ಸಾಲ ಮನ್ನಾಕ್ಕೆ ಬದ್ಧ, ಆತಂಕ ಬೇಡ
ಮೈಸೂರು

ಸಾಲ ಮನ್ನಾಕ್ಕೆ ಬದ್ಧ, ಆತಂಕ ಬೇಡ

June 16, 2018

ಬೆಂಗಳೂರು: ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲ ಮನ್ನಾಕ್ಕೆ ಬದ್ಧವಾಗಿದ್ದು, ಯಾವುದೇ ಆತಂಕ ಬೇಡ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಅಭಯ ನೀಡಿದ್ದಾರೆ. ತಮ್ಮ ಟ್ವಿಟರ್‍ನಲ್ಲಿ ಇಂದು ತಿಳಿಸಿರುವ ಅವರು, ವೈಜ್ಞಾನಿಕವಾಗಿ ರೈತರಿಗೆ ಹೆಚ್ಚು ಸೌಲಭ್ಯ ಸಿಗಬೇಕು, ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಸಾಲ ಮನ್ನಾ ಕುರಿತು ಘೋಷಣೆ ಮಾಡಲಾಗುವುದು ಎಂದಿದ್ದಾರೆ.

ಬೇರೆ ಪಕ್ಷಗಳ ಮುಖಂಡರಂತೆ ಪಲಾಯನವಾದಿಯಲ್ಲ. ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಬದ್ಧ. ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದು, ಬ್ಯಾಂಕ್‍ಗಳಲ್ಲಿ ರೈತರ ಸಾಲ ಕುರಿತು ಮಾಹಿತಿ ಪಡೆಯತ್ತಿದ್ದೇನೆ. ರೈತರು ಆತ್ಮಹತ್ಯೆಗೆ ಶರಣಾದರೆ ಕೆಲಸ ಮಾಡುವ ನನ್ನ ಹುಮ್ಮಸ್ಸು ಕುಸಿಯುತ್ತದೆ. ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ತಾಳ್ಮೆಯಿಂದ ಇರಬೇಕು ಎಂದು ಟ್ವೀಟ್ ಮಾಡಿದ್ದಾರೆ.

Translate »