ಅರಸೀಕೆರೆ: ಕೊರಿಯರ್ ಅಂಗಡಿ ಬೀಗ ಮುರಿದು ಕಳವು ಮಾಡಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಿರುವ ಅರಸೀಕೆರೆ ನಗರ ಠಾಣೆ ಪೊಲೀಸರು, ಮೊಬೈಲ್, ನಗದು ಹಾಗೂ ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅರಸೀಕೆರೆ ನಗರದವರೇ ಆದ ರಾಜೇಶ್ ಮತ್ತು ಕಾರ್ತಿಕ್ ಬಂಧಿತರು. ಇವರು ಡಿ.9ರಂದು ರಾತ್ರಿ ನಗರದ ಕೆಪಿಎಸ್ ಬಡಾವಣೆಯಲ್ಲಿರುವ ಇಕಾಂ ಎಕ್ಸ್‍ಪ್ರೆಸ್ ಕೊರಿ ಯರ್ ಅಂಗಡಿ ಬೀಗ ಮುರಿದು ಗ್ರಾಹಕರಿಗೆ ಡೆಲಿವರಿ ಮಾಡಬೇಕಾಗಿದ್ದ ಮೊಬೈಲ್ ಫೋನ್ ಹಾಗೂ ಕ್ಯಾಶ್ ಕೌಂಟರ್‍ನಲ್ಲಿದ್ದ ನಗದು ಕಳವು ಮಾಡಿದ್ದರು.
ಈ ಸಂಬಂಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಲ್ ಇನ್‍ಸ್ಪೆಕ್ಟರ್ ರಂಗಸ್ವಾಮಿ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ, ಅವರಿಂದ 65 ಸಾವಿರ ರೂ ಮೌಲ್ಯದ ಮೊಬೈಲ್‍ಗಳು, 70 ಸಾವಿರ ರೂ ನಗದು ಹಾಗೂ ವಿವಿಧ ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.