಟದಲ್ಲಿ ವಾಹನ ದಟ್ಟನೆ ಉಂಟಾಗಿ ಸಾರ್ವಜನಿ ಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸಂಚಾರ ದಟ್ಟನೆ ನಿಯಂತ್ರಿಸಲು ಪೊಲೀ ಸರು ಹರಸಾಹಸಪಟ್ಟರು.
ವಿಶೇಷ ಪೂಜೆ ಅಂಗವಾಗಿ ದೇವ ಸ್ಥಾನದ ಆವರಣದಲ್ಲಿ ಭಕ್ತರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರವಾಸೋದ್ಯಮಗೊಳಿಸಲು ಕ್ರಮ: ಸಂಸದ
ಯಳಂದೂರು:  ಪ್ರವಾಸಿಗರ ಆಕರ್ಷಣೆ ಮಾಡುವ ಪ್ರೇಕ್ಷಣಿಯ ಸ್ಥಳವಾದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟವನ್ನು ಪ್ರವಾಸಿ ಕೇಂದ್ರವಾಗಿ ಹೆಚ್ಚಿನ ರೀತಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಿಳಿಗಿರಿರಂಗನಬೆಟ್ಟಕ್ಕೆ ರೇಷ್ಮೆ ಮತ್ತು ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರನ್ನು ಖುದ್ದು ಕರೆ ತಂದು ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಸಂಸದ ಆರ್.ಧ್ರುವನಾರಾಯಣ ಭರವಸೆ ನೀಡಿದರು.

ಬೆಟ್ಟಕ್ಕೆ ಭೇಟಿ ನೀಡಿ ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ನವೀಕರಣ ಕಾಮಗಾರಿ ಪ್ರಗತಿಯಲ್ಲಿ ಇದ್ದು, ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣ ಗೊಂಡಿದೆ. ದೇವಾಲಯದ ಪಕ್ಕದಲ್ಲಿರುವ ಪಾಕ ಶಾಲೆ ನಿರ್ಮಿಸಲು ಲೋಕೋ ಪಯೋಗಿ ಇಲಾಖೆ ಅನುದಾನ ನೀಡಲಾಗಿದೆ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.

Translate »