ಮೈಸೂರು-ಕೊಡಗಿನಿಂದ ರಾಹುಲ್ ಸ್ಪರ್ಧೆ?
ಮೈಸೂರು

ಮೈಸೂರು-ಕೊಡಗಿನಿಂದ ರಾಹುಲ್ ಸ್ಪರ್ಧೆ?

March 17, 2019

ಮೈಸೂರು: ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಲು ಆಹ್ವಾನಿಸಿರುವ ಸಿದ್ದರಾಮಯ್ಯ ಅವರ ನಿರ್ಧಾರದ ಬಗ್ಗೆ ಪಕ್ಷದ ವಲಯದಲ್ಲಿ ತೀವ್ರ ಅಚ್ಚರಿ ವ್ಯಕ್ತವಾಗಿದ್ದು, ಒಂದೊಮ್ಮೆ ರಾಹುಲ್‍ಗಾಂಧಿ ಒಪ್ಪಿದರೆ ಯಾವ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಬಹುದು ಎಂಬುದರ ಬಗ್ಗೆ ಈಗ ಕುತೂಹಲ ಮೂಡಿ

ಈಗಾಗಲೇ ಸ್ಪರ್ಧಿಸಲು ನಿರ್ಧರಿಸಿರುವ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರ ದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಎರಡು ಕಡೆ ಸ್ಪರ್ಧಿಸುವುದು ಅನಿವಾರ್ಯ ಎಂದು ನಿರ್ಧಸಿರುವ ಕಾಂಗ್ರೆಸ್ ವರಿಷ್ಠರು ಅದಕ್ಕಾಗಿ ಸುರಕ್ಷಿತ ಕ್ಷೇತ್ರವೊಂದರ ತಲಾಷೆಯಲ್ಲಿದ್ದಾರೆ.

ಈ ಮಧ್ಯೆ ರಾಹುಲ್‍ಗಾಂಧಿಯವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆಗಿಳಿಸುವ ಆಲೋಚನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಸಂಬಂಧ ಸಿದ್ದರಾಮಯ್ಯ ಈಗಾಗಲೇ ವಿವಿಧ ಜನಾಂಗದ ಮುಖಂಡರು, ಮಠಾಧಿ ಪತಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ವರಿಷ್ಠ ದೇವೇಗೌಡರ ಬಿಗಿಪಟ್ಟನ್ನು ಲೆಕ್ಕಿಸದೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‍ನಲ್ಲೇ ಉಳಿಸಿಕೊಳ್ಳುವಲ್ಲಿ ಸಿದ್ದ ರಾಮಯ್ಯ ಯಶಸ್ವಿಯಾಗಿದ್ದು, ಒಂದೊಮ್ಮೆ ರಾಹುಲ್ ಇಲ್ಲಿಂದಲೇ ಸ್ಪರ್ಧಿಸಿದರೆ, ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯರ ಪ್ರಾಬಲ್ಯಕ್ಕೆ ಸಾಟಿಯೇ ಇಲ್ಲದಂತಾ ಗುವುದರಲ್ಲಿ ಸಂಶಯವೇ ಇಲ್ಲ. ಈ ಮಧ್ಯೆ ತಮಿಳ್ನಾಡಿನಿಂದ ಸ್ಪರ್ಧಿಸಲು ರಾಹುಲ್‍ಗಾಂಧಿಗೆ ಅಲ್ಲಿನ ಕಾಂಗ್ರೆಸ್ ಘಟಕ ಆಹ್ವಾನ ನೀಡಿದೆ.

Translate »