ಏಡ್ಸ್ ನಿರ್ಮೂನೆಗೆ ಯುವ ಜನತೆ ಪಾತ್ರ ಮುಖ್ಯ
ಹಾಸನ

ಏಡ್ಸ್ ನಿರ್ಮೂನೆಗೆ ಯುವ ಜನತೆ ಪಾತ್ರ ಮುಖ್ಯ

January 6, 2019

ಅರಸೀಕೆರೆ: ಹೆಚ್‍ಐವಿ ಎಂಬ ಮಾರಕ ರೋಗವನ್ನು ತಡೆಗಟ್ಟುವಲ್ಲಿ ಯುವಜನತೆ ಪಾತ್ರಗಳು ಅತೀ ಮುಖ್ಯ ವಾಗಿವೆ. ಆರೋಗ್ಯವಂತ ಸಮಾಜವನ್ನು ಕಾಣಬೇಕಾದರೆ ಪ್ರತಿಯೊಬ್ಬರು ಈ ಮಾರಕ ರೋಗದ ಬಗ್ಗೆ ಜಾಗೃತರಾಗಿ ರಬೇಕು ಎಂದು ಜೆ.ಸಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಅನೀಲ್‍ಕುಮಾರ್ ಹೇಳಿದರು.
ತಾಲೂಕಿನ ಕಣಕಟ್ಟೆಯ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜು ಮತ್ತು ಕೈಗಾ ರಿಕಾ ತರಬೇತಿ ಕೇಂದ್ರದ ರಾಷ್ಟ್ರೀಯ ಸೇವಾಯೋಜನೆಯಿಂದ ಆಯೋಜಿಸಿದ್ದ “ವಿಶ್ವ ಏಡ್ಸ್ ದಿನಾಚರಣೆ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್‍ಐವಿ/ಏಡ್ಸ್ ಕಾಯಿಲೆ ನಿಯಂತ್ರಿ ಸುವಲ್ಲಿ ಆರೋಗ್ಯ ಶಿಕ್ಷಣ ಮುಖ್ಯವಾ ಗಿದ್ದು, ಶಾಲಾ, ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳ ಮುಖಾಂತರ ತಿಳು ವಳಿಕೆ ನೀಡಿದರೆ ಕೆಲವೇ ವರ್ಷಗಳಲ್ಲಿ ಈ ಕಾಯಿಲೆ ಗಣನೀಯವಾಗಿ ಇಳಿ ಮುಖವಾಗುತ್ತದೆ ಎಂದರು.
ಈ ರೋಗ ಹರಡಲು ಅಸುರಕ್ಷಿತ ಲೈಂಗಿಕತೆ, ಅಶುದ್ಧ ರಕ್ತದ ಬಳಕೆ, ರೋಗಿಗೆ ಬಳಸಿದ ಔµಧೋಪಕರಣಗಳ ಬಳಕೆ ಇತ್ಯಾದಿಗಳು ಕಾರಣವಾಗಿದೆ. ಈ ರೋಗದ ವೈರಸ್ ರಕ್ತದಲ್ಲಿರುವ ಬಿಳಿ ಕಣಗಳನ್ನು ನಾಶಮಾಡುವುದರಿಂದ ರೋಗ ತಗುಲಿದ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತಾ ಸಾವಿನಂಚಿಗೆ ತಲುಪು ತ್ತಾನೆ. ಆದ್ದರಿಂದ ಸ್ವಚ್ಛ ಜೀವನದ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ತಿಳುವಳಿಕೆ ನೀಡುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಣ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಶಿಕುಮಾರ್ ಮಾತ ನಾಡಿ, ಭಾರತೀಯ ಸಂಸ್ಕøತಿಯು ಆರೋಗ್ಯಕ್ಕೆ ಪೂರಕವಾಗಿದ್ದು, ನಾಗರಿ ಕರಲ್ಲಿ ಮೌಲ್ಯಗಳು ಹೆಚ್ಚುವಂತೆ ಮಾಡು ತ್ತದೆ. ಆರೋಗ್ಯ ಮಾನವನ ಜೀವನದ ಅವಿ ಭಾಜ್ಯ ಅಂಗವಾಗಿದ್ದು ಪ್ರತಿ ಗ್ರಾಮದಲ್ಲಿರುವ ಸುಶಿಕ್ಷಿತರು ಸಾಂಘಿಕ ಪ್ರಯತ್ನ ಹಾಗೂ ತಿಳುವಳಿಕೆ ಮೂಡಿಸುವುದರ ಮುಖಾಂತರ ಈ ರೋಗ ತಹಬದಿಗೆ ತರಬಹುದು ಎಂದರು.

ಕಣಕಟ್ಟೆ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸಿ ಹೆಚ್‍ಐವಿ/ಏಡ್ಸ್ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರಣ್ಯ ಕೈಗಾರಿಕಾ ಕೇಂದ್ರದ ಪ್ರಾಂಶು ಪಾಲ ಪುಟ್ಟರಂಗಪ್ಪ, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸುರೇಶ್ ಕುಮಾರ್, ಅಶೋಕ್‍ಕುಮಾರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಕಾಶ ಇಳಿಗೇರ ಇದ್ದರು.

Translate »