ಉತ್ತರ ಪ್ರದೇಶದಲ್ಲಿ ನಕಲಿ ಸ್ಯಾನಿಟೈಸರ್, ಮಾಸ್ಕ್ ಕಾರ್ಖಾನೆ ಪತ್ತೆ ನಾಲ್ವರ ಬಂಧನ
ಮೈಸೂರು

ಉತ್ತರ ಪ್ರದೇಶದಲ್ಲಿ ನಕಲಿ ಸ್ಯಾನಿಟೈಸರ್, ಮಾಸ್ಕ್ ಕಾರ್ಖಾನೆ ಪತ್ತೆ ನಾಲ್ವರ ಬಂಧನ

March 16, 2020

ನೊಯ್ಡಾ, ಮಾ.15- ಕೈ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳು ಅತ್ಯವಶ್ಯಕ ಸರಕುಗಳು ಎಂದು ಕೇಂದ್ರ ಸರ್ಕಾರ ಘೋಷಿಸಿದ ಮಾರನೇ ದಿನವೇ ಉತ್ತರಪ್ರದೇಶದ ನೊಯ್ಡಾ ದಲ್ಲಿ ನಕಲಿ ಕೈ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕಾರ್ಖಾನೆ ಪತ್ತೆಯಾಗಿದ್ದು, ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ.

ಕಮರ್ಷಿಯಲ್ ಹಬ್ ಸೆಕ್ಟರ್ 63ರಲ್ಲಿದ್ದ ಕಂಪನಿ ಮೇಲೆ ಭಾನುವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೀವ್ ರೈ ಹೇಳಿ ದ್ದಾರೆ. ನಾಲ್ವರನ್ನು ಸ್ಥಳದಲ್ಲಿಯೇ ಬಂಧಿಸಲಾಗಿದ್ದು, ಸುಮಾರು 5 ಸಾವಿರ ಮುಖಕ್ಕೆ ಹಾಕುವ ಮಾಸ್ಕ್‍ಗಳು ಹಾಗೂ 5 ಸಾವಿರ ಕೈ ಸ್ಯಾನಿಟೈಸರ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈ ತಿಳಿಸಿದ್ದಾರೆ. ಎರಡು ವಸ್ತುಗಳು `ಎಸ್‍ಜಿ ಗ್ರೂಪ್’ ಎಂಬ ಹೆಸರನ್ನು ಹೊಂದಿವೆ ಮತ್ತು ಅವು ಸುಮಾರು 10 ಲಕ್ಷ ರೂ.ಗಳ ಮೌಲ್ಯವನ್ನು ಹೊಂದಿವೆ ಆದರೆ ಅವು ನಿಜವಾದ ಉತ್ಪನ್ನ ಗಳಲ್ಲ ಎಂದು ಹೇಳಿದ್ದಾರೆ. ಮಾರಕ ಕೋವಿಡ್-19 ಭೀತಿಯ ನಡುವೆ ನೊಯ್ಡಾ ಮತ್ತು ಗ್ರೇಟರ್ ನೊಯ್ಡಾ ದಲ್ಲಿ ಆರಂಭದಲ್ಲಿ ಕೈ ಸ್ಯಾನಿಟೈಸರ್ ಮತ್ತು ಮಾಸ್ಕ್‍ಗಳ ಪೂರೈಕೆಯಲ್ಲಿ ಕೊರತೆಯಾಗುತ್ತಿದೆ ಎಂದು ಔಷಧಿ ವ್ಯಾಪಾರಿಗಳು ಹೇಳುತ್ತಿದ್ದರೆ ಈ ವಸ್ತುಗಳು ದೊರೆತರೂ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳ ಮಾರಾಟದಲ್ಲಿ ಅಕ್ರಮ ಕಂಡುಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಗೌತಮ್ ಬುದ್ಧ ನಗರ ಜಿಲ್ಲಾಧಿಕಾರಿ ಬಿ.ಎನ್.ಸಿಂಗ್ ಹೇಳಿದ್ದಾರೆ.

Translate »