ವಿಧವಾ ವೇತನಕ್ಕೆ ಒತ್ತಾಯಿಸಿ ವಯೋವೃದ್ಧೆ ಪ್ರತಿಭಟನೆ
ಹಾಸನ

ವಿಧವಾ ವೇತನಕ್ಕೆ ಒತ್ತಾಯಿಸಿ ವಯೋವೃದ್ಧೆ ಪ್ರತಿಭಟನೆ

July 6, 2018

ಬೇಲೂರು:  ವಿಧವಾ ವೇತನ ವನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಗುರುವಾರ ಅರೇಹಳ್ಳಿಯ ನಿಂಗಮ್ಮ ಎಂಬ ವಯೋವೃದ್ಧೆ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂಭಾಗ ಅಂಬೇಡ್ಕರ್ ಯುವಕ ಸಂಘದ ಕಾರ್ಯ ದರ್ಶಿ ನಿಂಗಯ್ಯ, ಎಐಟಿಯುಸಿ ಜಿಲ್ಲಾಧ್ಯಕ್ಷ ಮಹೇಶ್ ಸೇರಿದಂತೆ ಇತರರೊಂದಿಗೆ ಕುಳಿತು ವಿಧವಾ ವೇತನ ಮಂಜೂರು ಮಾಡುವಂತೆ ಘೋಷಣೆ ಕೂಗಿದರು.

ವಯೋವೃದ್ಧೆ ನಿಂಗಮ್ಮ ಮಾತನಾಡಿ, ಒಂದು ವರ್ಷದಿಂದ ನನಗೆ ವಿಧವಾ ವೇತನ ಬಂದಿಲ್ಲ. ತಾಲೂಕು ಕಚೇರಿ ಅಧಿಕಾರಿ ಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಬರುತ್ತಿದ್ದ ವಿಧವಾ ವೇತನವನ್ನು ಕಳೆದ ಒಂದು ವರ್ಷದಿಂದ ಕಡಿತಗೊಳಿ ಸಿರುವ ಬಗ್ಗೆ ತಹಶೀಲ್ದಾರ್ ಅವರನ್ನು ಕೇಳಿದರೆ ಅವರು ಟ್ರಜರಿ ಅವರನ್ನು ಕೇಳಿ ಎನ್ನುತ್ತಾರೆ. ಟ್ರಜರಿ ಅವರ ಬಳಿ ಅಲೆದಾಡಿದರೆ ಅವರು ನಮ್ಮಿಂದ ಆಗಲ್ಲ ತಹಶೀಲ್ದಾರ್ ಕೇಳಿ ಎಂದು ಹೇಳುತ್ತಾರೆ. 85ವರ್ಷದ ಇಳಿ ವಯಸಿರುವ ನಾನು ಅರೆ ಹಳ್ಳಿಯಿಂದ ಬೇಲೂರಿಗೆ ವಿಧವಾ ವೇತನಕ್ಕೆ ಅಲೆದಾಡಿ ಸುಸ್ತಾಗಿದ್ದೇನೆ. ಈ ವಯಸ್ಸಿನಲ್ಲೂ ನಾನು ಅಲೆದಾಡುತ್ತಿರುವುದನ್ನು ಕಂಡು ಕೆಲವರು ಸಹಾಯಕ್ಕೆ ಬಂದಿದ್ದಾರೆ ಎಂದರು.

ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಮಹೇಶ್ ಮಾತನಾಡಿ, ಐದಾರು ತಿಂಗಳ ಹಿಂದೆ ಬೇಲೂರು ತಾಲೂಕು ಕಚೇರಿಗೆ ಬಂದ ಸಂದರ್ಭದಲ್ಲಿ ಅರೇಹಳ್ಳಿಯ ನಿಂಗಮ್ಮ ಎಂಬುವರು ಕೈಯಲ್ಲಿ ಅರ್ಜಿ ಹಿಡಿದು ಅಲೆದಾಡುತ್ತಿರುವುದು ಕಂಡು ಬಂತು. ಈ ಬಗ್ಗೆ ಅವರನ್ನು ಕೇಳಿದಾಗ ಅವರ ಪರಿಸ್ಥಿತಿಯನ್ನು ಕಂಡು ಮರುಕ ಉಂಟಾಗಿ ತಾಲೂಕು ಕಚೇರಿ ಅಧಿಕಾರಿ ಗಳನ್ನು ಕೇಳಿದಾಗ ಉಡಾಫೆ ಉತ್ತರ ನೀಡಿದರು. ಟ್ರಜರಿ ಅವರನ್ನು ಕೇಳಿದಾಗ ಅರೇಹಳ್ಳಿ ನಿಂಗಮ್ಮ ಎಂಬು ವರು ಎಪಿಎಲ್ ಕಾರ್ಡುದಾರರಾಗಿದ್ದು, ಅವರಿಗೆ ವೇತನವನ್ನು ನಿಲ್ಲಿಸಲಾಗಿದೆ ಎಂದರು. ತುತ್ತು ಅನ್ನಕ್ಕೂ ಪರದಾಡುತ್ತಿರುವ ನಿಂಗಮ್ಮ ಅವರನ್ನು ಹೇಗೆ ಬಿಪಿಎಲ್‍ನಿಂದ ಎಪಿಎಲ್‍ಗೆ ಸೇರಿಸಿದಿರಿ ಎಂದರೆ ಆಹಾರ ಇಲಾಖೆಯವರನ್ನು ಕೇಳಿ ನಮಗೇನು ಗೊತ್ತಿಲ್ಲ ಎಂದು ಉತ್ತರ ನೀಡುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಪಿಎಲ್ ಕಾರ್ಡುದಾರರಾಗಿದ್ದು ನಿಂಗಮ್ಮ ಅವರನ್ನು ಎಪಿಎಲ್ ಕಾರ್ಡ್‍ಗೆ ವರ್ಗ ಮಾಡಲಾಗಿದೆ. ಇದರಿಂದ ವಿಧವಾ ವೇತನದಿಂದ ವಂಚಿತರಾಗಿದ್ದಾರೆ. ಕೂಡ ಲೇ ಇವರಿಗೆ ನ್ಯಾಯ ದೊರಕಿಸಿಕೊಡ ಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ದಲ್ಲಿ ಅರೆಯಲ್ಲಿ ಅಂಬೇಡ್ಕರ್ ಯುವಕ ಸಂಘದ ಕಾರ್ಯದರ್ಶಿ ನಿಂಗಯ್ಯ ಇದ್ದರು.

ಬಳಿಕ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಅವರು ನಿಂಗಮ್ಮ ಅವರ ಮನವಿಯನ್ನು ಸ್ವೀಕರಿಸಿ ಸ್ಥಳದಲ್ಲೇ ವಿಧವಾ ವೇತನದ ಆದೇಶ ಪ್ರತಿಯನ್ನು ನೀಡಿದರು.

Translate »