ವಿಜೃಂಭಣೆಯ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ
ಹಾಸನ

ವಿಜೃಂಭಣೆಯ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ

January 12, 2019

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಕಾವೇರಿ ನದಿ ದಂಡೆ ಯಲ್ಲಿರುವ ರಾಮನಾಥಪುರದ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ತುಳು ಷಷ್ಠಿ ಮಹಾರಥೋತ್ಸವ ಶನಿವಾರ ನೂರಾರು ಹಳ್ಳಿಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮಾರ್ಗಶಿರ ಶುಕ್ಲ ಪಕ್ಷ ತುಳು ಷಷ್ಠಿ ಅಭಿಜಿನ್ ಮೂಹೂರ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿ ಸಿದ ನಂತರ ಪೂಜಾ ಕೈಂಕರ್ಯದ ವೇಳೆ ಯಲ್ಲಿ ತೇರಿನ ಮೇಲ್ಭಾಗ ಆಕಾಶದಲ್ಲಿ ಗರುಡಗಳು ಹಾರಾಡಿದವು. ರಥೋತ್ಸವದ ಅಂಗವಾಗಿ ದೇವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇ ರಿದವು. ಬಳಿಕ ಬಣ್ಣ ಬಣ್ಣದ ಬಟ್ಟೆಗಳಿಂದ, ವಿಶೇಷ ಹೂಗಳಿಂದ ಶೃಂಗರಿಸಲಾಗಿದ್ದ ರಥದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ, ಶಾಸ್ತ್ರೋಕ್ತ ವಿಧಿ ವಿಧಾನ ನೆರವೇರಿಸ ಲಾಯಿತು. ದೇವಸ್ಥಾನದ ಸಮಿತಿಯವರು ಮತ್ತು ಭಕ್ತರು ರಥದ ಗಾಲಿಗೆ ತೆಂಗಿನ ಕಾಯಿಗಳನ್ನು ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ಸವಮೂರ್ತಿಯನ್ನು ಹೊತ್ತ ದೊಡ್ಡ ರಥವನ್ನು ಎಳೆಯಲು ಭಕ್ತರು ಪ್ರಾರಂಭಿ ಸಿದ ವೇಳೆಯಲ್ಲಿ ನೆರೆದಿದ್ದ ಭಕ್ತರು ಶಿವ ನಾಮ ಸ್ಮರಣೆಯೊಂದಿಗೆ ರಥದ ಹಗ್ಗ ಎಳೆ ಯುತ್ತಿದ್ದಂತೆ ಭಕ್ತರು ಕಳಸಕ್ಕೆ ಬಾಳೆಹಣ್ಣು, ಜವನ, ತೂರುವ ಮೂಲಕ ಭಕ್ತಿ ಸಮ ರ್ಪಿಸಿದರು. ಚಂಡೆ ಮದ್ದಳೆ ನೀನಾದ ದೊಂದಿಗೆ ವೇಷಧಾರಿ ಆಕರ್ಷಕ ಬೊಂಬೆ ಕುಣಿತ ಪ್ರದರ್ಶನ ನೀಡಿದ ಕಲಾವಿದರು, ವಿಪ್ರರು, ಸುಮಂಗಲಿಯರು ವೇದ-ಮಂತ್ರ ಗಳನ್ನು ಪಠಿಸಿ ರಥವನ್ನು ಹಿಂಬಾಲಿಸಿದರು.

ತೇರಿನತ್ತ ಹಣ್ಣು-ಜವನ: ದೇವಸ್ಥಾನದ ರಥ ಬೀದಿಯಲ್ಲಿ ಕಾವೇರಿ ನದಿಯ ಸೇತುವೆ ತನಕ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸುಸೂತ್ರವಾಗಿ ಸಾಗಿ ಸ್ವಸ್ಥಾನಕ್ಕೆ ಮರಳಿತು. ರಥ ಮುಂದೆ ಸಾಗುವ ವೇಳೆಗೆ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿದ್ದ ಸಾವಿರಾರು ಭಕ್ತರು ಈಡು ಗಾಯಿ ಒಡೆದು ತೇರಿನತ್ತ ಹಣ್ಣು- ಜವನ ಎಸೆದು ಭಕ್ತಿ ಸಮರ್ಪಿಸಿದರು.

