ಜೆಡಿಎಸ್ ಅಭ್ಯರ್ಥಿ ಶಾಸಕ ಹೆಚ್.ಎಸ್.ಪ್ರಕಾಶ್ ಪರ ಗೌಡರ ಸೊಸೆ ಭವಾನಿ ರೇವಣ್ಣ ನೇತೃತ್ವದಲ್ಲಿ ಬಿರುಸಿನ ಪ್ರಚಾರ
ಹಾಸನ

ಜೆಡಿಎಸ್ ಅಭ್ಯರ್ಥಿ ಶಾಸಕ ಹೆಚ್.ಎಸ್.ಪ್ರಕಾಶ್ ಪರ ಗೌಡರ ಸೊಸೆ ಭವಾನಿ ರೇವಣ್ಣ ನೇತೃತ್ವದಲ್ಲಿ ಬಿರುಸಿನ ಪ್ರಚಾರ

May 3, 2018

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್. ಪ್ರಕಾಶ್ ಪರ ಜಿಪಂ ಸದಸ್ಯೆ ಭವಾನಿ ರೇವಣ್ಣ, ಬೆಂಬಲಿಗರೊಂದಿಗೆ ಇಂದು ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಮೊದಲು ನಗರದ ಪಾರ್ಕ್ ರಸ್ತೆಯಲ್ಲಿ ರುವ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೂರಾರು ಮಹಿಳೆಯರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತಯಾಚಿಸಿದರು. ಇದೇ ವೇಳೆ ಮಾತ ನಾಡಿದ ಭವಾನಿ ರೇವಣ್ಣ ಅವರು, ಹಾಸನ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಪರ ಅವರ ಪತ್ನಿ ಲಲಿತಮ್ಮ ಜೊತೆ ಸೇರಿ ನಗರದಲ್ಲಿರುವ ಪ್ರತಿ ಮನೆಗಳಿಗೆ ತೆರಳಿ ಮತಯಾಚಿಸ ಲಾಗುವುದು ಎಂದರು.

ಹೊಳೆನರಸೀಪುರದಲ್ಲಿ ಜೆಡಿಎಸ್ ಪರ ಜನರಲ್ಲಿ ಒಳ್ಳೆ ಅಭಿಪ್ರಾಯಗಳಿವೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಅತೀ ಹೆಚ್ಚು ಬಹುಮತದಿಂದ ಗೆಲ್ಲುವುದು ನಿಶ್ಚಿತ. 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಿಗಲಿದೆ ಎಂದು ಜನತೆಯೇ ಸ್ವಯಂ ಪ್ರೇರಿತವಾಗಿ ಹೇಳುತ್ತಿದ್ದಾರೆ. ಪ್ರಚಾರಕ್ಕೆ ಹೋದ ಕಡೆಗಳಲೆಲ್ಲಾ ಹಳ್ಳಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೇರಿಸುತ್ತಿಲ್ಲ ಎಂಬ ಧ್ವನಿ ಕೇಳಿ ಬಂದಿದೆ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಹಾಕಿಕೊಟ್ಟ ದಾರಿಯಲ್ಲಿ ಮತ್ತು ಅವರ ನಿರ್ದೇಶನದಲ್ಲಿ ಜಿಲ್ಲೆಯ 7 ತಾಲೂಕು ಗಳು ನಮ್ಮ ಆಡಳಿತದಲ್ಲಿ ಏನು ಅಭಿವೃದ್ಧಿ ಯಾಗಿದೆ ಅದನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ. ಜಿಲ್ಲೆಗೆ ಇಲ್ಲಿ ವರೆಗೂ ಏನು ಆಗಿದೆ, ಮುಂದೆ ಏನೆನೂ ಆಗಬೇಕು, ನಮ್ಮ ಸರ್ಕಾರ ಬಂದ ಮೇಲೆ ಏನು ಮಾಡಬಹುದು ಎಂಬ ವಿಷಯ ವನ್ನು ಮುಂದೆ ಇಟ್ಟುಕೊಂಡು ಜನರಲ್ಲಿ ಮತ ಕೇಳಲಾಗುತ್ತಿದೆ. ಈ ಬಾರಿ ಜಿಲ್ಲೆ ಯಲ್ಲಿ ಜೆಡಿಎಸ್ 7 ಕ್ಷೇತ್ರದಲ್ಲೂ ಗೆದ್ದು ಬರಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ತೆರಳಿ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಲಾಗುವುದು. ದೇವೇಗೌಡರ ಆದೇಶದಂತೆ ಇಂದಿನಿಂದ ಪ್ರಜ್ವಲ್ ರೇವಣ್ಣ ಕೂಡ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಸ್.ಪ್ರಕಾಶ್ ಪತ್ನಿ ಲಲಿತಮ್ಮ, ನಗರಸಭಾ ಸದಸ್ಯೆ ನೇತ್ರಾವತಿ, ಮಾಜಿ ಅಧ್ಯಕ್ಷ ಚನ್ನವೀರಪ್ಪ, ಜಿಲ್ಲಾ ಸಹಕಾರ ಬ್ಯಾಂಕಿನ ಗಿರೀಶ್, ಪ್ರೇಮಮ್ಮ, ಕಾರ್ಲೇ ಇಂದ್ರೇಶ್, ರೇಖಾ, ಪುಷ್ಪ, ಜೆಡಿಎಸ್ ಮುಖಂಡ ಕಿರಣ್‍ರಾಜ್ ಇತರರಿದ್ದರು.

 

Translate »