ಟಿಕೆಟ್ ಪಡೆಯದ ಪ್ರಯಾಣಿಕರಿಂದ ದಂಡ ವಸೂಲಿ
ಚಾಮರಾಜನಗರ

ಟಿಕೆಟ್ ಪಡೆಯದ ಪ್ರಯಾಣಿಕರಿಂದ ದಂಡ ವಸೂಲಿ

September 19, 2018

ಚಾಮರಾಜನಗರ:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಮರಾಜನಗರ ವಿಭಾಗವು ಆಗಸ್ಟ್ ತಿಂಗಳಲ್ಲಿ ಟಿಕೆಟ್ ಪಡೆಯದೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸು ತ್ತಿದ್ದ 283 ಪ್ರಯಾಣಿಕರಿಂದ 37640 ರೂ. ದಂಡವನ್ನು ವಸೂಲಿ ಮಾಡಿದೆ.
ಆಗಸ್ಟ್ ತಿಂಗಳಲ್ಲಿ 2096 ಬಸ್ಸುಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 202 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದ್ದಾರೆ.

Translate »