ವಧು-ವರರ ದರ್ಶನ: ಸಂಪ್ರದಾಯ ದಂತೆ ಈ ವರ್ಷವು ನೂತನ ವಧು-ವರರು ರಥೋತ್ಸವಕ್ಕೆ ಆಗಮಿಸಿದ್ದು, ವಿಶೇಷ ಪೂಜೆ ಸಲ್ಲಿಸಿದರು. ಪವಿತ್ರ ಜೀವ ನದಿ ಕಾವೇರಿಯಲ್ಲಿ ಸ್ನಾನ ಮಾಡಿ ದೇವ ಸ್ಥಾನದಲ್ಲಿ ಹಲವಾರು ಭಕ್ತರು ಉರುಳು ಸೇವೆ ಮಾಡಿದರು. ಇನ್ನೊಂದೆಡೆ ನದಿಯ ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋ ಗರ್ಭ, ಗೌತಮ ಶಿಲೆ, ಕುಮಾರಧಾರಾ ತೀರ್ಥ ಚಾತುರ್ಯುಗ ಶ್ರೀರಾಮೇಶ್ವರ, ಅಗಸ್ತ್ಯೇಶ್ವರ, ಆಂಜನೇಯಸ್ವಾಮಿ, ಪಟ್ಟಾ ಭಿರಾಮ ಮುಂತಾದ ದೇವಾಲಯಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದಾಸೋಹ ಮತ್ತು ಸಹಕಾರ: ಶ್ರೀ ಸುಬ್ರಹ್ಮಣ್ಯಸ್ವಾಮಿ ಮಠ, ಯುವವಾಹಿನಿ ಯುವಕ ಸಂಘ, ಶ್ರೀ ಬಸವೇಶ್ವರ ಯುವಕ ಸಂಘ, ಕುರುಹಿನಶೆಟ್ಟಿ ಸಮುದಾಯ, ತಾಲೂಕು ಕುರುಬರ ಸಮಾಜ, ಸತ್ಯ ಸಾಯಿ ಬಾಬಾ ಸೇವಾ ಸಂಸ್ಥೆ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ರಾಮೇ ಶ್ವರಸ್ವಾಮಿ ಅಭಿವೃದ್ಧಿ ಸಮಿತಿ, ಗ್ರಾಮದ ಮುಖಂಡರು ಸೇರಿ ವಿವಿಧ ಕಡೆಗಳಲ್ಲಿ ದಾಸೋಹ ವ್ಯವಸ್ಥೆ, ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ದಿವಾನ ರಾದ ಸುದರ್ಶನ್ ಜೋಯಿಸ್, ಪಾರು ಪತ್ತೇದಾರ್ ರಮೇಶ್ ಭಟ್, ಭಾರತೀ ರಮಣಾಚಾರ್ಯ, ಕೊಣನೂರು ಠಾಣೆಯ ಸಾಗರ್, ಉಪತಹಶೀಲ್ದಾರ್ ಅರ್.ಐ. ಸ್ವಾಮಿ, ಧರ್ಮೇಶ್ ಮುಂತಾದವರು ಭಾಗ ವಹಿಸಿದ್ದರು. ನಂತರ ಧಾರ್ಮಿಕ ವಿಧಿ-ವಿಧಾನಗಳನ್ನು ಸಾಂಗವಾಗಿ ನೆರವೇರಿಸಿ ಸಹಕರಿಸಿದ ಎಲ್ಲರಿಗೂ ದೇವಸ್ಥಾನದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

Translate »