2ನೇ ದಿನವೂ ಮುಂದುವರೆದ  ಒತ್ತುವರಿ ತೆರವು ಕಾರ್ಯಾಚರಣೆ
ಹಾಸನ

2ನೇ ದಿನವೂ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ

January 12, 2019

ಹಾಸನ: ನಗರದ ಬಿ.ಎಂ.ರಸ್ತೆಯಲ್ಲಿ ಒತ್ತುವರಿ ಮಾಡಿರುವ ಕಟ್ಟಡ ತೆರವು ಕಾರ್ಯಾಚರಣೆ ಶುಕ್ರವಾರ ಪ್ರಾರಂಭಿಸಿದ್ದ ನಗರಸಭೆ, ಎರಡನೇ ದಿನ ಕೂಡ ಮುಂದುವರೆಯಿತು.

ಈಗಾಗಲೇ ನಗರದ ಬೃಹತ್ ಕಟ್ಟಡ ಬಿಗ್ ಬಜಾರ್ ಮುಂಭಾಗ ತೆರವು ಮಾಡುವ ಮೂಲಕ ಇತರೆ ಕಟ್ಟಡಗಳ ಅಕ್ರಮ ಭಾಗವನ್ನು ತೆರವು ಮಾಡುವ ಕಾರ್ಯ ಆರಂಭಿಸಿದೆ. ಶನಿವಾರ ಬೆಳಗಿನಿಂದಲೇ ನಗರಸಭೆಯು ಒಂದು ಹಿಟಾಚಿ, ಜೆಸಿಬಿ ಮೂಲಕ ತೆರವು ಕಾರ್ಯ ಮಾಡುತ್ತಿದೆ. ಕೆಲ ಅಂಗಡಿ ಮಾಲೀಕರು ಮೊದಲೇ ಎಚ್ಚೆತ್ತು ಸ್ವಯಂ ಪ್ರೇರಿತವಾಗಿ ಕಟ್ಟಡ ತೆರವು ಮಾಡಿಕೊಳ್ಳುತ್ತಿದರು. ರಸ್ತೆ ಅಗಲೀಕರಣ ಮಾಡುವುದರ ಮೂಲಕ ಸುಗಮ ವಾಹನ ಸಂಚಾರಕ್ಕೆ ಮುಂದಾಗಿರುವ ನಗರಸಭೆ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರೆ, ಅಂಗಡಿ ಮಾಲೀಕರು ಶಾಪ ಹಾಕು ತ್ತಿದ್ದರು. ಮೊದಲೇ ಸರ್ವೆ ನಡೆಸಿ ರೆಡ್ ಮಾರ್ಕ್ ಹಾಕಿ ನೋಟಿಸ್ ಜಾರಿ ಮಾಡಿ ಎಚ್ಚರಿಕೆ ಕೊಡಲಾಗಿದ್ದರೂ, ಅಂಗಡಿ ಮಾಲೀಕರು ಲೆಕ್ಕಿಸದೇ ಸುಮ್ಮನಿದ್ದರು. ನ್ಯಾಯಾ ಲಯದ ಆದೇಶದ ಮೇರೆಗೆ ನಗರಸಭೆ ಇಂತಹ ಕಾರ್ಯಕ್ಕೆ ಮುಂದಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

Translate »