ರಾಮನಾಥಪುರದಲ್ಲಿ ‘ಅನ್ನ ದಾಸೋಹಿ’ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ
ಹಾಸನ

ರಾಮನಾಥಪುರದಲ್ಲಿ ‘ಅನ್ನ ದಾಸೋಹಿ’ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣೆ

January 23, 2019

ರಾಮನಾಥಪುರ: ಕಾಯಕಯೋಗಿ, ಕಲಿಯುಗ ಬಸವಣ್ಣ, ನಡೆದಾಡುವ ದೇವರು, ತ್ರೀವಿಧ ದಾಸೋಹಿ ಸಿದ್ಧ ಗಂಗಾ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಮನಾಥಪುರದ ಹೋಬಳಿ ಕೋಟವಾಳು ಗ್ರಾಮದ ವೀರಶೈವ ಸಮಾಜದ ವತಿಯಿಂದ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ರಾಮನಾಥಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಎಸ್. ಶಂಕರ್ ಮಾತನಾಡಿ, ಪ್ರತಿ ವರ್ಷ 10 ಸಾವಿರ ಮಕ್ಕಳಿಗೆ ವಸತಿ ದಾಸೋಹ ನೀಡಿರುವ ಸಿದ್ಧಗಂಗಾ ಶ್ರೀಗಳು ಇಲ್ಲಿಯ ವರೆಗೆ ಸಕ್ರಿಯವಾಗಿ ದುಡಿಯುತ್ತಾ ಎಲ್ಲರಿಗೂ ಆದರ್ಶ ಪ್ರಾಯರಾಗಿ ದ್ದರು. ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಲಕ್ಷಾಂತರ ವಿದ್ಯಾರ್ಥಿ ಗಳ ಜೀವನೋಪಾಯಕ್ಕೆ ಆಶ್ರಯ ನೀಡಿ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅವಿಸ್ಮರಣೀಯ ವಾದುದು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಸಂತ ಕುಮಾರಿ ರವೀಂದ್ರ, ಕೋಟವಾಳು ಗ್ರಾಮದ ಮುಖಂಡರಾದ ಪ್ರಕಾಶ್, ಅಶ್ವಥ್, ಶರಣ ಸಾಹಿತ್ಯ ಪರಿಷತ್ ಸದಸ್ಯ ಕೋಟವಾಳು ಕೆ.ಎನ್.ಪಂಚಾಕ್ಷರಿ, ಶಿವರಾಜ್ ಮುಂತಾ ದವರು ಭಾಗವಹಿಸಿದ್ದರು.

Translate »