ಮೈಸೂರು, ಮಾ.15(ಆರ್‍ಕೆಬಿ)- ಕೊರೊನಾ ವೈರಸ್ ತಡೆಗೆ `ಪ್ರಾಣಾ ಯಾಮ’ ಉತ್ತಮ ಔಷಧ. ಸರಿಯಾದ ರೀತಿ ಪ್ರಾಣಾಯಾಮ ಮಾಡಿದರೆ ಕೊರೊನಾ ವೈರಸ್ ನಮ್ಮ ಹತ್ತಿರ ಸುಳಿ ಯದು. ಅಂಥ ಶಕ್ತಿ ಪ್ರಾಣಾಯಾಮಕ್ಕೆ ಇದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಧಾನ ಗುರುದತ್ತ ಹೇಳಿದರು.
ಮೈಸೂರಿನ ಶಾರದಾ ವಿಲಾಸ ಶತಮಾ ನೋತ್ಸವ ಭವನದಲ್ಲಿ ಯೋಗಾಚಾರ್ಯ ರಾದ ದೇವಕಿ ಮಾಧವ್ ಅವರ `ವೈಜ್ಞಾನಿಕ ಪ್ರಾಣಾಯಾಮ’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿದ ಅವರು, ಯೋಗ ಬಲು ಪ್ರಾಚೀನ. ಭಗವದ್ಗೀತೆಯಲ್ಲೂ ಅದರ ಉಲ್ಲೇಖವಿದೆ. ಯೋಗದಲ್ಲಿ 8 ಅಂಶ ಗಳಿದ್ದು, ಪ್ರಾಣಾಯಾಮ 4ನೇ ಅಂಶ ವಾಗಿದೆ. ಈ ವಿಚಾರಗಳನ್ನು ಲೇಖಕರು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು.
`ಉಪನಿಷತ್ ಯೋಗ ಸೆಂಟರ್ ಟ್ರಸ್ಟ್’ ಸಂಸ್ಥಾಪಕ ಯೋಗ ಗುರು ಸುಧೇಶ್ ಚಂದ್ರ ಮಾತನಾಡಿ, ಇಂಥ ಕೃತಿಗಳು ಕನ್ನಡದಲ್ಲಿ ರಲಿಲ್ಲ. ಇದು ಇಂಗ್ಲಿಷ್‍ಗೂ ಭಾಷಾಂತರ ಗೊಳ್ಳಬೇಕು. ಪ್ರಾಣಾಯಾಮ ಬಲವಂತ ದಿಂದ ಮಾಡುವಂಥದ್ದಲ್ಲ. ಗುರು ಮುಖೇನ ಗುರುವಿನ ಎದುರೇ ಕಲಿಯಬೇಕು ಎಂದು ಮಾರ್ಗದರ್ಶನ ಮಾಡಿದರು.
ಯೋಗಾ ಯೂನಿವರ್ಸಿಟಿ ಆಫ್ ಅಮೆರಿಕಾಸ್ ಕುಲಪತಿ ಯೋಗಿ ದೇವ ರಾಜ್ ಗುರೂಜಿ ಮಾತನಾಡಿ, ಅಮೆ ರಿಕದ `ಅಕ್ಕ ಸಮ್ಮೇಳನ’ದಲ್ಲಿ ಈ ಕೃತಿ ಯನ್ನು ಮತ್ತೊಮ್ಮೆ ಬಿಡುಗಡೆಗೊಳಿಸಿ, ಅಲ್ಲಿನ ಜನರಿಗೂ ತಲುಪಿಸಬೇಕು ಎಂದು ಸಲಹೆ ನೀಡಿದರು.
ಬಿಜಿಎಸ್ ಅಪೊಲೊ ಆಸ್ಪತ್ರೆಯ ವೈದ್ಯ ನಾರಾಯಣ ಹೆಗಡೆ ಮಾತನಾಡಿ, ಆಸ್ಪತ್ರೆಗೆ ಬರುವ ಶೇ.90 ರೋಗಿಗಳಲ್ಲಿ ಉಸಿರಾಟ-ಶ್ವಾಸಕೋಶ ಸಮಸ್ಯೆ ಇರುತ್ತೆ. ಪ್ರಾಣಾಯಾಮದಿಂದ ಈ ರೋಗಗಳನ್ನು ನಿವಾರಿಸಿಕೊಳ್ಳಬಹುದು ಎಂದರು. ಸ್ವಾತಂತ್ರ್ಯ ಹೋರಾಟಗಾರ ಜಿ.ಎಲ್.ಎನ್. ಅಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿಎಸ್‍ಎಸ್ ಯೋಗ ಸಂಶೋಧನಾ ಕೇಂದ್ರದ ಸ್ಥಾಪಕ ಶ್ರೀಹರಿ, ಲೇಖಕಿ ದೇವಕಿ ಮಾಧವ್, ಪೆÇ್ರ.ಕೆ.ರಾಮಮೂರ್ತಿರಾವ್, ಪತ್ರಕರ್ತ ಚೀ.ಜ.ರಾಜೀವ ಮತ್ತಿತರರಿದ್ದರು.