ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿ ಚುನಾವಣೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ನಾಳೆ ಮತದಾನ
ಮಂಡ್ಯ

ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ, ಬೆಳ್ಳೂರು ಪಟ್ಟಣ ಪಂಚಾಯಿತಿ ಚುನಾವಣೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ನಾಳೆ ಮತದಾನ

August 30, 2018
  •  286 ವಿದ್ಯುನ್ಮಾನ ಮತಯಂತ್ರ ಬಳಕೆ
  • ಜಿಲ್ಲೆಯಲ್ಲಿ ಒಟ್ಟು 204 ಮತಗಟ್ಟೆ ಸ್ಥಾಪನೆ
  • ಎಡಗೈನ ಉಂಗುರದ ಬೆರಳಿಗೆ ಶಾಯಿ

ಮಂಡ್ಯ:  ಮಂಡ್ಯ ನಗರಸಭೆ ಸೇರಿ ದಂತೆ ಮೂರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿ ಚುನಾವಣೆಗೆ ಕ್ಷಣಗಣನೆ ಆರಂಭ ವಾಗಿದ್ದು, ಆ. 31 (ಶುಕ್ರವಾರ)ರಂದು ನಡೆಯುವ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಕೈಗೊಂಡಿದೆ.

ಜಿಲ್ಲೆಯ ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಅಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತ ದಾನ ನಡೆಯಲಿದೆ. ಒಟ್ಟಾರೆ 1,81,388 ಮತ ದಾರರು ಹಕ್ಕು ಚಲಾಯಿಸಲಿದ್ದಾರೆ. ಸೆ. 3ರಂದು ಮತ ಎಣಿಕೆ ನಡೆಯಲಿದೆ.

ಮಂಡ್ಯ ನಗರಸಭೆಯ 35 ವಾರ್ಡ್‍ಗಳ ಪೈಕಿ 147 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಾಗಮಂಗಲ ಪುರಸಭೆಯ 23 ವಾರ್ಡ್‍ಗಳಲ್ಲಿ 71 ಅಭ್ಯರ್ಥಿಗಳು, ಮದ್ದೂರು ಪುರಸಭೆಯ 23 ವಾರ್ಡ್ ಗಳಲ್ಲಿ 85 ಅಭ್ಯರ್ಥಿಗಳು, ಪಾಂಡವಪುರ ಪುರ ಸಭೆಯ 23 ವಾರ್ಡ್‍ಗಳ ಪೈಕಿ 79 ಅಭ್ಯರ್ಥಿಗಳು ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಯ 13 ವಾರ್ಡ್‍ಗಳಲ್ಲಿ 51 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಸೂಕ್ಷ್ಮ ಮತಗಟ್ಟೆಯಲ್ಲಿ ಕಟ್ಟೆಚ್ಚರ: ಮಂಡ್ಯ ಜಿಲ್ಲೆ ಯಲ್ಲಿ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 286 ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ 41ಸೂಕ್ಷ್ಮ ಮತಗಟ್ಟೆಗಳು ಹಾಗೂ 163 ಸಾಮಾನ್ಯ ಮತಗಟ್ಟೆಗಳಿದ್ದು, ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಿರುವ ಎಲ್ಲಾ ಮತಗಟ್ಟೆ ಗಳಲ್ಲಿ ಮತದಾನದ ದಿನದಂದು ವಿಡಿಯೋ ಚಿತ್ರೀಕರಣವನ್ನು ಮಾಡಿಸಲಾಗುತ್ತಿದೆ.

ನೋಟಾ ಬಳಕೆ: ಚುನಾವಣೆಯಲ್ಲಿ 204 ಮತ ಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, ಮೂವರು ಪೋಲಿಂಗ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ನಗರ ಸ್ಥಳೀಯ ಸಂಸ್ಥೆಯ ಒಟ್ಟು ಮತಗಟ್ಟೆಗಳ ಪೈಕಿ ಶೇ. 10ರಷ್ಟು ಮೀಸಲು ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಚುನಾವಣೆಯಲ್ಲಿ ಪ್ರಥಮ ಬಾರಿಗೆ ನೋಟಾ (ಓಔಖಿಂ)ವನ್ನು ಬಳಸಲಾಗುತ್ತಿದೆ. ಮತಪತ್ರದಲ್ಲಿ ನೋಟಾ ಮುದ್ರಣ ಮಾಡಲು ಕ್ರಮವಹಿಸ ಲಾಗಿದೆ. ರಾಜ್ಯ ಚುನಾವಣಾ ಆಯೋಗದ ರೀತ್ಯಾ ನಗರ ಸ್ಥಳೀಯ ಸಂಸ್ಥೆಗಳ ಚುನಾ ವಣೆಯಲ್ಲಿ ಅಳಿಸಲಾಗದ ಶಾಯಿಯನ್ನು ಎಡಗೈನ ಉಂಗುರದ ಬೆರಳಿಗೆ ಹಾಕಲು ಕ್ರಮ ವಹಿಸಲಾಗಿದೆ.

