ರಾಮನಾಥಪುರ: ಬಸ್ ಸಂಚಾರ ಸ್ಥಗಿತ
ಹಾಸನ

ರಾಮನಾಥಪುರ: ಬಸ್ ಸಂಚಾರ ಸ್ಥಗಿತ

January 9, 2019

ರಾಮನಾಥಪುರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಪ್ರತಿನಿತ್ಯ ಜನ ಸಾಮಾನ್ಯರಿಗೆ ಹೊರೆಯಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‍ಗಳು ಬಸ್ ಸ್ಟ್ಯಾಂಡ್ ಮತ್ತು ಡಿಪೋದಲ್ಲಿ ಉಳಿದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಎಂದಿನಂತೆ ಬಸ್‍ಗಳು ವಿವಿಧ ಕಡೆಗಳಿಗೆ ತೆರಳಿದವು. ಕೆಲವು ಗಂಟೆಗಳ ನಂತರÀ ಬೆಳಿಗ್ಗೆ 9ರ ನಂತರ ಬಸ್ ಗಳು ಘಟಕ ಸೇರಿದವು. ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಪಟ್ಟಣದ ಎಲ್ಲಾ ಅಂಗಡಿ, ಹೋಟೆಲ್ ಇನ್ನಿತರ ಎಲ್ಲಾ ಅಂಗಡಿ ಮುಂಗಟ್ಟುಗಳ ವಹಿವಾಟು ಎಂದಿನಂತೆÉ ನಡೆದವು. ಕಾರ್ಮಿಕ ಸಂಘಟನೆಗಳಿಂದ ಸರ್ಕಾರಿ ಬಸ್‍ಗಳ ಸಂಚಾರ ಕೂಡ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಬಹುತೇಕ ಜನರು ಖಾಸಗಿ ವಾಹನಗಳ ಆಶ್ರಯ ಪಡೆದರು.

Translate »