ಜು.10 ರಂದು ಅಂಗನವಾಡಿ ನೌಕರರ ಪ್ರತಿಭಟನೆ
ಹಾಸನ

ಜು.10 ರಂದು ಅಂಗನವಾಡಿ ನೌಕರರ ಪ್ರತಿಭಟನೆ

July 6, 2018

ಹಾಸನ:  ಅಂಗನವಾಡಿ ನೌಕರರ ಬೇಡಿಕಾ ದಿನಾಚರಣೆ ಅಂಗವಾಗಿ ಜು. 10ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ ಎಂದು ಸಿಐಟಿಯು ಸಂಘ ಟನೆಯ ಪ್ರಧಾನ ಕಾರ್ಯದರ್ಶಿ ಡಿ.ಎಲ್. ರಾಘವೇಂದ್ರ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಐಸಿಡಿಎಸ್ ಯೋಜನೆಯಡಿ ಕೆಲಸ ಮಾಡುವ ಅಂಗನ ವಾಡಿ ನೌಕರರನ್ನು ಅತ್ಯಂತ ಕಡಿಮೆ ಸೌಲಭ್ಯ ದಿಂದ ಹೆಚ್ಚಿನ ಸಮಯ ಕೆಲಸವನ್ನು ಎಲ್ಲ ಇಲಾಖೆಗಳು ಮಾಡಿಸಿಕೊಳ್ಳುತ್ತಿದೆ. ಸರ್ವೇ ಗಳು, ಭಾಗ್ಯಲಕ್ಷ್ಮಿ ಯೋಜನೆ, ಸ್ತ್ರೀ ಶಕ್ತಿ, ಅಂಗವಿಕಲರಿಗೆ ಸಂಬಂಧಿಸಿದ ಕೆಲಸಗಳು ಸೇರಿದಂತೆ ಹಲವು ಕೆಲಸಗಳನ್ನು ಮಾಡಿ ಕೊಳ್ಳಲಾಗುತ್ತಿದೆ ಎಂದು ದೂರಿದರು.

ಶೂನ್ಯ ಜಂಟಿ ಖಾತೆಯನ್ನು ತೆರೆಯಲು ನಮ್ಮ ವಿರೋಧವಿಲ್ಲ. ಆದರೆ, ಅದರಲ್ಲಿರುವ ನಕಾರಾತ್ಮಕ ಅಂಶಗಳನ್ನು ತೆಗೆಯಬೇಕು. ಅಂಗನವಾಡಿ ನೌಕರರು, ಗೌರವಧನ ಕಾರ್ಯ ಕರ್ತೆಯರು, ಸ್ಥಳೀಯ ಪಟ್ಟಭದ್ರ ಹಿತಾಸಕ್ತಿಗಳು ಈ ಸಮಿತಿಯಲ್ಲಿ ಸೇರಿದರೆ ಇದರಿಂದ ಅಂಗನವಾಡಿ ನೌಕರರು ಕಿರುಕುಳ ಅನುಭವಿಸಬೇಕಾಗುತ್ತದೆ ಎಂದರು.

ಐಸಿಡಿಎಸ್ ಯೋಜನೆಯ ಸಾರ್ವತಿಕರಣದ ಭಾಗವಾಗಿ 3,331 ಮಿನಿ ಅಂಗನ ವಾಡಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ, ಹಲವಾರು ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚು ಜನಸಂಖ್ಯೆ ಇದ್ದರೂ ಅಂತಹ ಕೇಂದ್ರಗಳನ್ನು ಪೂರ್ಣ ಕೇಂದ್ರಗಳೆಂದು ಪರಿಗಣಿಸಲಾಗುತ್ತಿಲ್ಲ. ಇಬ್ಬರೂ ಕೆಲಸ ಮಾಡುವ ಕಡೆ ಒಬ್ಬರೇ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಒತ್ತಡದ ಜೊತೆಗೆ ಸಂಪೂರ್ಣವಾಗಿ ಮಕ್ಕಳಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಮಾತೃಪೂರ್ಣ ಯೋಜನೆ ಜಾರಿಯಲ್ಲಿ ಇರುವುದರಿಂದ ಅಲ್ಲಿನ ನೌಕರರು ಶೋಷಣೆಗೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಮೇಲಿನ ಸಮಸ್ಯೆ ಪರಿಹರಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸು ವಂತೆ ಆಗ್ರಹಿಸಿ ಅಂಗನವಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಎಂ.ಬಿ.ಪುಷ್ಪಾ, ಜಯಂತಿ, ಕಾರ್ಯದರ್ಶಿ ಗಳಾದ ಶೈಲಜಾ, ಪೂರ್ಣಿಮಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್ ಇದ್ದರು.

Translate »