ಬೇಲೂರು: ಖಾಸಗಿ ಶಾಲೆ-ಕಾಲೇಜುಗಳಲ್ಲಿ ಓದಿಗೆ ಅವಕಾಶವಿದೆ. ಆದರೆ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಬದುಕಿಗೆ ಅವಕಾಶವಿದೆ. ಹಾಗಾಗಿಯೇ ಸರ್ಕಾರಿ ಶಾಲೆ, ಕಾಲೇಜುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಗಮನ ಹರಿಸಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕರ್ನಾಟಕ ಪಬ್ಲಿಕ್ ಸ್ಕೂಲ್) ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ 1 ರಿಂದ 12ನೇ ತರಗತಿವರೆಗೆ ಎಲ್ಲ ಮಕ್ಕಳು ಒಂದೇ ಆಡಳಿತದಲ್ಲಿ ಶಿಕ್ಷಣ ಪಡೆಯಲಿ ದ್ದಾರೆ. ಎಲ್ಲಾ ರೀತಿಯ ಆಧುನಿಕ ಸೌಲಭ್ಯ ಮಕ್ಕಳಿಗೆ ದೊರಕಲಿದೆ. ಈಗಾಗಲೇ ಹಳೇ ಬೀಡು ಕರ್ನಾಟಕ ಪಬ್ಲಿಕ್ ಸ್ಕೂಲ್‍ಗೆ 6.5 ಕೋಟಿ ಹಣ ಬಿಡುಗಡೆಯಾಗಿದೆ. ಇದ ರೊಂದಿಗೆ ಪ್ರೌಢಶಾಲೆಗೆ 2 ಕೊಠಡಿ ಹಾಗೂ ಪದವಿ ಪೂರ್ವ ಕಾಲೇಜಿಗೆ 2 ಕೊಠಡಿ ಹಾಗೂ ಕುಡಿಯುವ ನೀರಿಗಾಗಿ ಮಂಜೂ ರಾತಿಯಾಗಿದೆ ಎಂದು ಹೇಳಿದರು.
ಡಿಡಿಪಿಯು ಸಿ.ಆರ್.ವಾಮರಾಜ್ ಮಾತನಾಡಿ, ಈಗಾಗಲೇ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗಿದೆ. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತವಾಗ ಬಾರದು ಎಂಬ ಗುರಿ ಹೊಂದಿದೆ ಎಂದರು.
ಡಿಡಿಪಿಐ ಮಂಜುನಾಥ್ ಮಾತನಾಡಿ, ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತ ರಾಗದಂತೆ ಪ್ರತಿಯೊಬ್ಬರೂ ವಿದ್ಯಾವಂತರಾಗುವ ಗುರಿ ಹೊಂದಿದೆ. ಅದಕ್ಕಾಗಿ ಸರ್ಕಾರ ಹಲ ವಾರು ಕ್ರಮಗಳನ್ನು ಹೊಂದಿದೆ ಎಂದರು
ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಶಾಲಿನಿ, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಹಳೇಬೀಡು ಅಧಿಕಾರಿ ಸವಿತಾ ಹೆಗ್ಗಡೆ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬೀರೇಗೌಡ, ಮೊರಾರ್ಜಿ ಶಾಲೆಯ ನಟರಾಜ್, ಹೊಯ್ಸಳ ಪ್ರೌಢಶಾಲೆಯ ಕೆ.ಎನ್.ದಾಸಪ್ಪ, ಸ.ಹಿ.ಪ್ರಾ.ಶಾಲೆಯ ನಾಗರಾಜ್ ಸರ್ಕಾರಿ ಪಿಯು ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದ್ಯಾವಪ್ನಹಳ್ಳಿ ಸೋಮಶೇಖರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಗೋಪಾಲ್, ಹಸಿರು ಪ್ರತಿಷ್ಠಾನ ಸಂಸ್ಥಾಪಕ ಆರ್.ಪಿ.ವೆಂಕಟೇಶಮೂರ್ತಿ, ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ತಾಪಂ ಅಧ್ಯಕ್ಷ ರಂಗೇಗೌಡ, ಜಿಪಂ ಸದಸ್ಯ ಎಚ್. ಎಂ.ಮಂಜಪ್ಪ, ಗ್ರಾಪಂ ಉಪಾಧ್ಯಕ್ಷ ಹರೀಶ್, ಹಳೇಬೀಡು ಪಿಎಸ್‍ಐ ಭರತ್‍ಗೌಡ, ಉಪ ಪ್ರಾಂಶುಪಾಲ ಮುಳ್ಳಯ್ಯ, ಮುಖಂಡ ರಾದ ಸ್ವಾಗತ ಧರ್ಮೇಗೌಡ, ವಂದನೆ ನಾಗರಾಜ್ ಹಾಜರಿದ್ದರು. ಮಕ್ಕಳಿಂದ ರಂಗೋಲಿ ಸ್ಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.