ಭದ್ರತಾ ಕೊಠಡಿಯ ವಿವರ: ಮಂಡ್ಯ ನಗರಸಭೆ ಚುನಾ ವಣೆಯ ಮಸ್ಟರಿಂಗ್, ಡಿ-ಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಎಣಿಕಾ ಕಾರ್ಯವು ಮಂಡ್ಯ ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ನಡೆಯಲಿದೆ. ಅದೇ ರೀತಿ ಮದ್ದೂರು ಪುರಸಭೆ ಚುನಾವಣೆಯ ಮಸ್ಟರಿಂಗ್, ಡಿ-ಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಎಣಿಕಾ ಕಾರ್ಯವು ಮದ್ದೂರಿನ ಹೆಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ನಡೆಯಲಿದೆ.

ಪಾಂಡವಪುರ ಪುರಸಭೆ ಚುನಾವಣೆಯ ಮಸ್ಟರಿಂಗ್, ಡಿ-ಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಎಣಿಕಾ ಕಾರ್ಯವು ಪಾಂಡವಪುರದ ಪಿಎಸ್‍ಎಸ್‍ಕೆ ಕಾಲೇಜಿನಲ್ಲಿ ನಡೆಯಲಿದ್ದು, ನಾಗ ಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ಚುನಾವಣೆಯ ಮಸ್ಟರಿಂಗ್, ಡಿ-ಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಎಣಿಕಾ ಕಾರ್ಯವು ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ನಿಷೇಧಾಜ್ಞೆ ಜಾರಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಮತದಾನದ ದಿನ ದಂದು ಮತದಾನ ಪ್ರಾರಂಭ ವಾಗುವ ಮುಂಚಿನ 48 ಗಂಟೆಗಳ ಒಳಗೆ ಬಹಿರಂಗ ಪ್ರಚಾರವನ್ನು ನಿಲ್ಲಿಸಲು ಆದೇ ಶಿಸಲಾಗಿದ್ದು, ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964ರ ಪ್ರಕರಣ 32ರ ಪ್ರಕಾರ ಯಾವುದೇ ವ್ಯಕ್ತಿಯು ಮತದಾನ ನಡೆಯುವ ದಿನದÀಲ್ಲಿ ಆ ಮತದಾನ ಕೇಂದ್ರದೊಳಗೆ ಅಥವಾ ಮತದಾನ ಕೇಂದ್ರದಿಂದ 100 ಮೀಟರ್ ಒಳಗಿನ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತಗಳಿಗಾಗಿ ಪ್ರಚಾರ ಮಾಡಬಾರದು.

ಮತದಾರರನ್ನು ಮತ ಕೋರುವುದು, ನಿರ್ದಿಷ್ಟ ಅಭ್ಯರ್ಥಿಗೆ ಮತ ನೀಡದಿರುವಂತೆ, ಯಾವುದೇ ಮತದಾರರ ಮನ ಒಲಿಸುವುದು, ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸೂಚನೆ ಅಥವಾ ಚಿಹ್ನೆಯನ್ನು (ಸರ್ಕಾರಿ ನೋಟೀಸನ್ನು ಹೊರತುಪಡಿಸಿ) ಪ್ರದರ್ಶಿಸಬಾರದು.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಬೆಂಬಲಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಹೊರಗಿನಿಂದ ಚುನಾವಣಾ ಪ್ರಚಾರಕ್ಕಾಗಿ ತಾರಾ ಪ್ರಚಾರಕರು ಮತ್ತು ಇತರೆ ವ್ಯಕ್ತಿಗಳನ್ನು ಕರೆಯಿಸಿ ಕೊಂಡಲ್ಲಿ ಅಂತಹ ವ್ಯಕ್ತಿಗಳು ಚುನಾವಣೆ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯನ್ನು ಕಡ್ಡಾಯವಾಗಿ ಬಿಡಬೇಕು.

ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಹಾಗೂ ಚುನಾವಣೆ ನಡೆಯಲಿರುವ ದಿನÀದಂದು ಯಾವುದೇ ರಾಜ ಕೀಯ ಪಕ್ಷವಾಗಲೀ ಅಥವಾ ಅಭ್ಯರ್ಥಿಗಳಾಗಲೀ ಅಥವಾ ಅವರ ಪರವಾಗಿ ಅವರ ಬೆಂಬಲಿಗರಾಗಲೀ ಚುನಾವಣೆ ಸಂಬಂಧ ಸಭೆ-ಸಮಾರಂಭ ಮೆರವಣಿಗೆ ನಡೆಸತಕ್ಕದ್ದಲ್ಲ. ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಂತಿಲ್ಲ. ಸಾರ್ವಜನಿಕರಿಗೆ, ಮತದಾರರಿಗೆ ಎಫ್.ಎಂ. ರೇಡಿಯೂ ಹಾಗೂ ಟಿ.ವಿ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರ ಮಾಡತಕ್ಕದ್ದಲ್ಲ. ಮೊಬೈಲ್ ಮೂಲಕ ಎಸ್‍ಎಂಎಸ್ ಕಳುಹಿಸತ ಕ್ಕದ್ದಲ್ಲ. ಮತದಾರರಿಗೆ ವೀಡಿಯೋ ಕ್ಲಿಪ್ಪಿಂಗ್ಸ್ ಪ್ರದರ್ಶಿಸತಕ್ಕದ್ದಲ್ಲ. ಉಲ್ಲಂಘನೆಯಾದಲ್ಲಿ, ಕಾಯ್ದೆ ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹರಾಗುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಆ. 31ರಂದು ಸಾರ್ವತ್ರಿಕ ರಜೆ
ರಾಜ್ಯ ಸರ್ಕಾರವು ಚುನಾವಣೆ ನಡೆಯಲಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮತದಾರರು ಮತ ಚಲಾಯಿಸಲು ಅನುಕೂಲ ವಾಗುವಂತೆ ಆಯಾ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಗಳು ಒಳಗೊಂಡಂತೆ ಆ. 31ರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಮತ ಚಲಾಯಿಸಲು ಪರ್ಯಾಯ ಗುರುತಿನ ಚೀಟಿ
ಮತದಾರರು ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು (EPIC) ಗುರುತಿಗಾಗಿ ಹಾಜರು ಪಡಿಸುವುದು ಅಥವಾ ಅದರ ಬದಲು 22 ದಾಖಲೆಗಳಾದ ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಗುರುತಿನ ಚೀಟಿ, ರಾಜ್ಯ/ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು ಸೇರಿದಂತೆ ಆಧಾರ್ ಕಾರ್ಡ್, ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ನೀಡಲಾಗಿರುವ ದಾಖಲೆಯನ್ನು ಆ ಕುಟುಂಬದ ಇನ್ನಿತರ ಸದಸ್ಯರ ಗುರುತಿಗಾಗಿ ಬಳಸಬಹುದು.

ಮದ್ಯ ಮಾರಾಟ ನಿಷೇಧ
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಸಂಬಂಧ ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಪಂ ವ್ಯಾಪ್ತಿಯ ಗಡಿಯಿಂದ 3ಕಿ.ಮೀ ಪರಿಧಿಯಲ್ಲಿ ಆ. 30ರಂದು ಬೆಳಿಗ್ಗೆ 7 ಗಂಟೆಯಿಂದ ಆ. 31ರ ಸಂಜೆ 6 ಗಂಟೆಯವರೆಗೆ ಮತ್ತು ಮತ ಎಣಿಕೆ ದಿನವಾದ ಸೆ. 3ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ಮದ್ಯದಂಗಡಿಗಳನ್ನು, ಬಾರ್, ರೆಸ್ಟೋರೆಂಟ್ ಮತ್ತು ಕ್ಲಬ್‍ಗಳಲ್ಲಿ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ ಪಾನ ವಿರೋಧ ದಿವಸಗಳೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆದೇಶಿಸಿದ್ದಾರೆ.

ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ
ಮಂಡ್ಯ ನಗರಸಭೆ, ಮದ್ದೂರು, ಪಾಂಡವಪುರ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಆ. 31 ರಂದು ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲಾ ಮತದಾರರು ತಪ್ಪದೇ ನೈತಿಕತೆಯಿಂದ ಮತದಾನ ಮಾಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾ ವಣಾಧಿಕಾರಿ ಎನ್. ಮಂಜುಶ್ರೀ ಪ್ರಕಟಣೆಯಲ್ಲಿ ಕೋರಿದ್ದಾರೆ.

8 1,13,077 ಮಂಡ್ಯ ನಗರಸಭೆಯ ಒಟ್ಟು ಮತದಾರರು
8 22,716 ಮದ್ದೂರು ಪುರಸಭೆ ಒಟ್ಟು ಮತದಾರರು
8 15,676 ಪಾಂಡವಪುರ ಪುರಸಭೆ ಒಟ್ಟು ಮತದಾರರು
8 20,793 ನಾಗಮಂಗಲ ಪುರಸಭೆ ಒಟ್ಟು ಮತದಾರರು
8 9,126 ಬೆಳ್ಳೂರು ಪಟ್ಟಣ ಪಂಚಾಯಿತಿ ಒಟ್ಟು ಮತದಾರರು

Translate »