25ನೇ ವಾರ್ಡ್‍ನಲ್ಲಿ 40 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ
ಮೈಸೂರು

25ನೇ ವಾರ್ಡ್‍ನಲ್ಲಿ 40 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

March 16, 2020

ಮೈಸೂರು,ಮಾ.15(ಆರ್‍ಕೆಬಿ)- ಚಾಮ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಲಕ್ ನಗರದ 25ನೇ ವಾರ್ಡ್‍ನಲ್ಲಿ ಒಟ್ಟು 40 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಎಲ್.ನಾಗೇಂದ್ರ ಭಾನು ವಾರ ಗುದ್ದಲಿಪೂಜೆ ನೆರವೇರಿಸಿದರು.

ಎಸ್‍ಎಫ್‍ಸಿ ಅನುದಾನದಲ್ಲಿ ಪುಲಿಕೇಶಿ ರಸ್ತೆಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಆಟೋ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ, ತಿಲಕ್ ನಗರ 2ನೇ ಮುಖ್ಯರಸ್ತೆಗೆ 25 ಲಕ್ಷ ರೂ. ವೆಚ್ಚದಲ್ಲಿ ಪುಟ್‍ಪಾತ್ ನಿರ್ಮಾಣ ಕಾಮ ಗಾರಿ ಆರಂಭಗೊಂಡಿತು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸ ಕರು ಗುತ್ತಿಗೆದಾರರಿಗೆ ಸೂಚಿಸಿದರು.

ಪಾಲಿಕೆ 25ನೇ ವಾರ್ಡ್ ಸದಸ್ಯ ರಂಗ ಸ್ವಾಮಿ, ಪಾಲಿಕೆ ವಲಯ-6ರ ಸಹಾ ಯಕ ಆಯುಕ್ತ ಹಾಗೂ ಅಭಿವೃದ್ಧಿ ಅಧಿಕಾರಿ ನಾಗರಾಜ್, ಅಭಿಯಂತರ ಚಂದ್ರ ಶೇಖರ್, ಮುಖಂಡರಾದ ದಾಸ್, ಚೇತನ್, ಸಂತೋಷ್, ಶ್ಯಾಮ್, ಸುರೇಂದ್ರ, ಮಹೇಶ್ ಮತ್ತಿತರು ಉಪಸ್ಥಿತರಿದ್ದರು.

ಕೊರೊನಾ-ಜನರ ಸಹಕಾರಕ್ಕೆ ಶ್ಲಾಘನೆ: ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಹರಡದಂತೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಂಡಿದೆ. ಮೈಸೂರು ಜನರ ಸಹಕಾರವೂ ಉತ್ತಮವಾಗಿದೆ ಎಂದು ಶಾಸಕರು ಶ್ಲಾಘಿಸಿದರು. ಈ ವೈರಸ್‍ನಿಂದ ಬೇಗ ಮುಕ್ತರಾಗಬೇಕಾಗಿದೆ ಎಂದರು.

Translate »