ಹಾರಂಗಿ ಎಡದಂಡೆ ಆಧುನೀಕರಣ ಕಾಮಗಾರಿಗೆ ಚಾಲನೆ
ಹಾಸನ

ಹಾರಂಗಿ ಎಡದಂಡೆ ಆಧುನೀಕರಣ ಕಾಮಗಾರಿಗೆ ಚಾಲನೆ

January 6, 2019

116 ಕೋಟಿ ವೆಚ್ಚದಡಿ ಕಾಮಗಾರಿ, 8,110 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ
ರಾಮನಾಥಪುರ: ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಹಾರಂಗಿ ಎಡದಂಡೆ ನಾಲೆ ಆಧುನೀ ಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ತೊಂದರೆ ಅನುಭವಿಸುತ್ತಿದ್ದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು.

ರಾಮನಾಥಪುರ ಹತ್ತಿರವಿರುವ ದೊಡ್ಡಮಗ್ಗೆ ಹೋಬಳಿ ಮುಗಳೂರು ಗ್ರಾಮದ ಹಾರಂಗಿ ಎಡದಂಡೆ ನಾಲೆಯ 27.083ರ ಸರಪಳಿಯಿಂದ 85.905 ಸರಪಳಿವರೆಗೆ ಮೆಕ್ಯಾನಿಕಲ್ ಪವರ್ ಉಪಯೋಗಿಸಿ ನಾಲೆಗೆ ಸಿಮೆಂಟ್ ಲೈನಿಂಗ್ ಜೊತೆಗೆ ಆಧುನೀಕರಣವನ್ನು 116 ಕೋಟಿ ವೆಚ್ಚದಡಿ ನಿರ್ಮಿಸಲು ಚಾಲನೆ ನೀಡಿದ ನಂತರ ನಡೆದ ಸಭೆ ಯಲ್ಲಿ ಅವರು ಮಾತನಾಡಿದÀರು.

ಹಾರಂಗಿ ನಾಲೆಯು ಕಂಟೇನಹಳ್ಳಿ ಯಿಂದ ಕೇರಳಾಪುರದ ಗಡಿವರೆಗೆ ಆಧುನೀಕರಣ ಕಾಮಗಾರಿ ನಡೆಯಲಿದೆ. ಕಟ್ಟೇಪುರ ಗ್ರಾಮದ ಹತ್ತಿರ ಕಾವೇರಿ ನದಿಗೆ ಅಡ್ಡಲಾಗಿ ಕ್ರಿಶ 1732 ರಲ್ಲಿ ಅಣೆ ಕಟ್ಟೆಯನ್ನು ನಿರ್ಮಿಸಲಾಗಿದ್ದು, ಈ ಅಣೆ ಕಟ್ಟೆಯ ಪ್ರಪ್ರಥಮ ಅಣೆಕಟ್ಟೆಯಾಗಿದ್ದು, ಇಲ್ಲಿಂದ 8,110 ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಈ ನಾಲಾ ತಳಭಾಗದಲ್ಲಿ ಸಿಲ್ಟ್ ತುಂಬಿಕೊಂಡಿದ್ದು, ನೀರಿನ ಹರಿವಿನ ವೇಗದಲ್ಲಿ ಕುಂಠಿತ ಉಂಟಾಗಿ ಅಂತಿಮ ಭಾಗದ ಅಚ್ಚಕಟ್ಟು ಪ್ರದೇಶವು ನೀರಿನ ಕೊರತೆಯನ್ನು ಅನುಭವಿಸುತ್ತಿದ್ದು, ಬಲ ದಂಡೆ ಮತ್ತು ಎಡದಂಡೆ ನಾಲೆಯನ್ನು ಆಧುನಿಕರಣ ಗೊಳಿಸಲು ತೀರ್ಮಾನಿಸಿ 88.50 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಮಂಜೂರಾತಿ ನೀಡಿ ಪೇವರ್ ನಿಂದ ನಾಲೆಯ ಎರಡು ಬದಿಯಲ್ಲಿ ಸಿಮೆಂಟ್ ಕಾಂಕ್ರೀಟ್ ಅಳವಡಿಸುವ ಹಾಗೂ ಹಳೆಯ ದಾದ ಎಲ್ಲಾ ಸಿ.ಡಿ. ಕಾಮಗಾರಿಗಳನ್ನು ಪುನರ್ ನಿರ್ಮಿಸುವ ಕಾಮಗಾರಿಯನ್ನು ಮೆಸರ್ಸ್ ಎಸ್.ಎನ್. ಸಿ. ಪವರ್ ಕಾರ್ಪೊರೇಷನ್ ಬೆಂಗಳೂರು ಇವರಿಗೆ ವಹಿಸಿಕೊಟ್ಟು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಕೊಡಲು ತಿಳಿಸಲಾಗಿದೆ ಎಂದರು.

ಈ ಭಾಗದ ನಾಲೆಯಲ್ಲಿ ನೀರು ಕೊನೆಯ ಭಾಗಕ್ಕೆ ಹರಿಯದೆ ಭತ್ತದ ಗದ್ದೆಗಳಿಗೆ ಆಗುತ್ತಿದ್ದ ಕುಂದು ಕೊರತೆ ಸರಿಪಡಿಸಿ, ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳ ಲಾಗುವುದು. ನಾಲೆಯ ಆಧುನೀಕರಣ ಕಾಮಗಾರಿಯನ್ನು ಗುತ್ತಿಗೆದಾರರಿಂದ ಗುಣಮಟ್ಟ ಕಾಪಾಡುವಂತೆ ಅಧಿಕಾರಿ ಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ರಂಗಸ್ವಾಮಿ, ಬಸವ ರಾಜು, ಚೌಡೇಗೌಡ, ಸಂತೋಷಗೌಡ, ಜಯಣ್ಣ, ಎಂ.ಎಚ್.ಕೃಷ್ಣಮೂರ್ತಿ, ಅಪ್ಪಣ್ಣ, ನೀರಾವರಿ ಇಲಾಖೆ ಎಇಇ ಜಯರಾಂ, ಇಂಜಿನಿಯರ್, ಧರ್ಮ ರಾಜ್, ಎಇಇ ತಿಮ್ಮಪ್ಪ, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.

Translate »