ಅತ್ಯಾಚಾರ ಪ್ರಕರಣ ತಡೆಗೆ ಆಗ್ರಹಿಸಿ ಮೆಡಿಕಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಹಾಸನ

ಅತ್ಯಾಚಾರ ಪ್ರಕರಣ ತಡೆಗೆ ಆಗ್ರಹಿಸಿ ಮೆಡಿಕಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

May 3, 2018

ಹಾಸನ: ದೇಶದಲ್ಲಿ ನಡೆಯು ತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗೆ ಸೂಕ್ತ ಕಾನೂನುಗಳನ್ನು ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಗರದ ಎನ್. ಆರ್.ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಎನ್.ಆರ್.ವೃತ್ತದಲ್ಲಿ ಜಮಾ ಯಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ಅತ್ಯಾಚಾರಿಗಳನ್ನು ಗುರುತಿಸಿ ನ್ಯಾಯಾ ಲಯವು ಶೀಘ್ರದಲ್ಲಿ ಅವರಿಗೆ ಶಿಕ್ಷೆ ಕೊಡ ಬೇಕು. ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಅವರನ್ನು ಬಂಧಿಸಬೇಕು. ಸಹಾಯವಾಣ 1091 ಬೆಂಗಳೂರಿನಲ್ಲಿ ಮಾತ್ರ ಇದ್ದು, ಇದನ್ನು ಕರ್ನಾಟಕದ ಎಲ್ಲಾ ಭಾಗಗಳಿಗೂ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಅನೇಕ ದೌರ್ಜನ್ಯದಂತ ಪ್ರಕರಣಗಳು ನಡೆದರೂ ಅದು ಯಾರ ಗಮನಕ್ಕೆ ಬಾರದೇ ಅಲ್ಲೇ ಮುಚ್ಚಿ ಹಾಕುವ ಪ್ರಯತ್ನಗಳು ನಡೆ ಯುತ್ತಿದೆ ಎಂದು ಆತಂಕ ವ್ಯಕ್ತಪಡಿ ಸಿದ ಪ್ರತಿಭಟನಾ ನಿರತರು, ಸಮಾಜದಲ್ಲಿ ಇಂತಹ ಘಟನೆಗಳಿಂದ ಜನರು ಕುಗ್ಗಿ ಹೋಗಿದ್ದಾರೆ. ಈ ಬಗ್ಗೆ ದೌರ್ಜನ್ಯಕ್ಕೂಳಗಾ ದವರು ಹೆದರದೆ ಸಂಬಂಧಪಟ್ಟ ಇಲಾಖೆ ವಿಷಯ ಮುಟ್ಟಿಸಿ, ಆರೋಪಿಗಳಿಗೆ ಶಿಕ್ಷೆ ವಿಧಿಸಲು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಡಾ. ಶ್ರೀನಾಥ್, ವಿದ್ಯಾರ್ಥಿ ಗಳಾದ ರಾಜೇಶ್, ನಿರೇಶ್, ಚೇತನ್, ಅಶೋಕ್ ಕುಮಾರ್ ಶೆಟ್ಟಿ ಇತರರಿದ್ದರು.

Translate »