ಭಾರತೀಯ ಸಂಸ್ಕøತಿಯನ್ನು ವಿಶ್ವಕ್ಕೆ ಪಸರಿಸಿದವರು ಸ್ವಾಮಿ ವಿವೇಕಾನಂದರು
ಹಾಸನ

ಭಾರತೀಯ ಸಂಸ್ಕøತಿಯನ್ನು ವಿಶ್ವಕ್ಕೆ ಪಸರಿಸಿದವರು ಸ್ವಾಮಿ ವಿವೇಕಾನಂದರು

January 12, 2019

ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಯೋಜಕಿ ವೇದಾವತಿ ಅಭಿಮತ

ಆಲೂರು: ಜಗತ್ತಿಗೆ ಭಾರತೀಯ ಆಧ್ಯಾತ್ಮದ ಧೀಶಕ್ತಿ ತೋರಿಸಿಕೊಡುವುದರ ಮೂಲಕ ಇಲ್ಲಿನ ಸಂಸ್ಕøತಿಯನ್ನು ಪಸರಿಸಿ ದವರು ಸ್ವಾಮಿ ವಿವೇಕಾನಂದರು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಶಿಕ್ಷಣ ಇಲಾಖೆಯ ಜಿಲ್ಲಾ ಸಂಯೋಜಕಿಯಾದ ಪಿ.ವೇದಾವತಿ ಅಭಿಪ್ರಾಯಪಟ್ಟರು.

ಅವರು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು, ಇಲ್ಲಿಯ ಸುಭಾಷ್ ಚಂದ್ರ ಬೋಸ್ ಸ್ಕೌಟ್ಸ್ ದಳದ ಸಹಕಾರದಲ್ಲಿ ಹಮ್ಮಿಕೊಂ ಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭದ ಉದ್ಘಾಟನೆ ಮಾಡಿ ಮಾತ ನಾಡಿದ ಅವರು, ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳಾದ್ದರಿಂದ ಅವರಲ್ಲಿ ಉತ್ತಮ ಗುಣ ಗಳನ್ನು ಬೆಳೆಸುವುದು ಇಂದಿನ ತುರ್ತುಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯು ಸಾಕಷ್ಟು ಕಾರ್ಯ ಕ್ರಮಗಳನ್ನು ಮಾಡುತ್ತಾ ಮಕ್ಕಳಲ್ಲಿ ಸೇವಾ ಮನೋಭಾವವನ್ನು ಬಿತ್ತುತ್ತಿದೆ ಎಂದರು.
ಜಿಲ್ಲಾ ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯು ನಿವೃತ್ತ ಸೇನಾಧಿಕಾರಿಯಾದ ಬೇಡನ್ ಪೊವೆಲ್‍ರವರಿಂದ 1907ರಲ್ಲಿ ಕೇವಲ 16 ಮಕ್ಕಳಿಂದ ಪ್ರಾರಂಭವಾಗಿ ಇಂದು ಜಗತ್ತಿ ನಾದ್ಯಂತ ಸುಮಾರು 216ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ತನ್ನ ಸೇವಾ ಕೈಂಕರ್ಯವನ್ನು ಮಾಡುತ್ತಿದೆ. ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವೇ ಯುವಕರು. ಆದ್ದರಿಂದ ಸ್ವಾಮಿ ವಿವೇಕಾನಂದರು ಯುವಕರಲ್ಲಿ ಅಗಾಧ ವಿಶ್ವಾಸವನ್ನು ಇಟ್ಟು ಅವರನ್ನು ಶಕ್ತಿಯುತ ರನ್ನಾಗಿ ಮಾಡುವ ಮಹದಾಸೆಯಿಂದ ಕಾರ್ಯೋನ್ಮುಖರಾದವರು. ಆದ್ದರಿಂದ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸುವುದರ ಮೂಲಕ ಅವರ ತತ್ವಾದರ್ಶಗಳನ್ನು ಇಂದಿನ ಯುವ ಜನತೆಯಲ್ಲಿ ಬಿತ್ತುವುದರ ಜೊತೆಗೆ ಸದೃಢ ರನ್ನಾಗಿಸಬೇಕಿದೆ ಎಂದರು.

ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಮಾನವೀಯ ಮೌಲ್ಯ ಗಳ ಆಗರವಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು 1084ರಿಂದ ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾ ಗುತ್ತಿದ್ದು, ಶಿಸ್ತು, ಸಂಯಮ, ಸೇವಾ ಮನೋ ಭಾವ, ರಾಷ್ಟ್ರಭಕ್ತಿಯ ಜೊತೆಗೆ ಮೌಲಿಕ ಜೀವನವನ್ನು ಇಂದಿನ ಯುವ ಜನತೆ ಯಲ್ಲಿ ಪಸರಿಸುವ ನಿಟ್ಟಿನಲ್ಲಿ ವಿವೇಕಾ ನಂದರ ತತ್ವಾದರ್ಶಗಳು ಬಹಳ ಮುಖ್ಯ ವಾಗಿವೆ. ಮೂರು ವರ್ಷದಿಂದ ಇಪ್ಪತ್ತೈದು ವಯೋಮಾನದ ಮಕ್ಕಳಿಗೆ ಶಿಕ್ಷಣ ನೀಡುವ ನಮ್ಮ ಸಂಸ್ಥೆಯು 3-6 ರವರೆಗೆ ಬನ್ನೀಸ್, 6-10 ವರೆಗೆ ಕಬ್ಸ್ & ಬುಲ್ ಬುಲ್ಸ್, 11-16 ವರೆಗೆ ಸ್ಕೌಟ್ಸ್ ಅಂಡ್ ಗೈಡ್ಸ್, 17-25 ವರೆಗೆ ರೋವರ್ಸ್ & ರೇಂಜರ್ಸ್ ಎಂಬ ಹಂತದಲ್ಲಿ ಜೀವನ ಶಿಕ್ಷಣವನ್ನು ನೀಡುತ್ತಿದೆ ಎಂದರು.
ಜಿಲ್ಲಾ ಜಂಟಿ ಕಾರ್ಯದರ್ಶಿ ಹೆಚ್.ಜಿ. ಕಾಂಚನಮಾಲ ಮಾತನಾಡಿ, ನಮಗೆ ನಾವೇ ಗುರುಗಳು. ನಮ್ಮಲ್ಲಿನ ದೋಷ ಗಳನ್ನು ನಾವೇ ತಿದ್ದಿಕೊಳ್ಳುತ್ತಾ, ನಮ್ಮಲ್ಲಿನ ದೌರ್ಬಲ್ಯಗಳನ್ನು ದೂರ ಮಾಡುತ್ತಾ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಾನವೀಯ ಸಂದೇಶ ಗಳನ್ನು ನೀಡುತ್ತಾ, ನುಡಿದಂತೆ ಬದು ಕುತ್ತಾ ಜಾಗತಿಕವಾಗಿ ಪ್ರಸಿದ್ಧಿ ಪಡೆದವರು ಸ್ವಾಮಿ ವಿವೇಕಾನಂದರು. ಅವರ ನುಡಿ ಮುತ್ತುಗಳನ್ನು, ಬರಹಗಳನ್ನು, ಚಿಂತನ ಗಳನ್ನು ಕೇವಲ ಓದಿ ಬಿಡದೇ ಅವುಗಳನ್ನು ಅಳವಡಿಸಿಕೊಂಡು ಜೀವನವನ್ನು ಸಾರ್ಥಕ ದಾರಿಯಲ್ಲಿ ಸಾಗಿಸಬೇಕಿದೆ ಎಂದರು.
ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗರಾಜ್ ಮಾತನಾಡಿ, ನಮ್ಮಲ್ಲಿನ ಕೆಡುಕು ಗಳನ್ನು ದೂರ ಮಾಡಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ. ಹಿರಿಯರ ನುಡಿ ಗಳನ್ನು ಪಾಲಿಸಬೇಕಿದೆ. ಯುವಕರಿಂದಲೇ ದೇಶದ ಪ್ರಗತಿಯ ಧ್ಯೋತಕ. ಯಾವುದೇ ದೇಶದ ಅಭಿವೃದ್ಧಿ ಆಯಾ ದೇಶದ ಯುವ ಶಕ್ತಿಯ ಮೇಲೆ ಅವಲಂಬಿತ ವಾಗಿರುತ್ತದೆ. ಆದ್ದರಿಂದ ಯುವಶಕ್ತಿ ಸನ್ಮಾರ್ಗದಲ್ಲಿ ಸಾಗಬೇಕಾದರೆ ಸ್ವಾಮಿ ವಿವೇಕಾನಂದರ ವಾಣಿಗಳನ್ನು ಅರ್ಥೈಸಿ ಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ಕೌಟ್ ಮಾಸ್ಟರ್ ಮೋಹನ್, ಗೈಡ್ ಕ್ಯಾಪ್ಟನ್‍ಗಳಾದ ಮಹೇರಾ ಬಾನು, ಸುಜಾತ, ಅಶ್ವಿನಿ ಮುಂತಾ ದವರು ಹಾಜರಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸ.ಹಿ.ಪ್ರಾ.ಶಾಲೆ ಕಣತೂರು, ಸೇಂಟ್ ಜೋಸೆಫ್ ಶಾಲೆ, ಜೋಸೆಫ್ ನಗರದ ಸುಮಾರು 50ಕ್ಕೂ ಹೆಚ್ಚು ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಭಾಗವಹಿಸಿದ್ದರು.
ಸ್ಥಳೀಯ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಹಾಗೂ ಗೈಡ್ ಕ್ಯಾಪ್ಟನ್ ರೇಷ್ಮಾ ನಿರೂ ಪಿಸಿ, ಜಂಟಿ ಕಾರ್ಯದರ್ಶಿ ಹಾಗೂ ಸ.ಮಾ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ವಿ.ಮೋಹನ್ ಸ್ವಾಗತಿಸಿದರು. ಸ್ಥಳೀಯ ಸಂಸ್ಥೆಯ ಖಜಾಂಚಿ ಹಾಗೂ ಸ್ಕೌಟ್ ಮಾಸ್ಟರ್ ಬಿ.ಎಸ್.ಹಿಮ ವಂದಿಸಿದರು.

Translate »