ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆ: ಮೈಸೂರಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
ಮೈಸೂರು

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆ: ಮೈಸೂರಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

September 7, 2018

ಮೈಸೂರು: ಲಂಗು ಲಗಾಮಿಲ್ಲದೇ ಸತತ ಏರುತ್ತಲೇ ಇರುವ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರ ಗಳನ್ನು ನಿಯಂತ್ರಿಸದ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮೈಸೂ ರಿನಲ್ಲಿ ಗುರುವಾರ ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು.ಕರ್ನಾಟಕ ಸೇನಾ ಪಡೆ ಹಾಗೂ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸುವ ಮೂಲಕ ಸರ್ಕಾ ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾ ಪಡೆ: ಕರ್ನಾಟಕ ಸೇನಾ ಪಡೆಯ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಅಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ನೇತೃತ್ವದಲ್ಲಿ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದರು. ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅತೀ ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಗಳನ್ನು ದಿನೇ ದಿನೆ ಏರಿಕೆ ಮಾಡುತ್ತಲೇ ಬಂದಿವೆ. ಇದರಿಂದ ದೇಶದ ಜನ ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಯಿಂದ ಸಾಮಾನ್ಯ ಜನತೆ ಬೈಕ್‍ಗಳನ್ನು ಓಡಿಸಲಾಗದೆ ಮೂಲೆಗೆ ತಳ್ಳುವಂತೆ ಮಾಡುತ್ತಿದೆ. ಡೀಸೆಲ್ ಬೆಲೆ ಸತತ ಏರಿಕೆ ಯಿಂದ ಸಾರಿಗೆ ಬಸ್ ದರಗಳು ಏರಿಕೆ ಯಾಗುತ್ತಿವೆ. ಅಲ್ಲದೆ ಇದರಿಂದ ದಿನಬಳಕೆ ವಸ್ತುಗಳ ಮೇಲೆ ಪರಿಣಾಮ ಬೀರುತ್ತಿದೆ. ಸಾರ್ವಜನಿಕರು ತೊಂದರೆಗೆ ಸಿಲುಕು ವಂತಾಗಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿ ನಿಂದ ನಿತ್ಯವೂ ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಜನರ ಕಣ್ಣಿಗೆ ಕಾಣಿಸದ ರೀತಿಯಲ್ಲಿ ಪ್ರತಿನಿತ್ಯ 10-15 ಪೈಸೆಯಂತೆ ಏರಿಸುತ್ತಾ ದೇಶದ ಜನಸಾಮಾನ್ಯರ ಹಣವನ್ನು ಲೂಟಿ ಮಾಡು ತ್ತಿದೆ. ಅಧಿಕಾರಕ್ಕೆ ಬರುವ ಮುಂಚೆ ಕೇಂದ್ರ ಬಿಜೆಪಿ ಪ್ರಣಾಳಿಕೆಯಲ್ಲಿ 40 ರೂ.ಗೆ ಲೀಟರ್ ಪೆಟ್ರೋಲ್ ನೀಡುವುದಾಗಿ ಘೋಷಿಸಿದ್ದ ನರೇಂದ್ರ ಮೋದಿ ಅವರ ಮೇಲೆ ಜನತೆ ಇಟ್ಟಿದ್ದ ಅಪಾರ ನಿರೀಕ್ಷೆ ಹುಸಿಯಾಗಿದೆ. ಅಚ್ಛೇ ದಿನ್ ಎನ್ನುತ್ತಾ ಜನರ ಮೂಗಿಗೆ ತುಪ್ಪ ಸವ ರುತ್ತಿದ್ದಾರೆ ಎಂದು ವೇದಿಕೆ ಅಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ಆರೋಪಿಸಿದರು.

ನೋಟು ಅಮಾನ್ಯ, ಆರ್‍ಟಿಓ ಶುಲ್ಕ ಹೆಚ್ಚಳ, ರೇರಾ ಕಾಯಿದೆ, ಜಿಎಸ್‍ಟಿ ಯಂತಹ ಜನವಿರೋಧಿ ನಿರ್ಧಾರಗಳನ್ನು ಏಕಾಏಕಿ ಕೈಗೊಂಡ ಸರ್ಕಾರಕ್ಕೆ ಆದಾಯ ಬರುವ ಎಲ್ಲಾ ಸರಕುಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದು, ದೇಶದ ಜನರಿಗೆ ಅವಶ್ಯಕ ವಾದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರದಿರುವುದು ಖಂಡ ನೀಯ ಎಂದರು. ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದು 83 ರೂ. ಇರುವ ಪೆಟ್ರೋಲ್ ದರವನ್ನು 40 ರೂ.ಗಳಿಗೆ ಇಳಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ನಗರಾಧ್ಯಕ್ಷ ಪಿ.ಪ್ರಜೀಶ್, ಆರ್.ಶಾಂತಮೂರ್ತಿ, ಸಿ.ಎಸ್.ನಂಜುಂಡಸ್ವಾಮಿ, ಶಾಂತರಾಜೇ ಅರಸ್, ಜಗದೀಶ್, ಸುನೀಲ್‍ಕುಮಾರ್, ವಿನೋದ್, ವಿಜಯೇಂದ್ರ, ಮಿನಿ ಬಂಗಾ ರಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ಮೈಸೂರು ಕನ್ನಡ ವೇದಿಕೆ: ತೈಲ ದರ ಏರಿಕೆಯನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಮೈಸೂರಿನ ಅಗ್ರಹಾರ ವೃತ್ತದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ತಳ್ಳುಗಾಡಿಯಲ್ಲಿ ಬೈಕ್ ಇಟ್ಟು ತಳ್ಳಿಕೊಂಡು ಹೋಗುವ ಮೂಲಕ ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ತಾವು ಬೆಳೆದ ತರಕಾರಿ, ದವಸ ಧಾನ್ಯ ಗಳನ್ನು ಸಾಗಿಸಲು ಸಾರಿಗೆಯನ್ನೇ ಅವ ಲಂಬಿಸಿರುವ ಗ್ರಾಮೀಣ ಭಾಗದ ರೈತರಿಗೆ ತೈಲ ಬೆಲೆ ಏರಿಕೆ ಭಾರೀ ಪೆಟ್ಟು ನೀಡಿದೆ. ಕೇಂದ್ರ ಸರ್ಕಾರದ ಹೊಸ ಆರ್ಥಿಕ ನೀತಿ ಗಳಿಂದ ಜನಸಾಮಾನ್ಯರ ದಿನನಿತ್ಯದ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿ ಸುವ ಮೂಲಕ ಜನಸಾಮಾನ್ಯರ ಆರ್ಥಿಕ ಹೊರೆಯನ್ನು ತಗ್ಗಿಸಬೇಕು ಎಂದು ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಸರ್ಕಾರವನ್ನು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡ ರಾದ ನಾಲಾ ಬೀದಿ ರವಿ, ಬೋಗಾದಿ ಸಿದ್ದೇ ಗೌಡ, ಪ್ಯಾಲೆಸ್ ಬಾಬು, ರಾಧಾಕೃಷ್ಣ, ಗೋಪಿ, ಮಾದಪ್ಪ, ಕಾವೇರಮ್ಮ, ಪರಿಸರ ಚಂದ್ರು, ಪಾಪಣ್ಣಿ, ಶಂಕರ, ಅರವಿಂದ, ಸ್ವಾಮಿ ಗೈಡ್, ರವಿ, ಬಾಬು, ಸತೀಶ್, ಚಿದಾನಂದ ಇನ್ನಿತರರು ಭಾಗವಹಿಸಿದ್ದರು.

Translate »