ಮೈಸೂರಿನ ಇಪಿಎಫ್ ಕಚೇರಿಗೆ  ದೌಡಾಯಿಸುತ್ತಿರುವ ಪಿಂಚಣಿದಾರರು
ಮೈಸೂರು

ಮೈಸೂರಿನ ಇಪಿಎಫ್ ಕಚೇರಿಗೆ  ದೌಡಾಯಿಸುತ್ತಿರುವ ಪಿಂಚಣಿದಾರರು

November 22, 2018

ಮೈಸೂರು: ಸಂಪೂರ್ಣ ಕಂಪ್ಯೂಟ ರೀಕರಣಗೊಂಡಿರುವ ಕಾರ್ಮಿಕ ಭವಿಷ್ಯ ನಿಧಿ ಸಂಘ ಟನೆ(EPFO)ಯು ಪ್ರತೀ ವರ್ಷ ನವೆಂಬರ್ ಮಾಹೆ ಯಲ್ಲಿ ತಮ್ಮ ಗ್ರಾಹಕ ಪಿಂಚಣಿದಾರರಿಗೆ ಜೀವಿತ ಪ್ರಮಾಣ ಪತ್ರದ ನೋಂದಣಿ ಮಾಡುತ್ತಾ ಬಂದಿದೆ.
ಮೈಸೂರಿನ ಗಾಯಿತ್ರಿಪುರಂನಲ್ಲಿರುವ ಪ್ರಾದೇಶಿಕ ಇಪಿಎಫ್ ಕಚೇರಿಯಲ್ಲಿ ತನ್ನ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಯ ಪಿಎಫ್ ಪಿಂಚಣಿದಾರರ ಜೀವಿತ ಪ್ರಮಾಣ ಪತ್ರವನ್ನು ನವೆಂಬರ್ 2 ರಿಂದ ನೋಂದಣಿ ಕಾರ್ಯ ಆರಂಭಿಸಿದೆ.

ಪಿಂಚಣಿದಾರರ ಬ್ಯಾಂಕ್ ಖಾತೆಗಳಿಗೆ ಪಿಂಚಣಿ ಹಣ ವನ್ನು ಹಾಕುತ್ತಿರುವುದರಿಂದ ಅವರು ಮೃತಪಟ್ಟಿದ್ದರೂ. ಕೆಲವರು ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡು ತ್ತಿರುವ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ರಿಜಿಸ್ಟ್ರೇಷನ್ ಪ್ರಕ್ರಿಯೆ ಯನ್ನು ಸಂಘಟನೆಯು ಮಾಡಿಕೊಂಡು ಬರುತ್ತಿದೆ ಎಂದು ರೀಜನಲ್ ಪ್ರಾವಿಡೆಂಟ್ ಫಂಡ್ ಕಮೀಷ್ನರ್ ಡಾ.ಜಿ. ಶಿವಕುಮಾರ್, `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಪಿಎಫ್ ಪೆನ್ಷನ್ ಆದೇಶ ಸಂಖ್ಯೆ ಹಾಗೂ ಆಧಾರ ಪ್ರತಿಯೊಂದಿಗೆ ಕಚೇರಿ ಕೆಲಸದ ವೇಳೆ ಗಾಯಿತ್ರಿಪುರಂನ ಪಿಎಫ್ ಕಚೆÉೀರಿಗೆ ತೆರಳಿದರೆ, ಪಿಂಚಣಿದಾರರ ಜೀವಿತ ಪ್ರಮಾಣ ಪತ್ರವನ್ನು ನೋಂದಣಿ ಮಾಡಲಾಗುವುದು ಎಂದು ತಿಳಿಸಿದರು. ಆಯಾ ಜಿಲ್ಲೆಗಳ ಪಿಎಫ್ ಕಚೇರಿ, ಪಿಂಚಣಿ ಹಣ ಡ್ರಾ ಮಾಡುತ್ತಿರುವ ಬ್ಯಾಂಕ್ ಶಾಖೆಗಳು, ಖಾಸಗಿ ಬ್ರೌಸಿಂಗ್ ಸೆಂಟರ್‍ಗಳಲ್ಲಿ ನೋಂದಣಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ತೀವ್ರ ಅನಾ ರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರೆ ಅಥವಾ ಆಸ್ಪತ್ರೆ ಯಲ್ಲಿ ದಾಖಲಾಗಿದ್ದರೆ ಅಂತಹವರು ಇರುವ ಸ್ಥಳಕ್ಕೇ ಮೊಬೈಲ್ ರಿಜಿಸ್ಟ್ರೇಷನ್ ತಂಡ ತೆರಳಿ ನೋಂದಣಿ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಶಿವಕುಮಾರ್ ತಿಳಿಸಿದರು.

ರೀಜನಲ್ ಇಪಿಎಫ್ ಕಚೇರಿ ವ್ಯಾಪ್ತಿಗೆ ಬರುವ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಗ್ರಾಹಕರಿದ್ದು, ಆ ಪೈಕಿ 50 ವರ್ಷ ಪೂರೈಸಿರುವ ಹಾಗೂ ನಿವೃತ್ತಿ ಹೊಂದಿರುವ ಸುಮಾರು 45,000 ಮಂದಿ ಪಿಂಚಣಿದಾರರಿದ್ದಾರೆ. ಮೈಸೂರಿನ ರೀಜ ನಲ್ ಕಚೇರಿಯಲ್ಲಿ ಪ್ರತೀ ದಿನ 700ಕ್ಕೂ ಹೆಚ್ಚು ಮಂದಿ ಪೆನ್ಷನರ್ಸ್‍ಗಳಿಗೆ ಜೀವಿತ ಪ್ರಮಾಣ ಪತ್ರ ನೋಂದಣಿ ಮಾಡಲಾಗುತ್ತಿದೆ. ಈವರೆಗೆ ಸುಮಾರು 10,000 ನೋಂದಣಿ ಕಾರ್ಯ ಮುಗಿದಿದೆ ಎಂದು ಡಾ.ಶಿವಕುಮಾರ್ ತಿಳಿಸಿದರು.

ಇಂದು ರಾಜ್ಯ ಸರ್ಕಾರಿ ರಜಾ ದಿನ(ಈದ್‍ಮಿಲಾದ್) ಆದ ಕಾರಣ ಪೆನ್ಷನರ್ಸ್ ಸಂಖ್ಯೆ ಕಡಿಮೆ ಇದೆ. ಉಳಿದಂತೆ ಕೆಲಸದ ದಿನಗಳಲ್ಲಿ ನೋಂದಣಿಗೆ ನೂಕುನುಗ್ಗಲು ಏರ್ಪ ಡುತ್ತದೆ ಎಂದು ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು. ಕಚೇರಿಯ ಪ್ರವೇಶ ದ್ವಾರದಲ್ಲೇ ಕಂಪ್ಯೂಟರ್‍ನೊಂದಿಗೆ ಐವರು ಸಿಬ್ಬಂದಿ ನಿಯೋಜಿಸಿದ್ದು, ಅವರು ಇಪಿಎಫ್ ಪಿಂಚಣಿದಾರರ ಆಧಾರ ಸಂಖ್ಯೆ ಹಾಗೂ ಇಪಿಎಫ್‍ಓ ಪೆನ್ಷನ್ ಪೇಮೆಂಟ್ ಆರ್ಡರ್ ನಂಬರ್ ಆಧಾರದಿಂದ ಜೀವಿತ ಪ್ರಮಾಣ ಪತ್ರ ನೋಂದಣಿ ಮಾಡುವರು ಎಂದರು.

Translate »