ಒಂದು ವರ್ಷ ನನ್ನ ಯಾರೂ ಟಚ್ ಮಾಡಲು ಸಾಧ್ಯವಿಲ್ಲ: ವಿರೋಧಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂದೇಶ
ಮೈಸೂರು

ಒಂದು ವರ್ಷ ನನ್ನ ಯಾರೂ ಟಚ್ ಮಾಡಲು ಸಾಧ್ಯವಿಲ್ಲ: ವಿರೋಧಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂದೇಶ

June 16, 2018

ಬೆಂಗಳೂರು:  ಮುಂದಿನ ಲೋಕಸಭಾ ಚುನಾವಣೆವರೆಗೆ ನನ್ನನ್ನು ಯಾರೂ ಟಚ್ ಮಾಡಲು ಸಾಧ್ಯ ವಿಲ್ಲ, ಅಲ್ಲಿಯವರೆಗೂ ಅಧಿಕಾರದಲ್ಲಿ ಇರು ತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಿಸಿದ್ದಾರೆ.

ನಗರದಲ್ಲಿ 15ನೇ ರಾಜ್ಯಮಟ್ಟದ ಲೆಕ್ಕ ಪರಿಶೋಧಕರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಹಳಷ್ಟು ಜನ ಕಾಲೆಳೆಯಲು ಇರುತ್ತಾರೆ ಎಂದು ಪರೋಕ್ಷ ವಾಗಿ ವಿರೋಧ ಪಕ್ಷದ ನಾಯಕರಿಗೆ ತಿರು ಗೇಟು ನೀಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಸರ್ಕಾರದ ವಿರುದ್ಧ ಹಲವು ಚಟುವಟಿಕೆ ಗಳು ನಡೆಯುತ್ತಿವೆ, ನಾನು ಇದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ನದೆಹಲಿ ವರಿಷ್ಠರು ಸರ್ಕಾರದ ಪರ ನಿಂತಿದ್ದಾರೆ. ಹೀಗಾಗಿ ಯಾರು ಏನೇ ಮಾಡಿದರೂ ಒಂದು ವರ್ಷ ನನ್ನನ್ನು ಮುಟ್ಟಲು ಸಾಧ್ಯವಿಲ್ಲ.

ಅಧಿಕಾರದಲ್ಲಿ ಇರುವಷ್ಟು ದಿನ ಅಭಿ ವೃದ್ಧಿಗೆ ಒತ್ತು ಕೊಡುತ್ತೇನೆ, ಇದಕ್ಕೆ ಪ್ರಕೃತಿಯೂ ನನ್ನ ಪರವಾಗಿ ನಿಂತಿದೆ, ರಾಜ್ಯಾದ್ಯಂತ ಉತ್ತಮ ಮಳೆಯಾಗಿ ಜಲಾಶಯಗಳಿಗೆ ನೀರಿನ ಮಹಾಪೂರವೇ ಹರಿದು ಬರು ತ್ತಿದೆ. ಸತತವಾಗಿ ಬರಗಾಲದಿಂದ ನಲು ಗಿದ ರೈತರಿಗೆ ಈ ವರ್ಷ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಯಾವ ತೊಂದರೆ ಆಗುವುದಿಲ್ಲ.

ಮಳೆ ಇಲ್ಲದೆ ಬೆಳೆ ಕಳೆದುಕೊಂಡು ಸಾಲ ಮಾಡಿ ಕಂಗಾಲಾಗಿರುವ ರೈತರ ಕೈಹಿಡಿಯುತ್ತೇನೆ, ನಾನು ನೀಡಿದ ಭರ ವಸೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ, ಕೃಷಿ ಸಾಲ ಮನ್ನಾ ಬಗ್ಗೆ ಮಾಧ್ಯಮ ಗಳು ತಪ್ಪುಕಲ್ಪನೆ ಮೂಡಿಸುವ ವರದಿ ಗಳನ್ನು ಬಿತ್ತರಿಸುತ್ತಿವೆ. ಸಾಲ ಮನ್ನಾಕ್ಕೆ ಮೈತ್ರಿ ಪಕ್ಷ ಕಾಂಗ್ರೆಸ್ ಸಹ ವಿರೋಧಿಸಿಲ್ಲ, ಮುಂದಿನ ಮುಂಗಡ ಪತ್ರದಲ್ಲಿ ನಮ್ಮ ನಿರ್ಧಾರ ರೈತರ ಪರವಾಗಿ ಇರುವುದು ಖಂಡಿತ ಎಂದರು.

