ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೊನಾ ವಿರುದ್ಧ ತುರ್ತು ಕ್ರಮಕ್ಕೆ ಸಾರ್ಕ್ ವಿಡಿಯೋ ಕಾನ್ಫರೆನ್ಸ್
ಮೈಸೂರು

ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೊನಾ ವಿರುದ್ಧ ತುರ್ತು ಕ್ರಮಕ್ಕೆ ಸಾರ್ಕ್ ವಿಡಿಯೋ ಕಾನ್ಫರೆನ್ಸ್

March 16, 2020

ನವದೆಹಲಿ, ಮಾ.15- ಕೊರೊನಾ ವಿರುದ್ಧ ತುರ್ತು ಕ್ರಮಗಳನ್ನು ಕೈಗೊ ಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಾರ್ಕ್ ದೇಶಗಳ ನಡುವಿನ ವಿಡಿಯೋ ಕಾನ್ಫ ರೆನ್ಸ್‍ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬದಲಿಗೆ ತಮ್ಮ ಸಚಿವಾಲಯದ ಆರೋಗ್ಯ ಸಚಿವರನ್ನು ಕಳುಹಿಸಿದ್ದರು.

ಸಾರ್ಕ್ ರಾಷ್ಟ್ರಗಳಾದ ಆಫ್ಘಾನಿಸ್ತಾನ ದಿಂದ ಅಧ್ಯಕ್ಷ ಆಶ್ರಫ್ ಗನಿ, ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಶ್ರೀಲಂಕಾ ಅಧ್ಯಕ್ಷ ಗೊಟ ಬಯ ರಾಜಪಕ್ಸೆ, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್, ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಮತ್ತು ಪಾಕಿಸ್ತಾನದಿಂದ ಆರೋಗ್ಯ ಸಚಿವ ಜಾಫರ್ ಮಿರ್ಜಾ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಮಾತನಾಡಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆ ದಿದ್ದ ಈ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಸಾರ್ಕ್ ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಭಾಗಿಯಾಗಿದ್ದರು. ಆದರೆ ಪಾಕಿಸ್ತಾನದಿಂದ ಮಾತ್ರ ಆರೋಗ್ಯ ಸಚಿವರು ಭಾಗಿ ಯಾಗಿದ್ದಾರೆ. ಈ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕೊರೋನಾ ವೈರಸ್ ಕುರಿತಂತೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಕೆಲ ಮಾಹಿತಿ ಮತ್ತು ಚರ್ಚೆಗಳು ನಡೆದವು. ಭಾರತದ ಜೊತೆ ಉತ್ತಮ ಭಾಂದವ್ಯ ವೃದ್ಧಿಸಲು ನಾವು ಸದಾ ಮುಂದೆ ಎಂದು ಹೇಳಿಕೊಳ್ಳುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತ್ರ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್‍ನಿಂದ ಗೈರಾಗಿದ್ದಾರೆ.

Translate »