ಪುರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಹಾಸನ

ಪುರಸಭೆ, ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

May 31, 2019

ಬೇಲೂರು: ಮಲೇರಿಯಾ ಹಾಗೂ ಚಿಕೂನ್ ಗುನ್ಯಾದಂತಹ ರೋಗ ಗಳಿಂದ ಜನರು ನರಳುತ್ತಿದ್ದರೂ ಪುರಸಭೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋ ಪಿಸಿ, ಪಟ್ಟಣದ ಮೀನು ಮಾರುಕಟ್ಟೆ ಸಮೀಪ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಪಟ್ಟಣದಲ್ಲಿ ಸ್ವಚ್ಛತೆಯನ್ನು ಕಡೆಗಣಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಜಾಕೀರ್ ಪಾಷಾ ಮಾತ ನಾಡಿ, 21, 22 ಮತ್ತು 23ನೇ ವಾರ್ಡ್ ಗಳಲ್ಲಿ ಸ್ವಚ್ಛತೆ ಇಲ್ಲದೆ ಚರಂಡಿ ಹಾಗೂ ರಸ್ತೆ ಬದಿ ಸ್ಥಳಗಳು ಕೊಚ್ಚೆ ನೀರು ಹಾಗೂ ಕಸ-ಕಡ್ಡಿಗಳಿಂದ ತುಂಬಿ ಕೊಳೆಯುತ್ತಿವೆ ಎಂದು ಆರೋಪಿಸಿದರು.

ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು, ಜನರು ಸಾಂಕ್ರಾಮಿಕ ರೋಗಗಳಿಂದ ಬಳಲು ತ್ತಿದ್ದಾರೆ. ಮಸೀದಿ ಬೀದಿ, ಮೀನು ಮಾರು ಕಟ್ಟೆ ಬೀದಿ ಹಾಗೂ ಮುಸ್ತಾಫ ಬೀದಿಗಳ 40ಕ್ಕೂ ಹೆಚ್ಚು ಜನರು ಬೇಲೂರು, ಹಾಸನ, ಚಿಕ್ಕಮಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ ಎಂದು ತಿಳಿಸಿದರು.

ಅನೈರ್ಮಲ್ಯ ತಾಂಡವಾಡುತ್ತಿದ್ದರೂ ಅಧಿಕಾರಿಗಳು ಗಮನಹರಿಸಿಲ್ಲ. ಈ ಹಿನ್ನೆಲೆ ಯಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿ ದ್ದೇವೆ. ಎಚ್ಚೆತ್ತುಕೊಳ್ಳದಿದ್ದರೆ ಪುರಸಭೆ ಹಾಗೂ ಆರೋಗ್ಯ ಇಲಾಖೆ ಕಚೇರಿ ಮುಂದೆ ವಿವಿಧ ಸಂಘಟನೆಗಳೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ವಾರ್ಡ್ ಸ್ವಚ್ಛತೆಗೆ ಯಾರೂ ಬಾರದ ಕಾರಣ ಚರಂಡಿಗಳು ಗಬ್ಬು ನಾರುತ್ತಿವೆ. ಅಕ್ಕಪಕ್ಕ ವಾಸಿಸುವವರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಆದ್ದರಿಂದ ತಕ್ಷಣ ಸ್ವಚ್ಛತೆಗೊಳಿಸಿ ನಾಗರಿಕರ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದು ನವೀದ್ ಒತ್ತಾಯಿಸಿದರು.
ಈ ಸಂಬಂಧ ಪ್ರತಿಭಟನಾಕಾರರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನೂರ್ ಅಹಮದ್, ಇಮ್ರಾನ್, ಇರ್ಷಾದ್, ಶಫಿ ಇತರರು ಪಾಲ್ಗೊಂಡಿದ್ದರು.

Translate »