ಲೆಕ್ಕ ಪರಿಶೋಧಕರ ಸೇವೆಗೆ ಪ್ರಶಂಸೆ: ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದೇನೆ. ಕೇಂದ್ರ ಸರ್ಕಾರ ಜಿಎಸ್‍ಟಿ ಮತ್ತು ರೇರಾ ಕಾಯ್ದೆ ತರುವಲ್ಲಿ ಲೆಕ್ಕ ಪರಿ ಶೋಧಕರ ಕೊಡುಗೆ ಅಪಾರ. ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ತೆರಿಗೆ ಮೂಲಕ ನೀವು ನೀಡುತ್ತಿರುವ ಸೇವೆ ಅಪಾರ. ಎಲ್ಲರಿಗೂ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ಅವರಿಗೆ ತೆರಿಗೆನೀಡುವಂತೆ ಪ್ರೇರೇಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಬಡಜನರಿಗೆ ಸಿಎ ಕೋರ್ಸ್ ಮೂಲಕ ಕಡಿಮೆ ದರದಲ್ಲಿ ಮಾರ್ಗದರ್ಶನ ನೀಡುತ್ತಿರುವುದು ತುಂಬಾ ಒಳ್ಳೆಯ ಕಾರ್ಯಕ್ರಮ. ನಿಮ್ಮ ಸಂಸ್ಥೆಯಿಂದ ಸಮಾಜಕ್ಕೆ ಒಳ್ಳೆಯ ಕೆಲಸ ಆಗುತ್ತಿದೆ. ನಿಮ್ಮ ಬೇಡಿಕೆಯಂತೆ ನೀವು ಕೇಳಿರುವ ಜಾಗವನ್ನು ಕಾನೂನಿನ ಚೌಕಟ್ಟಿನಲ್ಲಿ ನಿಮಗೆ ಮಾಡಿಕೊಡಲು ಸರ್ಕಾರ ಬದ್ಧವಾಗಿದೆ ಎಂದರು.

ನಾವು ಮಾಡುವ ಕಾನೂನು ಜನಸಾಮಾನ್ಯರಿಗೆ ಹೊರೆಯಾಗಬಾರದು. ಜನರಿಗೆ ಅದರಿಂದ ಅನುಕೂಲವಾಗಬೇಕು. ಸರ್ಕಾರಗಳು ಬಂದಾಗ ಕೇವಲ ರೈತರ ಮತ್ತು ಬೇರೆಯವರ ಬಗ್ಗೆ ಮಾತ್ರ ಕೆಲಸ ಮಾಡುತ್ತೀರಾ ಎಂದು ಹೇಳಿದ್ದಾರೆ. ಆದರೆ, ನಾವು ನಿಮ್ಮ ಪರವಾಗಿಯೂ ಇದ್ದೇವೆ ಎಂದು ಹೇಳಿದರು. ರೈತರಿಗೆ ಕೇವಲ ವ್ಯವಸಾಯ ಮಾತ್ರ ಗೊತ್ತಿದೆ. ರಾಜ್ಯದ ಜನರು ನೀಡುವ ತೆರಿಗೆ ಯಾವುದೇ ಕಾರಣಕ್ಕೂ ದುರುಪ ಯೋಗವಾಗಲು ಬಿಡುವುದಿಲ್ಲ. ತೆರಿಗೆ ಹಣ ಕೇವಲ ಒಂದು ಸಮುದಾಯಕ್ಕೆ ನೀಡುವುದಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗೆ ತಲುಪುವಂತೆ ಮಾಡುತ್ತೇವೆ. ಬೆಂಗಳೂರಿನ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಬೇಕಿದೆ. ಕಳೆದ 20 ತಿಂಗಳ ಅಧಿಕಾರದ ಅವಧಿಯಲ್ಲಿ ಬೆಂಗಳೂರಿಗೆ ಎಲಿವೇಟೆಡ್ ರಸ್ತೆ ಮಾಡಿಸಲು ಚಾಲನೆ ನೀಡಿದೆ. ಆದರೆ ಪ್ರಚಾರ ಪಡೆದುಕೊಳ್ಳಲಿಲ್ಲ. ನಾನು ಪ್ರಚಾರದಲ್ಲಿ ಎಡವಿದೆ ಎಂದರು. ರಾಜಕಾಲುವೆಯ ಮೇಲೆ ಎಲಿವೇಟೆಡ್ ರಸ್ತೆ ಮಾಡಲು ಆಗಲೇ ಸೂಚಿಸಿದ್ದೆ. ಆದರೆ ನಂತರ ಬಂದ ಸರ್ಕಾರ ಅದಕ್ಕೆ ಚಾಲನೆ ನೀಡಲಿಲ್ಲ. ಹೈದರಾಬಾದ್‍ನಲ್ಲಿನ ರಿಂಗ್ ರೋಡ್‍ನಂತೆ ಬೆಂಗಳೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಮಾಡಬೇಕಿದೆ ಎಂದು ಹೇಳಿದರು.

Translate »