ವ್ಯಕ್ತಿ ಬ್ಯಾಂಕ್ ಖಾತೆಯಿಂದ 1.25 ಲಕ್ಷ ರೂ. ಹಣ ಎಗರಿಸಿದ್ದವನ ಸೆರೆ
ಮೈಸೂರು

ವ್ಯಕ್ತಿ ಬ್ಯಾಂಕ್ ಖಾತೆಯಿಂದ 1.25 ಲಕ್ಷ ರೂ. ಹಣ ಎಗರಿಸಿದ್ದವನ ಸೆರೆ

January 9, 2019

ಮೈಸೂರು: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 1,25,000 ರೂ. ನಗದು ಡ್ರಾ ಮಾಡಿ ತಲೆ ಮರೆಸಿಕೊಂಡಿದ್ದ ನಯವಂಚಕನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ವೆಸ್ಟ್ ಜಾಮ್‍ಪರಸನ್ ಜಿಲ್ಲೆ, ಅಸಾನ್ ಸೋಲ್ ನಗರದ ಯೋಗೇಂದ್ರ ಸಾಹ್ ಮಗ ಬ್ರಜ್ ಕಿಶೋರ್ ಪ್ರಸಾದ್(31) ಬಂಧಿತ ಆರೋಪಿ ಯಾಗಿದ್ದು, ಆತನಿಂದ 1,25,000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೂಲತಃ ವೆಸ್ಟ್‍ಜಾಮ್‍ಪರನ್ ಜಿಲ್ಲೆ, ಜಾನ್ಜಹರಿ ಗ್ರಾಮದವನಾದ ಬ್ರಜ್ ಕಿಶೋರ್ ಪ್ರಸಾದ್, 2018ರ ಅಕ್ಟೋಬರ್ 13ರಂದು ಮೈಸೂರಿನ ಎಂ.ಎಲ್. ಪರಶುರಾಮ್ ಎಂಬುವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಮತ್ತು ಕಾರ್ಪೊರೇಷನ್ ಬ್ಯಾಂಕ್ ಖಾತೆಗಳಿಂದ 1,25,000 ಮೂಲಕ ಡ್ರಾ ಮಾಡಿದ್ದ.

ಬ್ಯಾಂಕ್ ಮ್ಯಾನೇಜರ್ ಮಾದರಿಯಲ್ಲಿ ಫೋನ್ ಮಾಡಿ ಪರಶುರಾಮ್ ಅವರಿಂದ ಎಟಿಎಂ ಕಾರ್ಡ್ ಮೇಲಿನ 6 ಅಂಕಿಗಳ ಸಂಖ್ಯೆ ಮತ್ತು ಓಟಿಪಿ ನಂಬರ್ ಪಡೆದು ತಕ್ಷಣ ಹಣ ಡ್ರಾ ಮಾಡಿ ಆರೋಪಿ ತಲೆಮರೆಸಿಕೊಂಡಿದ್ದ. ನಂತರ ಪರಶುರಾಮ್ ಅವರು ಹಣ ಡ್ರಾ ಮಾಡಲೆಂದು ಬ್ಯಾಂಕಿಗೆ ಹೋದಾಗ ತನ್ನ ಎರಡೂ ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಆಗಿರು ವುದು ತಿಳಿದ ತಕ್ಷಣ ತಾನು ಮೋಸ ಹೋಗಿರುವುದು ತಿಳಿದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ತಂತ್ರಜ್ಞಾನ ಬಳಸಿ ಕಾರ್ಯಾ ಚರಣೆ ನಡೆಸಿದ ಸೈಬರ್ ಕ್ರೈಂ ಠಾಣೆ ಇನ್ಸ್‍ಪೆಕ್ಟರ್ ಎಂ.ಸಿ. ರಾಜಶೇಖರ್, ಸಿಬ್ಬಂದಿಗಳಾದ ಡಿ.ವಿ. ಮುರಳಿ ಗೌಡ, ಲಕ್ಷ್ಮಿಕಾಂತ, ಎಂ.ಶಿವಶಂಕರ್, ಪಿ.ಕುಮಾರ್ ಹಾಗೂ ಮಂಜು ಅವರು, ಸುಳಿವಿನ ಜಾಡು ಹಿಡಿದು ಅಂತಾರಾಜ್ಯ ವಂಚಕ ಬ್ರಜ್ ಕಿಶೋರ್ ಪ್ರಸಾದ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Translate »