ವಿದ್ಯಾಹಂಸ ಸ್ವಾಮೀಜಿಗಾಗಿ ಪೊಲೀಸರ ಶೋಧ
ಮೈಸೂರು

ವಿದ್ಯಾಹಂಸ ಸ್ವಾಮೀಜಿಗಾಗಿ ಪೊಲೀಸರ ಶೋಧ

September 11, 2018

ಮೈಸೂರು:  ಮಹಿಳೆ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿ ತಲೆಮರೆಸಿಕೊಂಡಿರುವ ಶ್ರೀ ವಿದ್ಯಾಹಂಸ ಭಾರತೀ ಮಹಾಸ್ವಾಮೀಜಿ, ಸಂತ್ರಸ್ತ ಮಹಿಳೆ ಪತಿ ಹಾಗೂ ಇತರರ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಸಿಡಿಆರ್‌ನಿಂದ ಲೋಕೇಷನ್ ಪತ್ತೆ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ. ತಮ್ಮ ಮೊಬೈಲ್ ಫೋನ್‍ಗಳನ್ನು ಸ್ವಿಚ್‍ಆಫ್ ಮಾಡಿಕೊಂಡಿರುವ ಆರೋಪಿಗಳು ಆ ಸಿಮ್ ಕಾರ್ಡ್‍ಗಳನ್ನು ಬಳಸುತ್ತಿಲ್ಲವಾದ್ದರಿಂದ ಸುಳಿವು ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಮೈಸೂರಿನಲ್ಲಿ ಚಾತುರ್ಮಾಸ ವ್ರತದ ವೇಳೆ ತಮ್ಮ ಸಂಕಲ್ಪ ಈಡೇರಿಸಿ ಎಂದು ಕೋರಿದ್ದಕ್ಕೆ, ಅದನ್ನೇ ದುರ್ಬಳಕೆ ಮಾಡಿಕೊಂಡ ಸ್ವಾಮೀಜಿ ಮಹಿಳೆಯ ಪತಿಯ ಕುಮ್ಮಕ್ಕಿನಿಂದ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Translate »