ಹಳೇಬೀಡಿನಲ್ಲಿ ಅರ್ಥಪೂರ್ಣ ಆಂಜನೇಯಸ್ವಾಮಿ ಜಯಂತಿ
ಹಾಸನ

ಹಳೇಬೀಡಿನಲ್ಲಿ ಅರ್ಥಪೂರ್ಣ ಆಂಜನೇಯಸ್ವಾಮಿ ಜಯಂತಿ

January 12, 2019

ಬೇಲೂರು: ಹಳೇಬೀಡಿನಲ್ಲಿ ಶ್ರೀ ಕೋಟೆ ಆಂಜನೇಯ ಹಾಗೂ ಬೆಣ್ಣೆ ಗುಡ್ಡೆ ಆಂಜನೇಯಸ್ವಾಮಿ ಜಯಂತ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೋಟೆ ಆಂಜನೇಯ ಹಾಗೂ ಬೆಣ್ಣೆ ಗುಡ್ಡೆ ಆಂಜನೇಯ ದೇವರಿಗೆ ಬೆಳಿಗ್ಗೆ ಯಿಂದಲೇ ವಿವಿಧ ಪೂಜೆ, ಹೋಮ ಹವನ ಕಾರ್ಯಕ್ರಮಗಳು ಜರುಗಿದವು. ಬೆಳಗಿನ ಪೂಜಾ ಕಾರ್ಯದಲ್ಲಿ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಅನಂತರ ನಡೆದ ಮೆರವಣಿಗೆಯಲ್ಲಿ ಆಂಜ ನೇಯಸ್ವಾಮಿ ಮೂರ್ತಿಯನ್ನು ಪುಷ್ಪ ಮಂಟಪ ದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾ ಯಿತು. ಮೆರವಣಿಗೆಯಲ್ಲಿ ಪುಷ್ಪಗಿರಿ ಶ್ರೀ ಮಹಾ ಸಂಸ್ಥಾನ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಅವರನ್ನು ಅಶ್ವಾರೋಹಣ ಮಂಟಪದಲ್ಲಿ ಮೆರವಣಿಗೆ ನಡೆಸಲಾಯಿತು.

ಕೋಟೆ ಆಂಜನೇಯ ದೇಗುಲದಿಂದ ಹೊರಟ ಮೆರವಣಿಗೆ ರಾಜನಸಿರಿಯೂರು ವೃತ್ತದವರಗೆ ಸಾಗಿ ನಂತರ ಹಳೇಬೀಡಿನ ಮುಖ್ಯರಸ್ತೆಯಲ್ಲಿ ಸಾಗಿತು. ಮೆರವಣಿಗೆ ಯಲ್ಲಿ ವೀರಾಂಜನೇಯಸ್ವಾಮಿಯ ಸ್ತಬ್ಧ ಚಿತ್ರ ಆಕರ್ಷಣೀಯವಾಗಿತ್ತು. ವಿವಿಧ ಸಾಂಸ್ಕø ತಿಕ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಗ್ರಾಮವನ್ನು ಕೇಸರಿ ಧ್ವಜ ಹಾಗೂ ಬಂಟಿಂಗ್ಸ್ ನಿಂದ ಶೃಂಗರಿಸಲಾಗಿತ್ತು. ಮೆರವಣಿಗೆ ವೇಳೆ ಭಕ್ತರು ಮಜ್ಜಿಗೆ ಪಾನಕ ವಿತರಿಸಿದರು.
ಮೆರವಣಿಗೆಯ ಮೊದಲಿಗೆ ಯುವ ಕರು ಬೈಕ್ ರ್ಯಾಲಿ ನಡೆಸಿದರು. ಮೆರ ವಣಿಗೆಯಲ್ಲಿ ಆಕರ್ಷಕವಾಗಿದ್ದ ಆಂಜನೇಯ ಸ್ವಾಮಿ ಸ್ತಬ್ಧ ಚಿತ್ರದ ಎದುರು ಭಕ್ತರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರು ಭಕ್ತರೊಡನೆ ಹೆಜ್ಜೆ ಹಾಕಿ ನೃತ್ಯ ಮಾಡಿದರು. ಮೆರವಣಿಗೆಯಲ್ಲಿ ಮಾಜಿ ಸಚಿವ ಬಿ.ಶಿವರಾಂ, ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಎಂ.ಮಂಜಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್, ತಾಪಂ ಸದಸ್ಯೆ ಸುಮಾ ಪರಮೇಶ್, ಪ್ರಸನ್ನ, ತಾಪಂ ಮಾಜಿ ಸದಸ್ಯ ಮೋಹನ್, ಹುಲ್ಲಹಳ್ಳಿ ಸುರೇಶ್, ಸೋಮಶೇಖರ್, ಗ್ರಾನೈಟ್ ರಾಜ ಶೇಖರ್, ಆಂಜನೇಯ ಸೇವಾ ಸಮಿತಿ ಅಧ್ಯಕ್ಷ ಪರಮೇಶ್, ಅಶೋಕ್, ಮಂಜು ನಾಥ್, ಗಂಗೂರು ಶಿವಕುಮಾರ್ ಇತರ ಪ್ರಮುಖರು ಹಾಜರಿದ್ದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ.ಶಿವರಾಂ, ಇದೊಂದು ಧಾರ್ಮಿಕ ಕಾರ್ಯಕ್ರಮ. ಗ್ರಾಮೀಣ ಪ್ರದೇಶದಲ್ಲಿ ಇತ್ತೀ ಚೆಗೆ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುತ್ತಿವೆ. ಇಂತಹ ಕಾರ್ಯಕ್ರಮ ದಿಂದ ಗ್ರಾಮದಲ್ಲಿ ಶಾಂತಿ ನೆಲೆಸಲು ಸಹಕಾರಿ ಆಗಲಿದೆ ಎಂದರು.

ಪುಷ್ಪಗಿರಿಯ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, ಮನುಷ್ಯನಲ್ಲಿ ನೆಮ್ಮದಿ ಕಾಣಬೇಕಾದರೆ ಇಂತಹ ಧಾರ್ಮಿಕ ಕಾರ್ಯ ಕ್ರಮಗಳ ಆಯೋಜನೆ ಮುಖ್ಯ ವಾಗಿರು ತ್ತದೆ. ಮನಸ್ಸಿನಲ್ಲಿರುವ ಕಲ್ಮಷ ದೂರವಾಗಲು ಸಹಕಾರಿ ಆಗಲಿದೆ ಎಂದು ನುಡಿದರು. ಭಕ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Translate »